Karnataka Election: 2018ರ ಚುನಾವಣೆಯಲ್ಲಿ ರಾಜಧಾನಿಯಲ್ಲಿ ಮೂರು ಪಕ್ಷಗಳು ಗೆದ್ದ ಸೀಟೆಷ್ಟು?

ಯಾವುದೇ ಪಕ್ಷಗಳಿಗೆ ಸರಕಾರ ನಡೆಸಲು ಬೆಂಗಳೂರು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಪಡೆಯುವ ಸೀಟುಗಳು ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಯಾಕೆಂದರೆ, ಈ ಭಾಗದಲ್ಲಿರುವ ಒಟ್ಟು ಅಸೆಂಬ್ಲಿ ಕ್ಷೇತ್ರಗಳ ಸಂಖ್ಯೆ. ಹಾಗಾಗಿ, ಮೂರೂ ಪಕ್ಷಗಳು ರಾಜಧಾನಿಯಲ್ಲಿ ಮೇಲುಗೈ ಸಾಧಿಸಲು ವಿಶೇಷ ಪ್ರಯತ್ನವನ್ನು ನಡೆಸುತ್ತದೆ.

ಮತದಾನದ ದಿನ ಎನ್ನುವುದು ಬೆಂಗಳೂರಿಗರಿಗೆ ರಜೆಯ ದಿನದ ರೀತಿ ಎನ್ನುವ ಆಪಾದನೆ ಪ್ರತೀ ಬಾರಿಯೂ ಕೇಳಿ ಬರುತ್ತದೆ. ಅದು, 2018ರ ಚುನಾವಣೆಯಲ್ಲೂ ಮುಂದುವರಿದಿತ್ತು. ಬೆಂಗಳೂರು ನಗರ, ಸೆಂಟ್ರಲ್, ಉತ್ತರ ಮತ್ತು ದಕ್ಷಿಣದಲ್ಲಿ ಒಟ್ಟಾರೆಯಾಗಿ ಶೇ. 40 ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಶೇ. 62 ಮತದಾನವಾಗಿತ್ತು.

2018-assembly-elections-bengaluru-urban-rural-party-tally

ಬೆಂಗಳೂರಿನಲ್ಲಿರುವ ಬಹುತೇಕರು ಮೂಲ ನಗರವಾಸಿಗಳಲ್ಲ, ಅವರ ವೋಟರ್ ಐಡಿ ಅವರವರ ಊರಿನಲ್ಲಿ ಇರುವುದರಿಂದ ವೋಟಿಂಗ್ ಪರ್ಸೆಂಟೇಜ್ ಕಮ್ಮಿ ಇರುತ್ತದೆ ಎನ್ನುವ ಸಮರ್ಥನೆಯೂ ಕೇಳಿ ಬರುತ್ತಿದೆ. ಈಗ, ಮತ್ತೆ ವಿಧಾನಸಭಾ ಚುನಾವಣೆ ಎದುರಾಗುತ್ತಿದೆ, ವಾರದ ಮಧ್ಯದ ದಿನ ಅಂದರೆ ಬುಧವಾರ (ಮೇ 10) ಚುನಾವಣೆ ನಡೆಯಲಿದೆ. ಮತ್ತೆ ಬೆಂಗಳೂರಿಗರು ಮತಗಟ್ಟೆಗೆ ಹೋಗುತ್ತಾರಾ ಎನ್ನುವುದು ಕಾದು ನೋಡಬೇಕಾದ ವಿಚಾರ.

ಬೆಂಗಳೂರು ನಗರ ಮತ್ತು ಗ್ರಾಮೀಣ ಭಾಗವನ್ನು ಸೇರಿಸಿ ಒಟ್ಟು ನಾಲ್ಕು ಲೋಕಸಭಾ ಕ್ಷೇತ್ರಗಳಿವೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 28, ಗ್ರಾಮೀಣ ಭಾಗದಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ. ಒಟ್ಟು 32 ಕ್ಷೇತ್ರಗಳನ್ನು ಬೆಂಗಳೂರು ಹೊಂದಿರುವುದರಿಂದ ರಾಜಧಾನಿಯಲ್ಲಿ ಹೆಚ್ಚು ಸ್ಥಾನವನ್ನು ಗೆಲ್ಲಲು ರಾಜಕೀಯ ಪಕ್ಷಗಳು ಹೆಚ್ಚಿನ ಪ್ರಯತ್ನವನ್ನು ಮಾಡುತ್ತವೆ.

