ಕರ್ನಾಟಕ: 50 ಸಾವಿರ ಗಡಿ ಸಮೀಪ ಕೋವಿಡ್ ಪ್ರಕರಣ ದೃಢ

ಬೆಂಗಳೂರು, ಜನವರಿ 20: ಕರ್ನಾಟಕದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ರಾಜ್ಯದಲ್ಲಿ ಇಂದು (ಗುರುವಾರ, ಜ.20) ಒಟ್ಟು 47,754 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೇ ವೇಳೆ 29 ಜನರು ಸಾವನ್ನಪ್ಪಿದ್ದಾರೆ.

22,143 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಆಗಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 2,93,231 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ಪ್ರಮಾಣ ಶೇ.18.49 ಮತ್ತು ಸೋಂಕಿನಿಂದ ಸಾಯುವವರ ಸರಾಸರಿ ಶೇ.0.06 ಇದೆ.

ರಾಜ್ಯದಲ್ಲಿ ಈವರೆಗೆ 33,76,953 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, 30,45,177 ಜನರು ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 38,515 ಜನರು ಸಾವನ್ನಪ್ಪಿದ್ದಾರೆ.

47,754 New Covid-19 Cases Reported in Karnataka On January 20

ಬೆಂಗಳೂರು ವರದಿ
ಬೆಂಗಳೂರು ನಗರದಲ್ಲಿ 30,540 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 13,195 ಜನರು ಚೇತರಿಸಿಕೊಂಡಿದ್ದಾರೆ. ಒಂದೇ ದಿನ 8 ಮಂದಿ ಮೃತಪಟ್ಟಿದ್ದಾರೆ. ನಗರದಲ್ಲಿ ಈವರೆಗೆ ಒಟ್ಟು 15,13,024 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 12,94,831 ಜನರು ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಪ್ರಸ್ತುತ 2,01,714 ಸಕ್ರಿಯ ಪ್ರಕರಣಗಳಿವೆ. ಒಟ್ಟು 16,478 ಜನರು ಸಾವನ್ನಪ್ಪಿದ್ದಾರೆ.

ಜಿಲ್ಲಾವಾರು ಕೋವಿಡ್ ಪ್ರಕರಣ
ಬಾಗಲಕೋಟೆ 66, ಬಳ್ಳಾರಿ 952, ಬೆಳಗಾವಿ 442, ಬೆಂಗಳೂರು ಗ್ರಾಮಾಂತರ 974, ಬೆಂಗಳೂರು ನಗರ 30,540, ಬೀದರ್ 311, ಚಾಮರಾಜನಗರ 384, ಚಿಕ್ಕಬಳ್ಳಾಪುರ 522, ಚಿಕ್ಕಮಗಳೂರು 387, ಚಿತ್ರದುರ್ಗ 462, ದಕ್ಷಿಣ ಕನ್ನಡ 974, ದಾವಣಗೆರೆ 152, ಧಾರವಾಡ 698, ಗದಗ 289, ಹಾಸನ 1840, ಹಾವೇರಿ 65, ಕಲಬುರ್ಗಿ 658, ಕೊಡಗು 195, ಕೋಲಾರ 511, ಕೊಪ್ಪಳ 348, ಮಂಡ್ಯ 1512, ರಾಯಚೂರು 329, ರಾಮನಗರ 150, ಶಿವಮೊಗ್ಗ 373, ತುಮಕೂರು 1622, ಉಡುಪಿ 767, ಉತ್ತರ ಕನ್ನಡ 611, ವಿಜಯಪುರ 188, ಯಾದಗಿರಿ 80 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

ಸೋಂಕಿತರ ಸಾವಿನ ವರದಿ
ಬೆಂಗಳೂರು ನಗರ 8, ಕಲಬುರ್ಗಿ, ಮೈಸೂರು, 5, ಬೀದರ್, ತುಮಕೂರು 2, ಕೊಪ್ಪಳ, ದಕ್ಷಿಣ ಕನ್ನಡ, ಮಂಡ್ಯ, ರಾಯಚೂರು, ಉತ್ತರ ಕನ್ನಡ, ಬಾಗಲಕೋಟೆ, ಗದಗ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಶೇ.63 ರಷ್ಟು ಜನ ಹೋಂ ಐಸೋಲೇಷನ್
ಬೆಂಗಳೂರಿನಲ್ಲಿ ಕೊರೊನಾ ಸೋಂಕು ಪ್ರಕರಣಗಳ ಅಬ್ಬರ ಜೋರಾಗಿಯೇ ಇದೆ. ಆದರೆ ಕೊರೊನಾ ಮೂರನೇ ಅಲೆಯ ಲಕ್ಷಣಗಳು ಕಡಿಮೆ ಸ್ವರೂಪದ್ದಾಗಿದ್ದು, ಪರಿಸ್ಥಿತಿ ಬಿಗಡಾಯಿಸಿ ಆಸ್ಪತ್ರೆ ಸೇರುತ್ತಿರುವವರ ಸಂಖ್ಯೆ ಮಾತ್ರ ಕಡಿಮೆ ಇದೆ.

ಬೆಂಗಳೂರಿನ ಹಲವು ಸೋಂಕಿತರು ಮನೆಯಲ್ಲೇ ಪ್ರತ್ಯೇಕವಾಗಿ ಇದ್ದುಕೊಂಡೆ ಕೋವಿಡ್-19ನಿಂದ ಗುಣಮುಖರಾಗುತ್ತಿದ್ದಾರೆ. ಶೇ.63ರಷ್ಟು ಮಂದಿ ಹೋಮ್ ಐಸೋಲೇಷನ್​ನಲ್ಲಿ ಚಿಕಿತ್ಸೆ ಪಡೆದುಕೊಳ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Recommended Video

      ಪಂಜಾಬ್ ಕಾಂಗ್ರೆಸ್ ನಲ್ಲಿ CM ಅಭ್ಯರ್ಥಿ ಗೊಂದಲ:ಸಿಧು ಚನ್ನಿ ನಡುವೆ ರೇಸ್ | Oneindia Kannada

      ರಾಜ್ಯದಲ್ಲಿ1,52,456 ಮಂದಿ ಕೊರೊನಾ ಪೆಷೆಂಟ್​ಗಳು ಮನೆಯಲ್ಲೇ ಐಸೋಲೇಷನ್ ಆಗಿದ್ದಾರೆ. ಅದರಲ್ಲೂ ಹೆಚ್ಚಾಗಿ ಬೆಂಗಳೂರಿನ ಜನರೇ ಮನೆಯಲ್ಲಿ ಪ್ರತ್ಯೇಕವಾಗಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+