50 ವರ್ಷಗಳ ಬಳಿಕ ಮತ್ತೆ ಒಂದಾದ 1976ರ ಬ್ಯಾಚ್‌ ಸ್ನೇಹಿತರು: ಶಾಲೆಗೆ ಭೇಟಿ ನೀಡಿ ಬಾಲ್ಯದ ನೆನಪು ಮೆಲುಕು ಹಾಕಿದ ಅಜ್ಜಂದಿರು

ಪ್ರತಿಯೊಬ್ಬರ ಜೀವನದಲ್ಲೂ ಶಾಲಾ ದಿನಗಳು ಅತ್ಯಂತ ಸುಂದರವಾದ, ಮರೆಯಲಾಗದ ಘಟ್ಟವಾಗಿರುತ್ತದೆ. ಎಷ್ಟೇ ವರ್ಷಗಳು ಕಳೆದರೂ, ಎಷ್ಟೇ ವಯಸ್ಸಾದರೂ ಶಾಲಾ ಸ್ನೇಹಿತರು ಹಾಗೂ ಅಂದಿನ ತುಂಟಾಟಗಳು ಸದಾ ಎಲ್ಲರ ಮನಸ್ಸಿನಲ್ಲಿ ಉಳಿಯುತ್ತವೆ. ಇದೀಗ ಇಂತಹದ್ದೇ ಒಂದು ಕ್ಷಣಕ್ಕೆ ಸಾಕ್ಷಿಯಾದ ಭಾವನಾತ್ಮಕ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಬರೋಬ್ಬರಿ 50 ವರ್ಷಗಳ ಬಳಿಕ ಶಾಲಾ ಸ್ನೇಹಿತರ ಭೇಟಿ ಸಾಧ್ಯವಾಗಿದ್ದು, ಹಳೆಯ ಸ್ನೇಹಿತರ ಗುಂಪೊಂದು ತಾವು ಓದಿದ ಶಾಲೆಗೆ ತೆರಳಿ, ತಮ್ಮ ಬಾಲ್ಯದ ಕ್ಷಣಗಳನ್ನ ಮತ್ತೆ ಮೆಲುಕು ಹಾಕಿದ್ದಾರೆ. 1976ನೇ ಬ್ಯಾಚ್‌ನ ಈ ವಿದ್ಯಾರ್ಥಿಗಳ 'ರಿಯೂನಿಯನ್' ವಿಡಿಯೋ ಇದೀಗ ನೆಟ್ಟಿಗರ ಕಣ್ಮನ ಸೆಳೆಯುತ್ತಿದೆ.

1976 Batch Friends Reunite at School After 50 Years to Relive Golden Childhood Memories Together

1976ರ ಬ್ಯಾಚ್ ಸ್ನೇಹಿತರ ಮಿಲನ

ರಾಕೇಶ್ ನಗರ್ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ವಿಡಿಯೋಗೆ "ನನ್ನ ಬಾಲ್ಯದ ಸ್ನೇಹಿತರು, 1976ರ ಬ್ಯಾಚ್" (Mere bachpan ke dost, 1976 ka batch) ಎಂದು ಕ್ಯಾಪ್ಷನ್‌ ನೀಡಲಾಗಿದೆ. ಸುಮಾರು ಐದು ದಶಕಗಳ ಸುದೀರ್ಘ ಅಂತರದ ನಂತರ ಈ ಸ್ನೇಹಿತರು ಮತ್ತೆ ಒಂದಾಗಿದ್ದಾರೆ. ಕೇವಲ ಭೇಟಿಯಾಗುವುದಷ್ಟೇ ಅಲ್ಲದೆ, ತಾವು ವಿದ್ಯಾಭ್ಯಾಸ ಮಾಡಿದ ಅದೇ ಶಾಲೆಗೆ ಒಟ್ಟಾಗಿ ತೆರಳಿ, ಅಲ್ಲಿನ ತರಗತಿಗಳು ಹಾಗೂ ಆಟದ ಮೈದಾನವನ್ನ ವೀಕ್ಷಿಸಿ ಬಾಲ್ಯದ ದಿನಗಳಿಗೆ ಜಾರಿದ್ದಾರೆ.

ಶಾಲೆಗೆ ಭೇಟಿ ನೀಡಿದ ಈ ಹಳೆಯ ಸ್ನೇಹಿತರ ಗುಂಪು, ಕೇವಲ ಶಾಲೆಯ ಕಟ್ಟಡವನ್ನ ನೋಡಿ ಸುಮ್ಮನಾಗಲಿಲ್ಲ. ಬದಲಾಗಿ, ತಾವು ಬಾಲ್ಯದಲ್ಲಿ ಆಡುತ್ತಿದ್ದ ಹಳೆಯ ಆಟಗಳನ್ನ ಮತ್ತೆ ಆಡುವ ಮೂಲಕ ತಮ್ಮೊಳಗಿನ ಮಗುವನ್ನ ಎಚ್ಚರಿಸಿದ್ದಾರೆ. ತರಗತಿಯ ಬೆಂಚುಗಳ ಮೇಲೆ ಕುಳಿತು ಹಳೆಯ ತುಂಟಾಟಗಳನ್ನ ನೆನಪಿಸಿಕೊಂಡಿದ್ದಾರೆ.

