ರಾಜಸ್ಥಾನ ಚುನಾವಣೆ 2018 : ಕಾಂಗ್ರೆಸ್‌ ದೊಡ್ಡ ಪಕ್ಷವಾಗಲಿದೆ!

ಜೈಪುರ, ಡಿಸೆಂಬರ್ 07 : ರಾಜಸ್ಥಾನ ವಿಧಾನಸಭೆ ಚುನಾವಣೆಯ ಮತದಾನ ಮುಕ್ತಾಯಗೊಂಡಿದೆ. 199 ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದೆ. ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 100.

ಶುಕ್ರವಾರ ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಿತು. ಶೇ 75ರಷ್ಟು ಮತದಾನ ನಡೆದಿದೆ ಎಂದು ಅಂದಾಜಿಸಲಾಗಿದೆ. ಮತದಾನ ಮುಕ್ತಾಯವಾಗುತ್ತಿದ್ದಂತೆ ವಿವಿಧ ರಾಷ್ಟ್ರೀಯ ವಾಹಿನಿಗಳು ಚುನಾವಣೋತ್ತರ ಸಮೀಕ್ಷೆಯನ್ನು ನಡೆಸಿವೆ.

2013ರ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ ಬಿಜೆಪಿ 163 ಸ್ಥಾನಗಳನ್ನು ಪಡೆದು ಅಧಿಕಾರ ಪಡೆದಿತ್ತು. ವಸುಂಧರಾ ರಾಜೆ ಅವರು ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್‌ 21 ಕ್ಷೇತ್ರಗಳಲ್ಲಿ ಮಾತ್ರ ಜಯಗಳಿಸಿತ್ತು. 2018ರ ಚುನಾವಣೆಯಲ್ಲಿ ಯಾರು ಜಯಗಳಿಸಲಿದ್ದಾರೆ?.

ರಾಜಸ್ಥಾನ ವಿಧಾನಸಭೆ ಚುನಾವಣಾ ಫಲಿತಾಂಶ ಡಿಸೆಂಬರ್ 11ರ ಮಂಗಳವಾರ ಪ್ರಕಟವಾಗಲಿದೆ. ಚುನಾವಣೋತ್ತರ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಇಲ್ಲಿದೆ....

ಟೈಮ್ಸ್ ನೌ, ಸಿಎನ್‌ಎಕ್ಸ್‌

ಟೈಮ್ಸ್ ನೌ, ಸಿಎನ್‌ಎಕ್ಸ್‌

ಟೈಮ್ಸ್ ನೌ ಮತ್ತು ಸಿಎನ್‌ಎಕ್ಸ್ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಬಿಜೆಪಿ 85, ಕಾಂಗ್ರೆಸ್‌ 105, ಬಿಎಸ್‌ಪಿ 2, ಇತರರು 7 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ.

2013ರ ಚುನಾವಣೆಯಲ್ಲಿ ಬಿಜೆಪಿ 163, ಕಾಂಗ್ರೆಸ್ 21, ಬಿಎಸ್‌ಪಿ 3, ಇತರರು 13 ಸ್ಥಾನಗಳಲ್ಲಿ ಜಯಗಳಿಸಿದ್ದರು.

ರಿಪಬ್ಲಿಕ್-ಜನ್ ಕೀ ಬಾತ್ ಸಮೀಕ್ಷೆ

ರಿಪಬ್ಲಿಕ್-ಜನ್ ಕೀ ಬಾತ್ ಸಮೀಕ್ಷೆ

ರಿಪಬ್ಲಿಕ್ ಟಿವಿ ಮತ್ತು ಜನ್‌ ಕೀ ಬಾತ್ ಸಮೀಕ್ಷೆ ಪ್ರಕಾರ ರಾಜಸ್ಥಾನದಲ್ಲಿ ಬಿಜೆಪಿ 83-103, ಕಾಂಗ್ರೆಸ್‌ 81-101 ಮತ್ತು ಇತರೆ 7-11 ಸ್ಥಾನಗಳಲ್ಲಿ ಜಯಗಳಿಸಲಿವೆ.

ಇಂಡಿಯಾ ಟುಡೆ ಸಮೀಕ್ಷೆ

ಇಂಡಿಯಾ ಟುಡೆ ಸಮೀಕ್ಷೆ

ಇಂಡಿಯಾ ಟುಡೆ, ಆಕ್ಸಿಸ್ ಮೈ ಇಂಡಿಯಾಸಮೀಕ್ಷೆ ಪ್ರಕಾರ ರಾಜಸ್ಥಾನದಲ್ಲಿ ಕಾಂಗ್ರೆಸ್‌ 111-141, ಬಿಜೆಪಿ 55-72, ಇತರರು 4-11 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ.

ಕಾಂಗ್ರೆಸ್‌ಗೆ 85 ಸ್ಥಾನ

ಕಾಂಗ್ರೆಸ್‌ಗೆ 85 ಸ್ಥಾನ

iTV-Neta-NewsX ಚುನಾವಣೋತ್ತರ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 105, ಬಿಜೆಪಿ 85 ಮತ್ತು ಇತರರು 2 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ.

ರಾಜಸ್ಥಾನ ಒಟ್ಟು ಫಲಿತಾಂಶ

ರಾಜಸ್ಥಾನ ಒಟ್ಟು ಫಲಿತಾಂಶ

ರಾಜಸ್ಥಾನ ವಿಧಾನಸಭೆ ಚುನಾವಣೋತ್ತರ ಸಮೀಕ್ಷೆಗಳ ಸಮೀಕ್ಷೆ ಪ್ರಕಾರ ಬಿಜೆಪಿ 82, ಕಾಂಗ್ರೆಸ್ 108, ಬಿಎಸ್‌ಪಿ 0, ಇತರರು 9 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ. ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 100.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+