2018-assembly-elections-bengaluru-urban-rural-party-tally

ಬೆಂಗಳೂರು ಹಿಂದೆ ಹಳೇ ಮೈಸೂರು ಭಾಗವಾಗಿದ್ದರೂ, ಈಗ ನಗರವನ್ನು ಪ್ರತ್ಯೇಕ ವಿಭಾಗವನ್ನಾಗಿ ಮಾಡಲಾಗಿದೆ. ನಗರ ಮತ್ತು ಗ್ರಾಮೀಣ ಭಾಗದ ಒಟ್ಟು 32ಕ್ಷೇತ್ರಗಳ ಪೈಕಿ ಬಿಜೆಪಿ 15, ಕಾಂಗ್ರೆಸ್ 14 ಮತ್ತು 3 ಕ್ಷೇತ್ರಗಳಲ್ಲಿ ಜೆಡಿಎಸ್ ತಮ್ಮ ಶಾಸಕರನ್ನು ಹೊಂದಿದೆ. ಇದು, ಆಪರೇಶನ್ ಕಮಲದ ನಂತರದ ಪಕ್ಷಗಳ ಬಲಾಬಲವಾಗಿದೆ.

ಇದಕ್ಕೆ ಮೊದಲು ಮಹಾಲಕ್ಷ್ಮೀ ಲೇಔಟ್ ನಿಂದ ಜೆಡಿಎಸ್ಸಿನ ಗೋಪಾಲಯ್ಯ, ಯಶವಂತಪುರದಿಂದ ಕಾಂಗ್ರೆಸ್ಸಿನ ಎಸ್.ಟಿ.ಸೋಮಶೇಖರ್, ಕೆ.ಆರ್.ಪುರಂ ನಿಂದ ಕಾಂಗ್ರೆಸ್ಸಿನ ಬೈರತಿ ಬಸವರಾಜ್ ಗೆಲುವು ಸಾಧಿಸಿದ್ದರು. ಇದಾದ ನಂತರ ನಡೆದ ಮರುಚುನಾವಣೆಯಲ್ಲಿ ಇವರೆಲ್ಲರೂ ಬಿಜೆಪಿಯಿಂದ ಗೆಲುವು ಕಂಡಿದ್ದರು.

ಜಾತ್ಯತೀತ ಜನತಾದಳ ದೇವನಹಳ್ಳಿ, ನೆಲಮಂಗಲ ಮತ್ತು ದಾಸರಹಳ್ಳಿ ಕ್ಷೇತ್ರದಲ್ಲಿ ತಮ್ಮ ಶಾಸಕರನ್ನು ಹೊಂದಿದೆ. ಇನ್ನು, ಕಾಂಗ್ರೆಸ್, ಬ್ಯಾಟರಾಯನಪುರ, ಹೆಬ್ಬಾಳ, ಪುಲಿಕೇಶಿ ನಗರ, ಸರ್ವಜ್ಞ ನಗರ, ಶಿವಾಜಿನಗರ, ಶಾಂತಿ ನಗರ, ಗಾಂಧಿ ನಗರ, ವಿಜಯನಗರ, ಚಾಮರಾಜಪೇಟೆ, ಬಿ.ಟಿ.ಎಂ ಲೇಔಟ್, ಜಯನಗರ, ಆನೇಕಲ್, ಹೊಸಕೋಟೆ ಮತ್ತು ದೊಡ್ಡಬಳ್ಳಾಪುರದಲ್ಲಿ ಕೈ ಪಕ್ಷದ ಶಾಸಕರಿದ್ದಾರೆ.

ಯಲಹಂಕ, ಕೆ.ಆರ್.ಪುರ, ಯಶವಂತಪುರ, ಆರ್.ಆರ್.ನಗರ, ಮಹಾಲಕ್ಷ್ಮೀ ಲೇಔಟ್, ಮಲ್ಲೇಶ್ವರಂ, ಸಿ.ವಿ.ರಾಮನ್ ನಗರ, ರಾಜಾಜಿ ನಗರ, ಗೋವಿಂದರಾಜ ನಗರ, ಚಿಕ್ಕಪೇಟೆ, ಪದ್ಮನಾಭ ನಗರ, ಮಹದೇವಪುರ, ಬೊಮ್ಮನಹಳ್ಳಿ, ಬಸವನಗುಡಿ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ.

ಜಿಲ್ಲೆ ಒಟ್ಟು ಕ್ಷೇತ್ರಗಳು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಇತರರು
ಬೆಂಗಳೂರು ಗ್ರಾಮಾಂತರ 04 00 02 02 00
ಬೆಂಗಳೂರು ನಗರ 28 15 12 01 00

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+