ವಿಡಿಯೋದಲ್ಲಿ ಮಾತನಾಡಿರುವ ರಾಕೇಶ್, "50 ವರ್ಷಗಳ ನಂತರ ನಾವೆಲ್ಲರೂ ಮತ್ತೆ ಒಂದಾದಾಗ, ಆ ಕ್ಷಣಗಳನ್ನ ಏಕೆ ಮತ್ತೆ ಜೀವಿಸಬಾರದು ಎಂಬ ಆಸೆ ಮನಸ್ಸಿನಲ್ಲಿ ಮೂಡಿತು" ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಇದು ಕೇವಲ ಹಳೆಯ ಸ್ನೇಹಿತರ ಭೇಟಿಯಾಗಿರದೆ, ಐದು ದಶಕಗಳ ದೀರ್ಘಾವಧಿಯ ಸ್ನೇಹದ ಆಚರಣೆಯಾಗಿತ್ತು ಎಂದು ಅವರು ಬಣ್ಣಿಸಿದ್ದಾರೆ.

ಸ್ನೇಹದ ಮೌಲ್ಯ ಸಾರಿದ ವಿಡಿಯೋ

ತಮ್ಮ ಈ ಮಿಲನದ ಬಗ್ಗೆ ವಿವರಿಸಿರುವ ರಾಕೇಶ್, "ಜೀವನದಲ್ಲಿ ಕೆಲವು ಕ್ಷಣಗಳು ಎಂದಿಗೂ ಹಳೆಯದಾಗುವುದಿಲ್ಲ. ಇದು ಕೇವಲ ಒಂದು ಭೇಟಿಯಾಗಿರಲಿಲ್ಲ, ನಮ್ಮ ಐವತ್ತು ವರ್ಷಗಳ ಸ್ನೇಹದ ಸಂಭ್ರಮಾಚರಣೆಯಾಗಿತ್ತು. ಅಲ್ಲಿ ಸೇರಿದ ಪ್ರತಿಯೊಬ್ಬರ ಮುಖದಲ್ಲೂ ಮಂದಹಾಸವಿತ್ತು ಮತ್ತು ಪ್ರತಿಯೊಂದು ಹೃದಯದಲ್ಲೂ ಲೆಕ್ಕವಿಲ್ಲದಷ್ಟು ನೆನಪುಗಳಿದ್ದವು" ಎಂದಿದ್ದಾರೆ.

ಅಲ್ಲದೆ, ಇಂದಿನ ಯುವಜನತೆಗೆ ಒಂದು ಸುಂದರ ಸಂದೇಶವನ್ನೂ ರವಾನಿಸಿದ್ದಾರೆ. "ವರ್ಷಗಳ ನಂತರವೂ ನಿಮ್ಮನ್ನು ಅದೇ ಪ್ರೀತಿ ಮತ್ತು ಆಪ್ತತೆಯಿಂದ ಅಪ್ಪಿಕೊಳ್ಳುವ ಜನರೇ ಜೀವನದ ಅತಿದೊಡ್ಡ ಸಂಪತ್ತು. ಹೀಗಾಗಿ, ನಿಮ್ಮ ಪ್ರೀತಿಯ ಸ್ನೇಹಿತರನ್ನು ಆಗಾಗ ಭೇಟಿಯಾಗುತ್ತಿರಿ ಮತ್ತು ನಗುತ್ತಾ ಇರಿ" ಎಂದು ಕಿವಿಮಾತು ಹೇಳಿದ್ದಾರೆ.

ನೆಟ್ಟಿಗರ ಭಾವುಕ ಪ್ರತಿಕ್ರಿಯೆ ಮತ್ತು ಕಾಮೆಂಟ್‌ಗಳ ಸುರಿಮಳೆ

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಅನೇಕ ಬಳಕೆದಾರರು ತಮ್ಮ ಶಾಲಾ ದಿನಗಳನ್ನ ನೆನಪಿಸಿಕೊಂಡು ಭಾವುಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. "ವಾಹ್, ನೀವು ನಿಜಕ್ಕೂ ಅದೃಷ್ಟವಂತರು. ನಿಮ್ಮ ಈ ವಿಡಿಯೋ ನೋಡಿ ಮನಸ್ಸು ತುಂಬಿ ಬಂತು" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು "ನೀವೆಲ್ಲರೂ ಮತ್ತೆ ನಿಮ್ಮ ಬಾಲ್ಯವನ್ನು ಜೀವಿಸಿದ್ದೀರಿ, ಇವು ನಿಜವಾದ ಗೋಲ್ಡನ್ ಮೆಮೊರಿಸ್" ಎಂದು ಬರೆದುಕೊಂಡಿದ್ದಾರೆ.

ಇನ್ನು ಕೆಲವರು, "ಶಾಲಾ ದಿನಗಳ ಸ್ನೇಹ ಮಾತ್ರ ಶಾಶ್ವತವಾಗಿರುತ್ತದೆ, ಆದರೆ ನಾವು ಇನ್ನೂ ನಮ್ಮ ಶಾಲಾ ಸ್ನೇಹಿತರನ್ನ ಭೇಟಿಯಾಗಲು ಸಾಧ್ಯವಾಗಿಲ್ಲ" ಎಂದು ತಮ್ಮ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ, ಈ ವಿಡಿಯೋ ಪ್ರತಿಯೊಬ್ಬರನ್ನೂ ತಮ್ಮ ಬಾಲ್ಯದ ನೆನಪುಗಳತ್ತ ಕೊಂಡೊಯ್ದಿರುವುದಂತೂ ಸುಳ್ಳಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+