ಜ್ಯೂಸಿನಲ್ಲಿ ಮತ್ತಿನ ಔಷಧ ಬೆರೆಸಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ
ಕೋಟಾ, ಜೂನ್ 28: ಜ್ಯೂಸಿನಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.
ಜೂನ್ 22 ರಂದೇ ಬಾಲಕಿಯನ್ನು ಅಪಹರಿಸಲಾಗಿತ್ತು.ರಾಜಸ್ಥಾನದ ಬುಂಡಿ ಜಿಲ್ಲೆಯಲ್ಲಿ ಈ ಕೃತ್ಯ ನಡೆದಿದೆ.ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಲಾಗಿದೆ. ಎರಡು ಬಾರಿ ಬಾಲಕಿ ಮೇಲೆ ಅತ್ಯಾಚಾರವಾಗಿದೆ.
ಸಂತ್ರಸ್ತೆ ಬಾಲಕಿ ತನ್ನ ಅತ್ತೆ ಮನೆಗೆ ತೆರಳುವ ಸಲುವಾಗಿ ಬಸ್ ನಿಲ್ದಾಣವೊಂದರಲ್ಲಿ ಕಾಯುತ್ತಿದ್ದಳು. ಈ ವೇಳೆ ಅಲ್ಲಿಯೇ ಇದ್ದ ಈ ಕಾಮುಕರು, ಜ್ಯೂಸ್ ಕುಡಿಯುವಂತೆ ಬಾಲಕಿಯನ್ನ ತಾಖೀತು ಮಾಡಿದ್ದಾರೆ. ತನ್ನದೇ ಊರಿನವರು ಎಂದು ತಿಳಿದ ಕೂಡಲೇ ಈಕೆ ಜ್ಯೂಸ್ ಕುಡಿದಿದ್ದಾಳೆ. ನಂತರ ಜ್ಯೂಸ್ ಕುಡಿದು ಪ್ರಜ್ಞೆ ತಪ್ಪಿದ್ದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆ ಪೊಲೀಸ್ ಠಾಣೆಯಲ್ಲಿ ಅರವಿಂದ್ ದರೋಗಾ ಮತ್ತು ರಾಜಕುಮಾರ್ ಮೇಳ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾಳೆ. ಐಪಿಸಿ ಸೆಕ್ಷನ್ 363(ಅಪಹರಣ) ಮತ್ತು 376-ಡಿ( ಅತ್ಯಚಾರ) ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.












Click it and Unblock the Notifications