ಬ್ರೇಕಿಂಗ್; ಕರುನಾಡಿನಲ್ಲಿ ಒಟ್ಟು 7734 ಮಂದಿಗೆ ಕೊರೊನಾ ವೈರಸ್!
ಬೆಂಗಳೂರು, ಜೂನ್.17: ಕರ್ನಾಟಕದಲ್ಲಿ ನೊವೆಲ್ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ 204 ಮಂದಿಗೆ ಕೊವಿಡ್-19 ಸೋಂಕು ತಗಲಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7734ಕ್ಕೆ ಏರಿಕೆಯಾಗಿದೆ.
Recommended Video
ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೊರೊನಾ ವೈರಸ್ ಗೆ ಸಂಬಂಧಿಸಿದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಈ ವೇಳೆ ರಾಜ್ಯದಲ್ಲಿ ಮಹಾಮಾರಿಗೆ ಎಂಟು ಮಂದಿ ಪ್ರಾಣ ಬಿಟ್ಟಿದ್ದು, ಕೊರೊನಾ ವೈರಸ್ ನಿಂದ ರಾಜ್ಯದಲ್ಲಿ ಉಸಿರು ಚೆಲ್ಲಿದವರ ಸಂಖ್ಯೆ 102ಕ್ಕೆ ಏರಿಕೆಯಾಗಿದೆ.
ಕರ್ನಾಟಕದ ಜನರು ಖುಷಿಪಡುವ ವಿಚಾರ ಅಂದ್ರೆ 204 ಹೊಸ ಪ್ರಕರಣಗಳು ಪತ್ತೆಯಾಗಿದ್ದರೆ 348 ಮಂದಿ ಕೊರೊನಾ ವೈರಸ್ ಸೋಂಕಿತರ ಆರೋಗ್ಯ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

ಕರ್ನಾಟಕದಲ್ಲಿ ಜಿಲ್ಲಾವಾರು ಸೋಂಕಿತ ಪ್ರಕರಣ:
ಕರ್ನಾಟಕದಲ್ಲಿ ಒಟ್ಟು 204 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಬೆಂಗಳೂರು ನಗರ - 55, ಯಾದಗಿರಿ - 37, ಬಳ್ಳಾರಿ - 29, ಕಲಬುರಗಿ -19, ಬೀದರ್ -12, ದಕ್ಷಿಣ ಕನ್ನಡ - 8, ಧಾರವಾಡ - 8, ಮಂಡ್ಯ - 7, ಹಾಸನ - 5, ಉಡುಪಿ - 4, ಬಾಗಲಕೋಟೆ - 4, ಶಿವಮೊಗ್ಗ -4, ದಾವಣಗೆರೆ - 3, ಚಿಕ್ಕಬಳ್ಳಾಪುರ - 3, ಉತ್ತರ ಕನ್ನಡ -3, ರಾಯಚೂರು - 1, ಮೈಸೂರು -1, ಬೆಂಗಳೂರು ಗ್ರಾಮಾಂತರ - 1 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
ಬುಧವಾರ ಜಿಲ್ಲಾವಾರು ಗುಣಮುಖ ಪ್ರಕರಣಗಳು:
ಕರ್ನಾಟಕದಲ್ಲಿ ಒಂದೇ ದಿನ ಬರೋಬ್ಬರಿ 348 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಯಾದಗಿರಿ - 112, ಕಲಬುರಗಿ - 100, ಉಡುಪಿ - 87, ಶಿವಮೊಗ್ಗ - 15, ವಿಜಯಪುರ -14, ಬೆಂಗಳೂರು ಗ್ರಾಮಾಂತರ - 9, ಮಂಡ್ಯ -6, ದಾವಣಗೆರೆ - 2, ಕೊಪ್ಪಳ -2, ಚಿಕ್ಕಮಗಳೂರು -1 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿದ್ದಾರೆ.












Click it and Unblock the Notifications