ಕಲಬುರಗಿ: ಇದು ವಿಳಾಸ ಹೇಳುವ ಗೈಡಿಂಗ್ ಹೆಲ್ಮೆಟ್

ಕಲಬುರಗಿ, ಫೆಬ್ರವರಿ 22 : ಹೆಲ್ಮೆಟ್ ಕೇವಲ ಜೀವರಕ್ಷಕವಾಗಿ ಮಾತ್ರವಿಲ್ಲ ಜತೆಗೆ ಮಾಹಿತಿಯನ್ನೂ ಒದಗಿಸಬಲ್ಲದು ಎಂದರೆ ಅಚ್ಚರಿಯಾಗಬಹುದು.

ಹೌದು ಯಾವುದೇ ಹೊಸ ಪ್ರದೇಶಕ್ಕೆ ಹೋದರೆ, ವಿಳಾಸ ಹುಡುಕುವುದೇ ದೊಡ್ಡ ಸವಾಲಾಗಿದೆ. ಈ ತೊಂದರೆಗೆ ಅಂತ್ಯ ಹಾಡುವ ಉದ್ದೇಶದಿಂದ ಕಲಬುರಗಿಯ ಪಿಡಿಎ ಕಾಲೇಜಿನ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಗೈಡಿಂಗ್ ಹೆಲ್ಮೆಟ್ ತಯಾರಿಸಿದ್ದಾರೆ.

ನಾಲ್ಕನೇ ಸೆಮಿಸ್ಟರ್ ಓದುತ್ತಿರುವ ಅಭಿಜಿತ್ ಮತ್ತು ಯೋಗೇಶ್ ಅವರು ಈ ಹೆಲ್ಮೆಟ್ ತಂತ್ರಾಂಶ ಅಳವಡಿಸಿದ ಯುವವಿಜ್ಞಾನಿಗಳು.

ಕಲಬುರಗಿಯಂತಹ ಬಿಸಿಲಿರುವ ಪ್ರದೇಶದಲ್ಲಿ ಹೆಲ್ಮೆಟ್ ತಲೆಗೆ ಮಾತ್ರವಲ್ಲ. ಮನಸ್ಸಿಗೂ ಬೇಡವಾದ ಸಾಮಗ್ರಿಯಾಗಿ ಮಾರ್ಪಟ್ಟಿದೆ. ಆದರೂ ಕಡ್ಡಾಯ ಎಂಬ ಕಾರಣಕ್ಕೆ ಬೈಕ್ ಸವಾರರು ಧರಿಸುತ್ತಿದ್ದಾರೆ. ಒಂದುವೇಳೆ, ಇದೇ ಹೆಲ್ಮೆಟ್ ನಲ್ಲಿ ಥ್ರಿಲ್ಲಿಂಗ್ ಇದ್ದಲ್ಲಿ ಖಂಡಿತ ಯುವಪೀಳಿಗೆಯನ್ನು ಹೆಲ್ಮೆಟ್ ಧರಿಸುವಂತೆ ಮನವೊಲಿಸಬಹುದು. ಈ ಆಲೋಚನೆಯೊಂದಿಗೆ ಆರಂಭಗೊಂಡ ಸಂಶೋಧನೆ ಆವಿಷ್ಕಾರ ರೂಪದಲ್ಲಿ ಹೊರಬಿದ್ದಿದೆ.

Students create 'Bluetooth enabled route guiding Helmet'

ಬೇರೆಯ ನಗರಗಳಿಗೆ ಬೈಕ್ ನಲ್ಲಿ ಹೋದಾಗ ಹೊಸ ವಿಳಾಸ ಹುಡುಕುವುದು ಎಲ್ಲರಿಗೂ ಎದುರಾಗುವ ಸವಾಲು. ಅದಕ್ಕೂ ಇಲ್ಲಿ ಪರಿಹಾರ ಕಂಡು ಹಿಡಿಯಲಾಗಿದೆ. ಹೆಲ್ಮೆಟ್ ಒಳಭಾಗದಲ್ಲಿ 4.0 ಆವೃತ್ತಿ(ವರ್ಷನ್ )ಯ ಬ್ಲೂಟೂತ್‌ ಡಿವೈಸ್‌ ಅಳವಡಿಸಲಾಗಿದೆ.

ಸ್ಮಾರ್ಟ್‌ಫೋನ್‌ನಲ್ಲಿ ಜಿಪಿಎಸ್ ಸಕ್ರಿಯವಾಗಿಟ್ಟು ಮುಂದೆ ಸಾಗುವಾಗ ಸ್ಥಳಗಳ ಬಗ್ಗೆ ಮಾಹಿತಿ ನೀಡುತ್ತದೆ. ಹೀಗಾಗಿ, ಯಾರನ್ನೂ ಕೇಳುವ ಅಗತ್ಯವೇ ಇಲ್ಲ. ಬೈಕ್ ಓಡಿಸುವಾಗ ಕರೆಸ್ವೀಕರಿಸುವುದು ನಿಯಮಗಳ ಉಲ್ಲಂಘನೆ ಆಗಿರುವುದರಿಂದ ಬ್ಲೂಟೂತ್‌ನಲ್ಲಿರುವ ರಿಸಿವಿಂಗ್ ಬಟನ್ ಅನ್ನು ತೆಗೆಯಲಾಗಿದೆ.

ಯಾವುದೇ ಪೋನ್‌ ಬಂದರೂ ವಾಹನ ಬದಿಗೆ ತೆಗೆದುಕೊಂಡೇ ಸ್ವೀಕರಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ ಎನ್ನುತ್ತಾರೆ ಅಭಿಜಿತ್‌. ಈ ಎಲ್ಲಾ ತಂತ್ರಾಂಶಗಳನ್ನು ಅಳವಡಿಸಿದ ಬಳಿಕ ಅಂದಾಜು 1,500 ವೆಚ್ಚದಲ್ಲಿ ಹೆಲ್ಮೆಟ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+