Property: ಆಸ್ತಿ, ಜಾಗ ತೆಗೆದುಕೊಳ್ಳುವಾಗ ಈ 5 ವಿಷಯಗಳು ನೆನಪಿರಲಿ...

ಆಸ್ತಿ, ಜಾಗ ಅಥವಾ ಮನೆ ತೆಗೆದುಕೊಳ್ಳಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ನಮ್ಮದೇ ಸ್ವಂತ ಮನೆಯನ್ನು ಕಟ್ಟಿಕೊಳ್ಳಬೇಕು ಎಂದು ಹಲವರು ಕನಸು ಕಾಣುವುದು ಇದೆ. ಆದರೆ, ನೀವು ಯಾವುದೇ ಆಸ್ತಿ ಮಾಡುವುದಾದರೂ ಈ 5 ವಿಷಯಗಳನ್ನು ತಪ್ಪದೆ ಫಾಲೋ ಮಾಡಿ ಇದರಿಂದ ನೀವು ಮುಂದೆ ಮೋಸ ಹೋಗುವುದು ಇಲ್ಲವೇ ಆಸ್ತಿ ವಿಚಾರದಲ್ಲಿ ಸಮಸ್ಯೆ ಆಗುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ.

ಹೌದು ಆಸ್ತಿ ಮಾಡುವುದಕ್ಕೆ ದುಡ್ಡು ಎಷ್ಟು ಇಂಪಾರ್ಟೆಂಟ್‌ ಆಗಿದೆಯೋ ಅದೇ ರೀತಿ ಆಸ್ತಿ ಮಾಡುವಾಗ ತಪ್ಪದೆ ಕೆಲವೊಂದು ವಿಷಯಗಳನ್ನು ನೀವು ಫಾಲೋ ಮಾಡಬೇಕು. ಇದರಿಂದ ನಿಮ್ಮ ಆಸ್ತಿ ಹಾಗೂ ದುಡ್ಡು ಎರಡೂ ಸುರಕ್ಷಿತವಾಗಿರುತ್ತೆ. ಆಸ್ತಿ ಮಾಡುವಾಗ ಫಾಲೋ ಮಾಡಬೇಕಾದ 5 ಪ್ರಮುಖ ವಿಷಯಗಳ ಮಾಹಿತಿ ಇಲ್ಲಿದೆ.

5 Important Things You Must Note When Buying Property and land

ಆಸ್ತಿ ಮಾಡುವುದು ಖಂಡಿತವಾಗಿಯೂ ದೊಡ್ಡ ವಿಷಯ. ಅದೇ ರೀತಿ ಎಲ್ಲಿ ಹಾಗೂ ಏನೆಲ್ಲ ಮುಂಜಾಗ್ರತೆ ವಹಿಸಬೇಕು ಎನ್ನುವುದು ಸಹ ಇಂಪಾರ್ಟೆಂಟ್. ಆಸ್ತಿ ಮಾಡುವಾಗ ನೀವು ಹಲವು ವಿಷಯಗಳನ್ನು ಗಮನಿಸಬೇಕಾಗುತ್ತದೆ. ಅದರಲ್ಲಿ ಐದು ಪ್ರಮುಖ ವಿಷಯಗಳ ಮಾಹಿತಿ ಇಲ್ಲಿದೆ.

ಅವಸರ ಮಾಡಬೇಡಿ: ಮನೆ ಅಥವಾ ಆಸ್ತಿ ಮಾಡಬೇಕು ಅಂತ ಜೀವನ ಪೂರ್ತಿ ಜನ ರಿಸ್ಕ್‌ ತೆಗೆದುಕೊಳ್ಳುವುದು ಇದೆ. ಆ ರೀತಿ ಇರುವಾಗ ಆಸ್ತಿ ಖರೀದಿ ಮಾಡುವುದಕ್ಕೆ ಅವಸರ ಮಾಡಬೇಡಿ. ಸಮಯ ತೆಗೆದುಕೊಂಡು ಎಲ್ಲ ವಿಷಯಗಳ ಬಗ್ಗೆಯೂ ತಾಳ್ಮೆಯಿಂದ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ.

