2nd PUC Examination 2024: ದ್ವಿತೀಯ ಪಿಯುಸಿ ಪರೀಕ್ಷೆ-3ಕ್ಕೆ ಕ್ಷಣಗಣನೆ- ಯಾವ್ಯಾವ ಪತ್ರಿಕೆ ಯಾವತ್ತು, ವೇಳಾಪಟ್ಟಿ ಇಲ್ಲಿದೆ
2nd PUC Examination 2024: ದ್ವಿತೀಯ ಪಿಯುಸಿ ಪರೀಕ್ಷೆ-3ಕ್ಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಿದ್ಧತೆ ಪೂರ್ಣಗೊಳಿಸಿದ್ದು, ನಿಗದಿತ ವೇಳಾಪಟ್ಟಿಯಂತೆ ಜೂನ್ 24ರಿಂದ ಜುಲೈ 5ರವರೆಗೆ ಪರೀಕ್ಷೆ ನಡೆಯಲಿದೆ. ಹಾಗಾದರೆಯಾವ್ಯಾವ ಪತ್ರಿಕೆ ಯಾವತ್ತು ಇರಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಗೆ ಮೂರು ವಾರ್ಷಿಕ ಪರೀಕ್ಷಾ ಪದ್ಧತಿ ಜಾರಿಯಾದ ಬಳಿಕ ನಡೆಯುತ್ತಿರುವ ದ್ವಿತೀಯ ಪಿಯುಸಿ ಮೊದಲ ವರ್ಷದ 3ನೇ ಪರೀಕ್ಷೆಗೆ ರಾಜ್ಯದಲ್ಲಿ ಒಟ್ಟು 248 ಪರೀಕ್ಷಾ ಕೇಂದ್ರಗಳನ್ನು ರಚನೆ ಮಾಡಲಾಗಿದೆ. ಸಿಸಿಟಿವಿ ಕಣ್ಗಾವಲಿನಲ್ಲಿ ಪರೀಕ್ಷೆಗಳು ನಡೆಯಲಿದ್ದು, ಜಿಲ್ಲಾ ಮತ್ತು ತಾಲೂಕು ಹಂತದಲ್ಲಿ ವಿಚಕ್ಷಣ ದಳಗಳನ್ನು ನಿಯೋಜಿಸಲಾಗಿದೆ.

ಕಲಾ ವಿಭಾಗದಲ್ಲಿ 19,113 ಬಾಲಕರು, 11,698 ಬಾಲಕಿಯರು ಸೇರಿ 30,811 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 8,817 ಬಾಲಕರು, 10,966 ಬಾಲಕಿಯರು ಸೇರಿ ಒಟ್ಟು 19,783 ವಿದ್ಯಾರ್ಥಿಗಳು ಮತ್ತು ವಾಣಿಜ್ಯ ವಿಭಾಗದಲ್ಲಿ 16,428 ಬಾಲಕರು, 8,973 ಬಾಲಕಿಯರು ಸೇರಿ ಒಟ್ಟು 25,401 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಒಟ್ಟಾರೆ, 44,358 ಬಾಲಕರು, 31,637 ಬಾಲಕಿಯರು ಸೇರಿ 75,995 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ-3 ಬರೆಯಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಯಾವ್ಯಾವತ್ತು ಯಾವ ಪತ್ರಿಕೆ: ಜೂನ್ 24ರಂದು ಪ್ರಥಮ ಭಾಷೆ ಕನ್ನಡ, ಜೂನ್ 25ರಂದು ದ್ವಿತೀಯ ಭಾಷೆ ಇಂಗ್ಲಿಷ್, ಜೂನ್ 26ರಂದು ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ, ಭೂಗರ್ಭಶಾಸ್ತ್ರ, ಜೀವಶಾಸ್ತ್ರ, ಜೂನ್ 27 ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಜೂನ್ 28 ಅರ್ಥಶಾಸ್ತ್ರ, ರಸಾಯನಶಾಸ್ತ್ರ, ಜೂನ್ 29 ಇತಿಹಾಸ/ಭೌತಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.
ಇನ್ನು ಜುಲೈ 01ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಗೃಹ ವಿಜ್ಞಾನ ಜುಲೈ 02 ಗಣಿತ, ಶಿಕ್ಷಣಶಾಸ್ತ್ರ, ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಜುಲೈ 03 ಮೂಲಗಣಿತ, ಮನಃಶಾಸ್ತ್ರ, ಭೂಗೋಳಶಾಸ್ತ್ರ, ಜುಲೈ 04 ಹಿಂದಿ, ಜುಲೈ 05ರಂದು ಮಾಹಿತಿ ತಂತ್ರಜ್ಞಾನ, ಹೆಲ್ತ್ ಕೇರ್ ಪರೀಕ್ಷೆಗಳು ನಡೆಯಲಿವೆ.












Click it and Unblock the Notifications