Breaking: ದೇಶದಲ್ಲಿ ಮುಂದುವರೆದ ಕೊರೊನಾ ಸಾವು: ಸಂಖ್ಯೆ 5ಕ್ಕೆ ಏರಿಕೆ
ಬೆಂಗಳೂರು, ಮಾರ್ಚ್ 20: ದೇಶದಲ್ಲಿ ಕೊರೊನಾ ಆತಂಕ ಕಡಿಮೆಯಾಗುವಂತೆ ಕಾಣುತ್ತಿಲ್ಲ, ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ.
ಇದೀಗ ಕೊರೊನಾ ವೈರಸ್‌ನಿಂದ ಭಾರತದಲ್ಲಿ ಮೃತಪಟ್ಟಿರುವವರ ಸಂಖ್ಯೆ 5ಕ್ಕೇರಿದೆ. ಜೈಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 69 ವರ್ಷದ ಇಟಲಿಯ ಪ್ರಜೆ ಸಾವನ್ನಪ್ಪಿದ್ದಾರೆ.
ಗುರುವಾರದವರೆಗೆ ಭಾರತದಲ್ಲಿ ಒಟ್ಟು ನಾಲ್ವರು ಮೃತಪಟ್ಟಿದ್ದರು. ಈಗ ಅದು ಐದಕ್ಕೆ ಏರಿಕೆಯಾಗಿದೆ. ಸೋಂಕಿತ ವ್ಯಕ್ತಿಯನ್ನು ಆಂಡ್ರ್ಯೂ ಎಂದು ಗುರುತಿಸಲಾಗಿದೆ. ಜೈಪುರದ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿಡಲಾಗುತ್ತಿತ್ತು. ಹೊಸ 22 ಪ್ರಕರಣಗಳು ಬೆಳಕಿಗೆ ಬಂದಿವೆ.

ವಿಶ್ವದಾದ್ಯಂತ ಒಟ್ಟು 10048 ಮಂದಿ ಇದುವರೆಗೆ ಮೃತಪಟ್ಟಿದ್ದಾರೆ. ಅದರಲ್ಲಿ 32 ವಿದೇಶಿ ಪ್ರಜೆಗಳು, ಇಟಲಿಯಿಂದ 17, ಫಿಲಿಪೈನ್ಸ್‌ನಿಂದ 3, ಯುಕೆಯಿಂದ ಇಬ್ಬರು, ಕೆನಡಾ,ಸಿಂಗಾಪುರ, ಇಂಡೋನೇಷ್ಯಾದಿಂದ ತಲಾ ಒಬ್ಬರಉ ಸೋಂಕಿತರು ಭಾರತದಲ್ಲಿದ್ದಾರೆ.
ಕರ್ನಾಟಕ, ದೆಹಲಿ, ಪಂಜಾಬ್ ಮಹಾರಾಷ್ಟ್ರದಲ್ಲಿ ಒಟ್ಟು ನಾಲ್ಕು ಮಂದಿ ಕೊರೊನಾದಿಂದ ಮೃತಪಟ್ಟಿದ್ದರು. ಇದೀಗ ಜೈಪುರದಲ್ಲಿ ಮತ್ತೋರ್ವ ವ್ಯಕ್ತಿಯನ್ನು ಕೊರೊನಾ ಬಲಿ ಪಡೆದಿದೆ. ಮಹಾರಾಷ್ಟ್ರದಲ್ಲಿ ಮತ್ತೆ ಮೂರು ಹೊಸ ಪ್ರಕರಣಗಳು ದೃಢಪಟ್ಟಿವೆ. ಪಶ್ಚಿಮ ಬಂಗಾಳದಲ್ಲಿ ಎರಡನೇ ಪ್ರಕರಣ ಪತ್ತೆಯಾಗಿದೆ.












Click it and Unblock the Notifications