5 Important Things You Must Note When Buying Property and land

ಮಧ್ಯವರ್ತಿಗಳು ಅಥವಾ ಮಾರಾಟ ಮಾಡುವವರು ಕೆಲವೊಮ್ಮೆ ಅವರ ಅವಸರಕ್ಕೆ ಇಲ್ಲವೇ ಏನಾದರೂ ತಪ್ಪುಗಳನ್ನು ಮುಚ್ಚಿಡುವುದಕ್ಕೆ ಆಸ್ತಿ, ಜಾಗ ಮಾರಾಟ ಮಾಡುವುದಕ್ಕೆ ಅವಸರ ಮಾಡುವುದು ಇದೆ. ಇದಕ್ಕೆ ನೀವೂ ಅವಸರದಿಂದ ಖರೀದಿಗೆ ಮುಂದಾಗಬೇಡಿ. ಒಮ್ಮೆ ನಿಮ್ಮ ಕೈಯಿಂದ ದುಡ್ಡು ಹೋದರೆ ಮತ್ತೆ ಪಡೆಯುವುದು ಅಷ್ಟು ಸುಲಭದ ಕೆಲಸವಲ್ಲ ಎನ್ನುವುದು ನೆನಪಿರಲಿ.

ಬೇರೆ ಬೇರೆ ಸಮಯದಲ್ಲಿ ಭೇಟಿ ಕೊಟ್ಟು ನೋಡಿ: ಯಾವುದಾದರೂ ಮನೆ ಅಥವಾ ಜಾಗ ಖರೀದಿ ಮಾಡಬೇಕು ಅಂತ ಡಿಸೈಡ್ ಮಾಡಿದ ಮೇಲೆ ಆ ಜಾಗಕ್ಕೆ ಬೇರೆ ಬೇರೆ ಸಮಯದಲ್ಲಿ ಭೇಟಿ ಕೊಟ್ಟು ನೋಡಿ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ಎರಡು ಮೂರು ಸಮಯದಲ್ಲಿ ಭೇಟಿ ಕೊಟ್ಟು ನೋಡಿ. ಆ ಸಮಯದಲ್ಲಿ ನೀವು ಖರೀದಿ ಮಾಡಬೇಕೆಂದುಕೊಂಡಿರುವ ಆಸ್ತಿ ಜಾಗದಲ್ಲಿ ಗದ್ದಲ, ಬೆಳಕು ಹಾಗೂ ಸುತ್ತಮುತ್ತ ಯಾವ ರೀತಿ ಇದೆ ಎನ್ನುವುದು ತಿಳಿಯುತ್ತದೆ. ತೀರ ಗದ್ದಲ ಅಥವಾ ಇಕ್ಕಟ್ಟಾದ ಜಾಗವಾಗಿದ್ದರೆ ಆ ಜಾಗ ಖರೀದಿ ಮಾಡುವುದನ್ನು ಸ್ಕಿಪ್ ಮಾಡುವುದು ಒಳ್ಳೆಯದು.

ವಕೀಲರು ಇರಲಿ, ಅಭಿಪ್ರಾಯವೂ ಪಡೆಯಿರಿ: ನೀವು ಆಸ್ತಿ ಮಾಡುವಾಗ ಎಚ್ಚರಿಕೆ ವಹಿಸಬೇಕಾದ ಮತ್ತೊಂದು ಪ್ರಮುಖ ವಿಷಯವೆಂದರೆ. ಈ ಪ್ರಕ್ರಿಯೆಗಳು ನಡೆಯುವಾಗ ಸದಾ ನಿಮ್ಮೊಂದಿಗೆ ವಕೀಲರೊಬ್ಬರು ಇರುವಂತೆ ನೋಡಿಕೊಳ್ಳಿ. ಡಾಕ್ಯುಮೆಂಟೇಷನ್ ಪ್ರಕ್ರಿಯೆ ಯಾವ ರೀತಿ ನಡೆಯುತ್ತಿದೆ . ಎಲ್ಲವೂ ಸರಿ ಇದೆಯೇ ಎನ್ನುವುದನ್ನು ಒಂದಕ್ಕೆ ಎರಡು ಬಾರಿ ಪರಿಶೀಲನೆ ಮಾಡಿ. ವಕೀಲರನ್ನು ನೇಮಿಸಿಕೊಳ್ಳುವುದರಿಂದ ಆಸ್ತಿಯಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ ನಿಮಗೆ ಅಲ್ಲೇ ತಿಳಿಯಲಿದೆ.

ಎ - ಖಾತಾ ಸೈಟುಗಳನ್ನೇ ನೋಡಿ: ಆಸ್ತಿ, ಭೂಮಿ ಖರೀದಿ ಮಾಡುವಾಗ ತಪ್ಪದೇ ಆಸ್ತಿ ಎ - ಖಾತಾ ವ್ಯಾಪ್ತಿಯಲ್ಲಿ ಇದೆಯೇ ಎನ್ನುವುದನ್ನು ಪರಿಶೀಲನೆ ಮಾಡಿ. ಬಿ - ಖಾತಾದಲ್ಲಿ ಆಸ್ತಿ ಇದ್ದರೆ ಖಂಡಿತವಾಗಿಯೂ ಒಂದಿಲ್ಲೊಂದು ದಿನ ಸಮಸ್ಯೆ ಆಗುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲ ಬಿ ಖಾತಾದಲ್ಲಿ ಜಾಗಾ ಇದ್ದರೆ. ಬ್ಯಾಂಕ್‌ ಸಾಲ ಹಾಗೂ ಸರ್ಕಾರಿ ಸೌಲಭ್ಯಗಳು ಸಿಗುವುದಕ್ಕೆ ಕಡಿವಾಣ ಬೀಳಲಿದೆ. ಹೀಗಾಗಿ, ಎಚ್ಚರಿಕೆ ವಹಿಸುವುದು ಉತ್ತಮ.

ಅಪಾಯದ ಜಾಗಬೇಡ: ನೀವು ಖರೀದಿ ಮಾಡುವ ಜಾಗ ಯಾವ ಭಾಗದಲ್ಲಿ ಇದೆ. ಇಲ್ಲವೇ ತಗ್ಗು ಪ್ರದೇಶವೇ, ತಿರುವುಗಳಲ್ಲಿ ಇದೆಯೇ ಎನ್ನುವುದನ್ನು ನೋಡಿ. ಅಲ್ಲದೆ ರಾಜಕಾಲುವೆಗಳ ಪಕ್ಕದಲ್ಲಿ ಇದ್ದರೂ ಈ ಆಯ್ಕೆಯನ್ನು ಬಿಡಿ. ಈ ರೀತಿ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಅಥವಾ ಕೊಳಚೆ ನೀರು ನುಗ್ಗಿ ಸಮಸ್ಯೆ ಆಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಅಲ್ಲದೆ ನೀವು ಆಸ್ತಿ ಮಾಡುವ ಜಾಗದಿಂದ ಆಸ್ಪತ್ರೆ, ಮಾರುಕಟ್ಟೆ, ಶಾಲೆ ಹಾಗೂ ಬಸ್‌ ನಿಲ್ದಾಣಗಳು ಸಮೀಪದಲ್ಲಿ ಇರುವಂತೆ ನೋಡಿಕೊಳ್ಳಿ. ಅದೇ ರೀತಿ ಆ ಏರಿಯಾದಲ್ಲಿ ಗದ್ದಲ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ನೀರು ಪೂರೈಕೆ, ನೀರು ಹೋಗುವ ಪ್ರದೇಶ ನೋಡಿ: ನೀವು ಮನೆ ಅಥವಾ ಜಾಗ ಖರೀದಿ ಮಾಡಬೇಕು ಎನ್ನುವ ಪ್ರದೇಶದಲ್ಲಿ ನೀರು ಪೂರೈಕೆ ಅಥವಾ ನೀರು ಸರಬರಾಜು ಯಾವ ರೀತಿ ಇದೆ ಎಂದು ನೋಡಿಕೊಳ್ಳಿ. ಅಲ್ಲದೆ ಅಂತರ್ಜಲ ಮಟ್ಟ ಯಾವ ರೀತಿ ಇದೆ. ನೀರು ಸರಬರಾಜು ಹಾಗೂ ಪೂರೈಕೆ ಸರಿಯಾಗಿ ಇದೆಯೇ ಎಂದು ನೋಡಿಕೊಳ್ಳಿ. ಅಲ್ಲದೆ ಮಳೆ ಬಂದರೆ ನೀರು ಹರಿದು ಹೋಗುವುದಕ್ಕೆ ಜಾಗ ಇದೆಯೇ ಎನ್ನುವುದನ್ನೂ ನೋಡಿಕೊಳ್ಳಿ. ಈ ವಿಷಯಗಳು ತುಂಬಾ ಮುಖ್ಯವಾಗಿವೆ. ಮುಂದೆ ಜಾಗ / ಮನೆ ಖರೀದಿ ಮಾಡಿದ ಮೇಲೆ ಈ ಸಮಸ್ಯೆಗಳು ಎದುರಾದರೆ ಪರಿಹರಿಸಿಕೊಳ್ಳುವುದು ಕಷ್ಟವಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+