• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನ ಈ ವಲಯಗಳೇ ಕೊರೊನಾವೈರಸ್ ಸೋಂಕಿನ ವ್ಯೂಹ!

|

ಬೆಂಗಳೂರು, ಮಾರ್ಚ್ 26: ಕರ್ನಾಟಕದಲ್ಲಿ ಪತ್ತೆಯಾಗುತ್ತಿರುವ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಪೈಕಿ ರಾಜ್ಯ ರಾಜಧಾನಿ ಬೆಂಗಳೂರಿನದ್ದೇ ಸಿಂಹಪಾಲು. ಪ್ರತಿನಿತ್ಯ ಒಟ್ಟು ಸೋಂಕಿತ ಪ್ರಕರಣ ಪೈಕಿ 80ಕ್ಕಿಂತ ಹೆಚ್ಚು ಪ್ರಕರಣಗಳು ಬೆಂಗಳೂರು ನಗರವೊಂದರಲ್ಲೇ ಪತ್ತೆಯಾಗುತ್ತಿವೆ.

ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಸೋಂಕಿತ ವಲಯಗಳ ಸಂಖ್ಯೆ ಏರಿಕೆಯಾಗಿದೆ. ಮಾರ್ಚ್ 12ರಿಂದ ನಿರಂತರವಾಗಿ ಕೊವಿಡ್-19 ಸೋಂಕಿತ ವಲಯಗಳ ಸಂಖ್ಯೆ ಹೆಚ್ಚುತ್ತಲೇ ಸಾಗುತ್ತಿದ್ದು, ಮಾ.23ರಂದು ನಾಲ್ಕು ವಲಯ, ಮಾ. 18ರಂದು ಏಳು ವಲಯಗಳನ್ನು ಪತ್ತೆ ಮಾಡಲಾಗಿದೆ. ಕಳೆದ 13 ದಿನಗಳಲ್ಲೇ 23 ಕೊವಿಡ್-19 ಸೋಂಕಿತ ವಲಯಗಳು ಪತ್ತೆ ಮಾಡಿ ಗುರುತಿಸಲಾಗಿದೆ. ಈ ಪೈಕಿ ಬೆಂಗಳೂರು ಪಶ್ಚಿಮ, ದಾಸರಹಳ್ಳಿ ಮತ್ತು ಯಲಹಂಕ ವ್ಯಾಪ್ತಿಯಲ್ಲಿ ಹೆಚ್ಚು ಅಪಾಯಕಾರಿ ಕೊರೊನಾವೈರಸ್ ವಲಯಗಳನ್ನು ಪತ್ತೆ ಮಾಡಲಾಗಿದೆ.

ಏನಿದು ಕೊರೊನಾ ಕಾಟ ತಪ್ಪಿಸಲು ಭಾರತ ಕಂಡುಕೊಂಡ ಮಾರ್ಗ?

ಕಳೆದ 24 ಗಂಟೆಗಳಲ್ಲಿ ಬೆಂಗಳೂರು ನಗರವೊಂದರಲ್ಲೇ 1623 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 4,22,859ಕ್ಕೆ ಏರಿಕೆಯಾಗಿದ್ದು, 12472 ಸಕ್ರಿಯ ಪ್ರಕರಣಗಳಿರುವುದು ವರದಿಯಾಗಿದೆ. ಬೆಂಗಳೂರಿನಲ್ಲಿ ಇರುವ ಕೊವಿಡ್-19 ಸೋಂಕಿನ ವಲಯಗಳಿಗೆ ಸಂಬಂಧಿಸಿದ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಕೊವಿಡ್-19 ವಲಯ ಮತ್ತು ಪ್ರಕರಣ:

ವಲಯ - ಕೊವಿಡ್-19 ಪ್ರಕರಣ - ವಾರ್ಡ್ ಸಂಖ್ಯೆ

ಬೆಂ. ದಕ್ಷಿಣ - 8 - 164

ಬೆಂ. ಪಶ್ಚಿಮ - 28 - 45, 64, 94,

ದಾಸರಹಳ್ಳಿ - 55 - 12, 15, 39, 41, 70,

ಬೆಂ.ಪೂರ್ವ - 17 - 90, 110, 113

   Jarkiholi CD Lady, ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದು ಯಾಕೆ ? | Ramesh Jarkiholi | Oneindia Kannada

   ಯಲಹಂಕ - 45, - 2, 3, 4, 5, 6, 9, 10

   English summary
   Covid-19: In Just 13 Days There 23 Containment Zones Declared In Bengaluru. Here Are The List, Take A Look.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X