Breaking: ಬೆಂಗಳೂರಿನಲ್ಲಿ ಬರೋಬ್ಬರಿ 2053 ಮಂದಿ ಕೊರೊನಾ ಸೋಂಕಿತರು ಪತ್ತೆ

ಬೆಂಗಳೂರು, ಜನವರಿ 04: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ರಾಜ್ಯದಲ್ಲಿ ಒಂದೇ ದಿನ 2479 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಅದರಲ್ಲಿ 2053 ಮಂದಿ ಬೆಂಗಳೂರಿನಲ್ಲೇ ಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

2,479 New Covid-19 Cases Reported In Karnataka On 04 January 2022

ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.2.9ರಷ್ಟಿದೆ, ಇಂದು ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿಲ್ಲ, ಇದುವರೆಗೂ ಒಟ್ಟು 77 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದೆ. ನಾಲ್ಕು ಮಂದಿ ಮೃತಪಟ್ಟಿದ್ದಾರೆ. 95,391 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ.

ರಾಜ್ಯದಲ್ಲಿ ಒಂದೇ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಶೇ. 0.99ರಷ್ಟು ಹೆಚ್ಚಾಗಿದೆ. ಹಾಗಾಗಿ ಇದು ಮೂರನೇ ಅಲೆ ಎಂದೇ ಹೇಳಬಹುದು ಎಂದು ಸಚಿವ ಕೆ ಸುಧಾಕರ್ ಹೇಳಿದ್ದಾರೆ. ಸೋಮವಾರ ಕೊರೊನಾ ಸೋಂಕಿತ ಪ್ರಕರಣಗಳು ಶೇ.1.60ರಷ್ಟಿತ್ತು ಅದು ಈಗ 2.90ನಷ್ಟು ಏರಿಕೆಯಾಗಿದೆ.ಕಳೆದ 1 ವಾರದಿಂದ ಬೆಂಗಳೂರಲ್ಲಿ ಡೆಡ್ಲಿ ಕೊರೊನಾ ಆರ್ಭಟ ಹೆಚ್ಚಾಗಿದೆ. ಇದು 3ನೇ ಅಲೆ ಬರೋದು ಪಕ್ಕಾ ಎನ್ನುವಂತೆ ಮಾಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರೀಕ್ಷೆಗೂ ಮೀರಿ ಕೊರೊನಾ ಕೇಸ್ ಹಾಗೂ ಪಾಸಿಟಿವಿಟಿ ರೇಟ್ ಹೆಚ್ಚಳವಾಗಿದೆ. ಇದು ಜನರಲ್ಲಿ ಎರಡೆರಡು ರೀತಿ ಭಯಕ್ಕೆ ಕಾರಣವಾಗಿದೆ.

ಒಂದು ಕಡೆ ಆಸ್ಪತ್ರೆಗಳು ದಿಢೀರ್ ತುಂಬಿ ತುಳುಕುವ ಪರಿಸ್ಥಿತಿ ಎದುರಾಗಿದ್ದರೆ, ಮತ್ತೊಂದೆಡೆ ಇನ್ನೊಮ್ಮೆ ಲಾಕ್ ಡೌನ್ ಆತಂಕ ಜನಸಾಮಾನ್ಯರ ನಿದ್ದೆಗೆಡಿಸಿದೆ. ಕಳೆದ 2 ವರ್ಷಗಳಿಂದ ಇದೇ ರೀತಿ ಕೊರೊನಾ ವೈರಸ್ ಎಲ್ಲರನ್ನೂ ಸಂಕಷ್ಟದ ಬಲೆಗೆ ನೂಕುತ್ತಿದೆ.

ಮೊದಲೇ ಎಚ್ಚರಿಸಿದ್ದ ತಜ್ಞರು: ಕೊರೊನಾ 2ನೇ ಅಲೆ ಮುಗಿಯುತ್ತಿದ್ದಂತೆ ತಜ್ಞರು 3ನೇ ಅಲೆ ಬಗ್ಗೆ ಎಚ್ಚರಿಕೆ ನೀಡಿದ್ದರು. ಆದರೆ ಆರಂಭದಲ್ಲಿ ಕಂಟ್ರೋಲ್ ಆಗಿದ್ದ ಕೇಸ್ ಗಳು ಈಗ ದಿಢೀರ್ ಏರಿಕೆ ಕಾಣುತ್ತಿವೆ.

ಇದೇ ರೀತಿ ಇನ್ನಷ್ಟು ದಿನ ಪಾಸಿಟಿವಿಟಿ ದರ ಏರಿಕೆಯಾದ್ರೆ ಬೆಂಗಳೂರು ನಗರ ಲಾಕ್ ಆಗೋದು ಫಿಕ್ಸ್ ಎಂಬ ಪರಿಸ್ಥಿತಿ ಈಗಾಗಲೇ ನಿರ್ಮಾಣವಾಗಿದೆ. ಏಕೆಂದರೆ ರಾಜಧಾನಿಯಲ್ಲಿ ಊಹೆಗೂ ಮೀರಿ ಪಾಸಿಟಿವಿಟಿ ರೇಟ್ ಏರಿಕೆಯಾಗಿದೆ.

ಡಿಸೆಂಬರ್ 27ರಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾಸಿಟಿವಿಟಿ ದರ ಶೇ.0.57ರಷ್ಟು ಇತ್ತು. ಆದ್ರೆ ಈಗ ಬೆಂಗಳೂರು ನಗರದಲ್ಲಿ ಪಾಸಿಟಿವಿಟಿ ರೇಟ್ ಜನವರಿ 2ಕ್ಕೆ 2.36%ನ್ನು ತಲುಪಿದೆ. ನಿನ್ನೆ ಕೂಡ ಮತ್ತಷ್ಟು ಕೇಸ್ ಏರಿಕೆಯಾಗಿದೆ.

Recommended Video

      ತಜ್ಞರ ಜೊತೆ ಮಹತ್ವದ ಸಭೆ ಮಾಡಲಿರುವ ಮುಖ್ಯ ಮಂತ್ರಿ! | Oneindia Kannada

      ಈಗಾಗಲೇ ತಜ್ಞರು ಪಾಸಿಟಿವಿಟಿ ರೇಟ್ ಶೇ. 5ನ್ನು ದಾಟುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಹೇರುವಂತೆ ಸಲಹೆ ನೀಡಿದ್ದಾರೆ. ಹೀಗಾಗಿ ಬೆಂಗಳೂರಲ್ಲಿ ಇದೇ ರೀತಿ ಕೇಸ್ ಏರಿಕೆಯಾದ್ರೆ ಲಾಕ್ ಡೌನ್ ಆಗೋದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+