ರಾಜಸ್ಥಾನದಲ್ಲಿ ಪೆಟ್ರೋಲ್, ಡೀಸೆಲ್ ಮೇಲೆ ಹೆಚ್ಚುವರಿ ತೆರಿಗೆ

ಜೈಪುರ್, ಮೇ.07: ಕೊರೊನಾ ವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವುದಕ್ಕಾಗಿ ಭಾರತದಲ್ಲಿ ಕೇಂದ್ರ ಸರ್ಕಾರವು ಲಾಕ್ ಡೌನ್ ಅಸ್ತ್ರವನ್ನು ಪ್ರಯೋಗಿಸುತ್ತಿದೆ. ಇದರ ನಡುವೆಯೂ ಮಿತಿ ಮೀರಿದ ವಾಹನ ಸಂಚಾರ ಬ್ರೇಕ್ ಹಾಕಲು ಹೊಸ ತಂತ್ರ ಹೆಣೆದಿದೆ.

ಇಂಧನ ಕಂಪನಿಗಳಿಂದ ಆದಾಯ ಸಂಗ್ರಹಿಸುವ ಉದ್ದೇಶದಿಂದ ಪೆಟ್ರೋಲ್ ದರದಲ್ಲಿ ಪ್ರತಿ ಲೀಟರ್ ಗೆ 10 ರೂಪಾಯಿ ಹಾಗೂ ಡೀಸೆಲ್ ಪ್ರತಿ ಲೀಟರ್ ಗೆ 13 ರೂಪಾಯಿ ಏರಿಕೆ ಮಾಡಿ ಇತ್ತೀಚಿಗಷ್ಟೇ ದರ ಪರಿಷ್ಕರಿಸಲಾಗಿತ್ತು.

ಇಂಧನ ದರ ಪರಿಷ್ಕರಣೆ ಬೆನ್ನಲ್ಲೇ ರಾಜಸ್ಥಾನ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಮೌಲ್ಯ ವರ್ಧಿತ ತೆರಿಗೆ ವಿಧಿಸಲು ತೀರ್ಮಾನಿಸಿದೆ. ಪೆಟ್ರೋಲ್ ಮೇಲೆ ಶೇ.2ರಷ್ಟು ಹಾಗೂ ಡೀಸೆಲ್ ಮೇಲೆ ಶೇ.1ರಷ್ಟು ವ್ಯಾಟ್ ವಿಧಿಸಲಾಗುತ್ತದೆ. ಪರಿಷ್ಕರ ದರವು ಇಂಧ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ ಎಂದು ರಾಜಸ್ಥಾನ ಸರ್ಕಾರ ತಿಳಿಸಿದೆ.

VAT Hikes On Petrol And Diesel In Rajastan

ಆದಾಯ ಗಳಿಕೆಗೆ 'ಇಂಧನ' ಮಾರ್ಗ:

ಭಾರತ ಲಾಕ್ ಡೌನ್ ನಡುವೆ ಆದಾಯ ಸಂಗ್ರಹಿಸಲು ಸರ್ಕಾರವು ಇಂಧನ ಮಾರ್ಗವನ್ನು ಹುಡುಕಿಕೊಂಡಿದೆ. ರಾಜಸ್ಥಾನ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವ್ಯಾಟ್ ವಿಧಿಸುವ ಮೊದಲೇ ಹಲವು ರಾಷ್ಟ್ರಗಳಲ್ಲಿ ಇಂಧನದ ಮೇಲೆ ತೆರಿಗೆ ಹೆಚ್ಚಿಸಿವೆ. ನವದೆಹಲಿ, ಅಸ್ಸಾಂ, ಉತ್ತರಾಖಂಡ್ ರಾಜ್ಯಗಳು ಸಹ ಆದಾಯ ಸಂಗ್ರಹಿಸುವುದಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚುವರಿ ತೆರಿಗೆಯನ್ನು ವಿಧಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+