ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿ: ಅಫ್ಜಲ್‌ಪುರದಲ್ಲಿ ಗೆಲುವು ಅತ್ತೊಮ್ಮೆ ಇತ್ತೊಮ್ಮೆ

By Manjunatha
|
Google Oneindia Kannada News

ಕಲಬುರಗಿ, ಮೇ 15: ಪಕ್ಷಾಂತರ ಕಾರಣಕ್ಕೆ ಭಾರಿ ಕುತೂಹಲ ಕೆರಳಿಸಿದ್ದ ಕಲಬುರಗಿ ಜಿಲ್ಲೆಯ ಅಫ್ಜಲ್‌ಪುರದಲ್ಲಿ ಗೆಲುವು ಅತ್ತೊಮ್ಮೆ ಇತ್ತೊಮ್ಮೆ ವಾಲಾಡುತ್ತಿದೆ.

ಕೊನೆಯ ಹಂತದವರೆಗೆ ಬಿಜೆಪಿ ಅಭ್ಯರ್ಥಿ ಮಾಲಕಯ್ಯ ಗುತ್ತೇದಾರ್ ಅವರೊಂದಿಗಿದ್ದ ಮುನ್ನಡೆ 12 ಗಂಟೆ ದಾಟಿದ ಬಳಿಕ ಕಾಂಗ್ರೆಸ್‌ನ ಎಂ.ವೈ.ಪಾಟೀಲ್‌ ಅವರದ್ದಾಗಿದೆ.

ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ

ಇಲ್ಲಿ ಪ್ರಸ್ತುತ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಲಕಯ್ಯ ಗುತ್ತೇದಾರ್ ಅವರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಮತ್ತು ಈಗ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಎಂ.ವೈ.ಪಾಟೀಲ್‌ ಅವರು ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಇಬ್ಬರೂ ಅಭ್ಯರ್ಥಿಗಳು ಪಕ್ಷಾಂತರ ಮಾಡಿ ಮತ್ತೆ ಎದುರುಬದರಾಗಿದ್ದಾರೆ.

Afzalpura MY Patil leading by 3000 votes

ಬೆಳಿಗ್ಗೆ ಯಿಂದಲೂ ಮುನ್ನಡೆಯಲ್ಲಿ ಮಾಲಕಯ್ಯ ಗುತ್ತೇದಾರ್ ಈಗ 3000 ಮತಗಳ ಅಂತರದಲ್ಲಿ ಹಿಂದೆಬಿದ್ದಿದ್ದಾರೆ. ಇಲ್ಲಿ ಮತ್ತೆ ಮತಗಳ ಅಂತರ ಅದಲು ಬದಲಾಗುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಆದರೆ ಯಾರೇ ಅಭ್ಯರ್ಥಿ ಗೆದ್ದರು ಗೆಲುವಿನ ಅಂತರ ಕಡಿಮೆಯೇ ಇರಲಿದೆ. ಮತ ಎಣಿಕೆ ಕೊನೆಯ ಹಂತ ತಲುಪಿರುವ ಕಾರಣ ಮಾಲಕಯ್ಯ ಅವರಿಗೆ ಸೋಲುವ ಭೀತಿ ಎದುರಾಗಿರಲಿಕ್ಕೂ ಸಾಕು.

English summary
In Kalaburagi district Afzalpura constituency congress candidate MY Patil leading by 3000 votes. BJP candidate Malakayya Gutthedar crumbling behind, from morning BJP is leading here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X