ಲಾಕ್ ಡೌನ್; ಶಾಲೆಯಲ್ಲಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಜೈಪುರ, ಏಪ್ರಿಲ್ 26 : ಲಾಕ್ ಡೌನ್‌ನಿಂದಾಗಿ ಊರಿಗೆ ಹೋಗಲು ಸಾಧ್ಯವಾಗದೇ ಶಾಲೆಯಲ್ಲಿ ಉಳಿದುಕೊಂಡಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಒಬ್ಬ ಪೊಲೀಸ್ ಮಖ್ಯಪೇದೆಯಾಗಿದ್ದಾನೆ.

ರಾಜಸ್ಥಾನದ ಸ್ವಾಯಿ ಮಾಧೋಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 40 ವರ್ಷದ ಮಹಿಳೆ ಮೇಲೆ ಏಪ್ರಿಲ್ 23 ರಂದು ಮೂವರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಘಟನೆ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ.

ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಹೆಡ್ ಕಾನ್ಸ್‌ಟೇಬಲ್ ಲಾಲ್ ಚಂದ್ ಅಮಾನತುಗೊಳಿಸಲಾಗಿದೆ. ಮಹಿಳೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ವರದಿ ಇನ್ನೂ ಬರಬೇಕಿದೆ.

Lock Down Women Gang Raped In Rajasthan School

ಜೈಪುರದ ಜೈಲಿನಲ್ಲಿದ್ದ ತನ್ನ ಮಗನನ್ನು ನೋಡಲು ಮಹಿಳೆ ಹೋಗಿದ್ದಳು. ಆದರೆ, ಕೊರೊನಾ ಹಿನ್ನಲೆಯಲ್ಲಿ ಮಗನನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಇದರಿಂದಾಗಿ ಮಹಿಳೆ ಊರಿಗೆ ವಾಪಸ್ ಹೊರಟಿದ್ದಳು.

ಮಹಿಳೆ ಊರಿಗೆ ಹೋಗುವಾ ಸ್ವಾಯಿ ಮಾಧೋಪುರ್ ತಲುಪಿದ್ದಳು. ಆಗ ಲಾಕ್ ಡೌನ್ ಘೋಷಣೆಯಾಗಿದೆ. ಇದರಿಂದಾಗಿ ಊರಿಗೆ ಮರಳಲು ಸಾರಿಗೆ ಸೌಕರ್ಯ ಸಿಕ್ಕಿರಲಿಲ್ಲ. ಆಗ ಊರಿನವರು ಪೊಲೀಸರ ಸಮ್ಮುಖದಲ್ಲಿ ಪಂಚಾಯಿತಿ ನಡೆಸಿ, ಆಕೆಗೆ ಶಾಲೆಯಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಿದ್ದರು.

ಪಂಚಾಯಿತಿ ಸಂದರ್ಭದಲ್ಲಿ ಹಾಜರಿದ್ದ ಹೆಡ್ ಕಾನ್ಸ್‌ಟೇಬಲ್ ಏಪ್ರಿಲ್ 23ರ ರಾತ್ರಿ ತನ್ನ ಸ್ನೇಹಿತರ ಜೊತೆ ಸೇರಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಏಪ್ರಿಲ್ 24ರಂದು ಮಹಿಳೆ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದಾಳೆ.

ಮಹಿಳೆಗೆ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಸ್ಥಳೀಯವಾಗಿ ಲಭ್ಯವಿದ್ದ ಕ್ವಾರಂಟೈನ್‌ ಝೋನ್‌ನಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಸಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+