2 ಕೋಟಿಯಲ್ಲ 22 ಲಕ್ಷ ಉದ್ಯೋಗದ ಭರವಸೆ ನೀಡುವೆ: ರಾಹುಲ್
ಜೈಪುರ, ಏಪ್ರಿಲ್ 29: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸೋಮವಾರದಂದು ಮತ್ತೊಮ್ಮೆ ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ಉದ್ಯೋಗ ಸೃಷ್ಟಿ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ 22 ಲಕ್ಷ ಉದ್ಯೋಗ ಅವಕಾಶ ಭರವಸೆ ನೀಡಿದ್ದಾರೆ.
"ನಾನು ಈ ಸಂದರ್ಭದಲ್ಲಿ 2 ಕೋಟಿ ಉದ್ಯೋಗದ ಭರವಸೆ ನೀಡಲಾರೆ, ನಾನು ನ್ಯಾಯ್ ಬಗ್ಗೆ ಉಲ್ಲೇಖಿಸಿ ಹೇಳಬಹುದಾದ್ರೆ, ಲಕ್ಷಾಂತರ ಮಂದಿಗೆ ಉದ್ಯೋಗ ನೀಡಬಹುದು. ನಾವು ಸರ್ಕಾರ ರಚಿಸಿದರೆ, 22 ಲಕ್ಷ ಉದ್ಯೋಗಗಳನ್ನು ನಮ್ಮ ಸರ್ಕಾರ ನೀಡುವ ಆಶ್ವಾಸನೆ ನೀಡುತ್ತೇನೆ ಎಂದು ಪ್ರಚಾರ ಭಾಷಣದ ವೇಳೆ ಹೇಳಿದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ಪಕ್ಷದ ಅಭ್ಯರ್ಥಿ, ಒಲಿಂಪಿಯನ್ ಕೃಷ್ಣ ಪೂನಿಯಾ ಅವರ ಪರ ಮತಯಾಚಿಸಿದರು. ಜೈಪುರ ಜಿಲ್ಲೆಯ ಕೊಟ್ಪುಟ್ಲಿಯಲ್ಲಿ ನಡೆದ ಸಮಾವೇಶದಲ್ಲಿ ರಾಹುಲ್ ಗಾಂಧಿ ಜೊತೆಗೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರಿದ್ದರು.

10 ಲಕ್ಷ ಪಂಚಾಯತ್ ಕ್ಷೇತ್ರದ ಯುವಕರಿಗೆ
22 ಲಕ್ಷ ಉದ್ಯೋಗ ಅವಕಾಶದ ಪೈಕಿ 10 ಲಕ್ಷ ಪಂಚಾಯತ್ ಕ್ಷೇತ್ರದ ಯುವಕರಿಗೆ ಉದ್ಯೋಗ ಸಿಗಲಿದೆ. ಅಪನಗದೀಕರಣದ ಮೂಲಕ ಅವರು(ನರೇಂದ್ರ ಮೋದಿ) ನಿಮ್ಮ ಜೇಬಿನಿಂದ ಹಣವನ್ನು ಕಸಿದುಕೊಂಡರು. ಗಬ್ಬರ್ ಸಿಂಗ್ ಟ್ಯಾಕ್ಸ್ ಹಾಕಿ ನಿಮ್ಮ ಉಳಿದ ಮೊತ್ತವನ್ನು ಬಳಸಿಕೊಂಡರು ಎಂದು ಹೇಳಿದರು.

ಗ್ರಾಹಕರಿಲ್ಲದೆ ಕಂಪನಿಗಳು ಮುಚ್ಚಿದವು
ಜನರು ಕೊಳ್ಳುವಿಕೆಯನ್ನು ಮರೆತುಬಿಟ್ಟರು, ಕಂಪನಿಗಳು ಮುಚ್ಚುವ ಸ್ಥಿತಿ ತಲುಪಿದವು, ನಿರುದ್ಯೋಗ ಸಮಸ್ಯೆ ಮುಂದುವರೆಯಿತು. ಈ ಎಲ್ಲಾ ಸಮಸ್ಯೆ ಬಗೆಹರಿಸಲು ನಾವು ನ್ಯಾಯ್ ಯೋಜನೆ ತರುತ್ತಿದ್ದೇವೆ. 12 ಸಾವಿರಕ್ಕೂ ಕಡಿಮೆ ಮೊತ್ತದ ಆದಾಯವುಳ್ಳವರಿಗೆ ಶೇ 20ರಷ್ಟು ಬಡವರಿಗೆ ವಾರ್ಷಿಕವಾರಿ 72,000 ರು ಸಿಗಲಿದೆ ಎಂದರು.

5 ಕೋಟಿ ಬಡ ಮಹಿಳೆಯರಿಗೆ ಅನುಕೂಲ
ಇದೇ ಯೋಜನೆಯಿಂದ 5 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆಯಾಗಲಿದೆ. ನರೇಂದ್ರ ಮೋದಿ ಅವರು, ನೀರವ್ ಮೋದಿ, ಮೆಹುಲ್ ಚೋಕ್ಸಿ ಅವರ ಖಾತೆಗಳಿಗೆ ಕೋಟ್ಯಂತರ ಮೊತ್ತ ಹಾಕಬಲ್ಲರು ಅಷ್ಟೇ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 5 ಕೋಟಿ ಬಡವರಿಗೆ ನೆರವಾಗಲಿದೆ.

ವಿವಿಧ ಕ್ಷೇತ್ರಗಳಿಗೆ ಅನುದಾನದ ಭರವಸೆ
ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಕೋಟ್ಯಂತರ ರುಪಾಯಿ ಮೊತ್ತವನ್ನು ವ್ಯಯಿಸಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಕಾಂಗ್ರೆಸ್ ಬದ್ಧವಾಗಿದೆ. ಇದು ನಿಮ್ಮ ಹಣ, ಅನಿಲ್ ಅಂಬಾನಿ ಅಥವಾ ಮೆಹುಲ್ ಚೋಕ್ಸಿಗೆ ಸೇರಿದ್ದಲ್ಲ ಎಂದು ರಾಹುಲ್ ಹೇಳಿದರು.












Click it and Unblock the Notifications