ಕರ್ನಾಟಕದಲ್ಲಿ ಭಯ: ಒಂದೇ ದಿನ 2886 ಮಂದಿಗೆ ಸೋಂಕು!
ಬೆಂಗಳೂರು, ಮಾರ್ಚ್ 27: ಕರ್ನಾಟಕದಲ್ಲಿ ಮತ್ತೊಮ್ಮೆ ಕೊರೊನಾವೈರಸ್ ಸ್ಫೋಟಗೊಂಡಿದೆ. ಕಳೆದ 24 ಗಂಟೆಗಳಲ್ಲೇ ಪತ್ತೆಯಾಗಿರುವ ಸೋಂಕಿತ ಪ್ರಕರಣಗಳ ಸಂಖ್ಯೆಯು ಐದು ತಿಂಗಳ ದಾಖಲೆಗಳನ್ನು ಪೀಸ್ ಪೀಸ್ ಮಾಡಿದೆ.
ಒಂದೇ ದಿನದಲ್ಲಿ 2886 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 983930ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 1179 ಸೋಂಕಿತರು ಗುಣಮುಖರಾಗಿದ್ದು, ರಾಜ್ಯದಲ್ಲಿ ಈವರೆಗೂ 950167 ಸೋಂಕಿತರು ಗುಣಮುಖರಾಗಿದ್ದಾರೆ.
ಬೆಂಗಳೂರಿನ ಈ ವಲಯಗಳೇ ಕೊರೊನಾವೈರಸ್ ಸೋಂಕಿನ ವ್ಯೂಹ!
ಒಂದು ದಿನದಲ್ಲಿ ಮಹಾಮಾರಿಗೆ 8 ಮಂದಿ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 12492ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ ರಾಜ್ಯದಲ್ಲಿ 21252 ಕೊರೊನಾವೈರಸ್ ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಪಷ್ಟಪಡಿಸಿದೆ.

ಬೆಂಗಳೂರಿನಲ್ಲೇ ಅತಿಹೆಚ್ಚು ಮಂದಿಗೆ ಸೋಂಕು:
ರಾಜ್ಯದಲ್ಲಿ ಒಟ್ಟು 2886 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 11, ಬಳ್ಳಾರಿ 21, ಬೆಳಗಾವಿ 16, ಬೆಂಗಳೂರು ಗ್ರಾಮಾಂತರ 58, ಬೆಂಗಳೂರು 1820, ಬೀದರ್ 82, ಚಾಮರಾಜನಗರ 7, ಚಿಕ್ಕಬಳ್ಳಾಪುರ 10, ಚಿಕ್ಕಮಗಳೂರು 40, ಚಿತ್ರದುರ್ಗ 9, ದಕ್ಷಿಣ ಕನ್ನಡ 39, ದಾವಣಗೆರೆ 4, ಧಾರವಾಡ 41, ಗದಗ 13, ಹಾಸನ 43, ಹಾವೇರಿ 2, ಕಲಬುರಗಿ 147, ಕೊಡಗು 7, ಕೋಲಾರ 33, ಕೊಪ್ಪಳ 6, ಮಂಡ್ಯ 16, ಮೈಸೂರು 131, ರಾಯಚೂರು 10, ರಾಮನಗರ 5, ಶಿವಮೊಗ್ಗ 10, ತುಮಕೂರು 80, ಉಡುಪಿ 156, ಉತ್ತರ ಕನ್ನಡ 14, ವಿಜಯಪುರ 41, ಯಾದಗಿರಿ 9 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications