ಕರ್ನಾಟಕದಲ್ಲಿ ಕೊರೊನಾ ಮಹಾಸ್ಫೋಟ ಮತ್ತೆ 4196 ಪ್ರಕರಣ ಪತ್ತೆ
ಬೆಂಗಳೂರು, ಜುಲೈ 16: ಕರ್ನಾಟಕದಲ್ಲಿ ಕೊರೊನಾ ಮಹಾಸ್ಫೋಟವಾಗಿದೆ. ಒಂದೇ ದಿನ 4169 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 104 ಮಂದಿ ಮೃತಪಟ್ಟಿದ್ದಾರೆ. ಇಂದು 1263 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ 19729 ಮಂದಿ ಗುಣಮುಖರಾಗಿದ್ದಾರೆ.
Recommended Video
30655 ಪ್ರಕರಣಗಳು ಸಕ್ರಿಯವಾಗಿವೆ. ಒಟ್ಟು 51,422 ಮಂದಿ ಕೊರೊನಾ ಸೋಂಕಿತರಿದ್ದಾರೆ. ಇದುವರೆಗೆ 1032 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಇಂದು ಒಟ್ಟು 23451 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇದುವರೆಗೆ ಒಟ್ಟು 9,25,477 ಮಂದಿಯ ಪರೀಕ್ಷೆ ನಡೆಸಲಾಗಿದೆ.ಅದರಲ್ಲಿ ಇಂದು 4169 ಪ್ರಕರಣಗಳು ದೃಢಪಟ್ಟಿವೆ.

ಬೆಂಗಳೂರಿನಲ್ಲಿ 2344, ದಕ್ಷಿಣ ಕನ್ನಡ 238, ಧಾರವಾಡ 176, ವಿಜಯಪುರ 144, ಮೈಸೂರು 130, ಕಲಬುರಗಿ, 123, ಉಡುಪಿ 113, ರಾಯಚೂರು 101, ಬೆಳಗಾವಿ 92, ಉತ್ತರ ಕನ್ನಡ 79, ಚಿಕ್ಕಬಳ್ಳಾಪುರ 77, ಬೀದರ್ 53, ಶಿವಮೊಗ್ಗ 46, ಬಳ್ಳಾರಿ 44, ಗದಗ 44, ಕೋಲಾರ 43, ಬಾಗಲಕೋಟೆ 39, ಯಾದಗಿರಿ 34, ಕೊಪ್ಪಳ 32, ಹಾಸನ 31, ಬೆಂಗಳೂರು ಗ್ರಾಮಾಂತರ 31, ಚಿಕ್ಕಮಗಳೂರು 30, ದಾವಣಗೆರೆ 25, ಚಿತ್ರದುರ್ಗ 21, ಹಾವೇರಿ 18, ಕೊಡಗು 18, ಚಾಮರಾಜನಗರ 16, ತುಮಕೂರು 12, ಮಂಡ್ಯದಲ್ಲಿ 11 ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications