• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅದೇ ಭಯ: ಅಫ್ಘಾನಿಸ್ತಾನದಲ್ಲಿ ಮನೆ ಬಿಟ್ಟು ಹೊರಗೆ ಬರುವಂತಿಲ್ಲ ಮಹಿಳೆಯರು!

|
Google Oneindia Kannada News

ಕಾಬೂಲ್, ಸಪ್ಟೆಂಬರ್ 2: ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿದ ತಾಲಿಬಾನ್ ಸಂಘಟನೆ ಮಹಿಳಾ ಹಕ್ಕುಗಳನ್ನು ಗೌರವಿಸುತ್ತೇವೆ ಎಂಬ ಮಾತಿಗೆ ವಿರುದ್ಧವಾಗಿ ನಡೆದುಕೊಳ್ಳುವ ಸುಳಿವನ್ನು ನೀಡುತ್ತಿದೆ. 20 ವರ್ಷಗಳ ಹಿಂದಿನ ತನ್ನ ದಬ್ಬಾಳಿಕೆ ವೈಖರಿಯ ಆಡಳಿತವನ್ನೇ ಮುಂದುವರಿಸುವ ಲಕ್ಷಣಗಳು ಎದ್ದು ಕಾಣುತ್ತಿವೆ.

"ಮಹಿಳೆಯರು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳು ಕಣ್ಮರೆಯಾಗುತ್ತಿವೆ. ದೇಶದಲ್ಲಿ ಮಹಿಳಾ ನೇತೃತ್ವದ ಸರ್ಕಾರೇತರ ಸಂಸ್ಥೆಗಳನ್ನು ಹುಡುಕಿ ಪ್ರಶ್ನೆ ಮಾಡಲಾಗುತ್ತಿದ್ದು, ಮುಚ್ಚುವಂತೆ ಬೆದರಿ ಹಾಕಲಾಗುತ್ತಿದೆ. ಅಲ್ಲದೇ ಪ್ರಮುಖ ಮಹಿಳಾ ಕಾರ್ಯಕರ್ತರಿಗೆ ದೂರವಾಣಿ ಕರೆ, ಸಂದೇಶ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಬೆದರಿಕೆಯೊಡ್ಡಲಾಗುತ್ತಿದೆ" ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಜೊತೆ ಕಾರ್ಯ ನಿರ್ವಹಿಸುತ್ತಿರುವ ಸಮೀರಾ ಹಮಿಡಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಷರಿಯಾ ಕಾನೂನು ಎಂದರೇನು; ಅಫ್ಘಾನಿಸ್ತಾನದಲ್ಲಿ ಕೈ-ಕಾಲು ಕತ್ತರಿಸಲು ಹೇಳುತ್ತದೆಯೇ ಕಾಯ್ದೆ!?ಷರಿಯಾ ಕಾನೂನು ಎಂದರೇನು; ಅಫ್ಘಾನಿಸ್ತಾನದಲ್ಲಿ ಕೈ-ಕಾಲು ಕತ್ತರಿಸಲು ಹೇಳುತ್ತದೆಯೇ ಕಾಯ್ದೆ!?

"ಮಹಿಳೆಯರು ಮನೆಯಲ್ಲಿಯೇ ಇರುವಂತೆ ತಾಲಿಬಾನ್ ಕೇಳಿಕೊಂಡಿದೆ. ಏಕೆಂದರೆ ತಾಲಿಬಾನ್ ಉಗ್ರಗಾಮಿಗಳು ಮಹಿಳೆಯರನ್ನು ಗೌರವಿಸುವುದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತರಬೇತಿಯನ್ನು ಪಡೆದುಕೊಂಡಿಲ್ಲ ಎಂದು ಅವರು ತಿಳಿದುಕೊಂಡಿದ್ದಾರೆ. ಬ್ಯಾಂಕ್, ಕಚೇರಿ ಮತ್ತು ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆಯರನ್ನು ವಾಪಸ್ ಕಳುಹಿಸಿದ್ದು ಮನೆಯಲ್ಲೇ ಇರುವಂತೆ ಕೇಳಿಕೊಳ್ಳಲಾಗಿದೆ. ಭವಿಷ್ಯದಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರಗಳಲ್ಲೂ ಮಹಿಳೆಯರನ್ನು ಕಡೆಗಣಿಸಲಾಗುತ್ತದೆ," ಎಂದು ಅವರು ಹೇಳಿದ್ದಾರೆ.

ಅಫ್ಘಾನ್ ನೆಲದಲ್ಲಿ ಮಹಿಳೆಯರಿಗೆ ಮತ್ತೆ ಅಪಾಯ

ಅಫ್ಘಾನ್ ನೆಲದಲ್ಲಿ ಮಹಿಳೆಯರಿಗೆ ಮತ್ತೆ ಅಪಾಯ

ಅಫ್ಘಾನಿಸ್ತಾನದ ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸಿ ನೋಡಲಾಗುತ್ತಿದೆ. ಹೊಸ ಸರ್ಕಾರದಲ್ಲಿ ಮಹಿಳೆಯರಿಗೂ ವಿಶೇಷ ಪಾತ್ರವನ್ನು ನೀಡಬೇಕು ಎಂಬ ಬಗ್ಗೆ ತಾಲಿಬಾನ್ ಯೋಜಿಸುವುದಿಲ್ಲ. ದೇಶಾದ್ಯಂತ ಪ್ರಮುಖ ಮಹಿಳೆಯರು ತಮ್ಮ ಸುರಕ್ಷತೆ ಭಯದಲ್ಲೇ ಹೆದರಿ ಕುಳಿತುಕೊಂಡಿದ್ದಾರೆ.

ತಾಲಿಬಾನ್ 1996 ರಿಂದ 2001 ರವರೆಗೆ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸಿದ ಸಂದರ್ಭದಲ್ಲಿ ಅವರು ಕಠಿಣ ಷರಿಯಾ ಅಥವಾ ಇಸ್ಲಾಮಿಕ್ ಕಾನೂನನ್ನು ಕಟ್ಟುನಿಟ್ಟಾಗಿ ಇನ್ನು ಕೆಲವೊಮ್ಮೆ ಕ್ರೂರವಾಗಿ ಜಾರಿಗೊಳಿಸಲಾಗುತ್ತಿತ್ತು. ಈ ಕಾನೂನುಗಳ ಪ್ರಕಾರ, ಮಹಿಳೆಯರು ಕೆಲಸಕ್ಕೆ ಹೋಗುವಂತಿಲ್ಲ ಹಾಗೂ ಹುಡುಗಿಯರಿಗೆ ಶಾಲಾ-ಕಾಲೇಜುಗಳಿಗೆ ಹಾಜರಾಗುವುದಕ್ಕೆ ಯಾವುದೇ ರೀತಿ ಅನುಮತಿ ಇರುವುದಿಲ್ಲ. ಮಹಿಳೆಯರು ಮನೆಯಿಂದ ಹೊರಗೆ ಹೋಗುವಾಗ ತಮ್ಮ ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳಬೇಕು. ಒಬ್ಬ ಪುರುಷ ಸಂಬಂಧಿಯ ಜೊತೆಗಿರಬೇಕು. ಈ ನಿಯಮ ಉಲ್ಲಂಘಿಸಿದರೆ ತಾಲಿಬಾನ್ ಧಾರ್ಮಿಕ ಪೊಲೀಸರಿಂದ ಅವಮಾನ ಮತ್ತು ಸಾರ್ವಜನಿಕವಾಗಿ ಏಟು ನೀಡಲಾಗುತ್ತದೆ.

ತಾಲಿಬಾನ್ ನೆಲದಲ್ಲಿ ಮಹಿಳೆಯರಿಗೆ ಸುರಕ್ಷತೆಯ ಭೀತಿ

ತಾಲಿಬಾನ್ ನೆಲದಲ್ಲಿ ಮಹಿಳೆಯರಿಗೆ ಸುರಕ್ಷತೆಯ ಭೀತಿ

ಅಫ್ಘಾನಿಸ್ತಾನದಲ್ಲಿ ಈಗಾಗಲೇ ಹಲವು ಮಹಿಳೆಯರು ತಮ್ಮ ಕಚೇರಿಗೆ ಹೋಗದಂತೆ ನಿರ್ಬಂಧ ವಿಧಿಸಲಾಗಿದೆ ಎಂದು ದೂರಿದ್ದಾರೆ. ತಮ್ಮ ಸುರಕ್ಷತೆಯ ಬಗ್ಗೆ ಆತಂಕಗೊಂಡ ಕೆಲವು ಮಹಿಳಾ ಪತ್ರಕರ್ತರು ಬೇರೆ ದೇಶಗಳಿಗೆ ಪಲಾಯನ ಮಾಡಿದ್ದಾರೆ. ಅಫ್ಘಾನಿಸ್ತಾನದ ಬಾಲಕಿಯರ ಶಿಕ್ಷಣ ಹಕ್ಕುಗಳ ಕಾರ್ಯಕರ್ತೆ ಪಸ್ತಾನಾ ದುರಾನಿ ತಾಲಿಬಾನ್ ಭರವಸೆಗಳ ಬಗ್ಗೆ ಜಾಗರೂಕರಾಗಿರಿ ಎಂದಿದ್ದಾರೆ. ಮಾತುಕತೆ ನಡೆಸುತ್ತೇನೆ ಎಂದವರು ಈಗ ಅದನ್ನು ಮರೆತಿದ್ದಾರೆ. ಬಾಲಕಿಯರ ಶಿಕ್ಷಣಕ್ಕೆ ಅವಕಾಶ ನೀಡಲೇಬೇಕು ಎಂದು ಅವರು ಆಗ್ರಹಿಸಿದ್ದಾರೆ.

"ಅವರು ಪಠ್ಯಕ್ರಮವನ್ನು ಸೀಮಿತಗೊಳಿಸಿದರೆ, ನಾನು (ಆನ್) ಆನ್‌ಲೈನ್ ಲೈಬ್ರರಿಗೆ ಹೆಚ್ಚಿನ ಪುಸ್ತಕಗಳನ್ನು ಅಪ್‌ಲೋಡ್ ಮಾಡುತ್ತೇನೆ. ಅವರು ಇಂಟರ್‌ನೆಟ್ ಅನ್ನು ಮಿತಿಗೊಳಿಸಿದರೆ, ನಾನು ಮನೆಗಳಿಗೆ ಪುಸ್ತಕಗಳನ್ನು ಕಳುಹಿಸುತ್ತೇನೆ. ಅವರು ಶಿಕ್ಷಕರನ್ನು ಮಿತಿಗೊಳಿಸಿದರೆ ನಾನು ಭೂಗತ ಶಾಲೆಯನ್ನು ಆರಂಭಿಸುತ್ತೇನೆ, ಅವರ ಸಮಸ್ಯೆಗಳಿಗೆ ನಾನು ಉತ್ತರವನ್ನು ಹೊಂದಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ಅಸಲಿಗೆ ಷರಿಯಾ ಕಾನೂನು ಎಂದರೇನು?

ಅಸಲಿಗೆ ಷರಿಯಾ ಕಾನೂನು ಎಂದರೇನು?

ಷರಿಯಾ ಕಾನೂನು ಎಂಬುದರ ಅರ್ಥ? ಇಸ್ಲಾಮಿಕ್ ಕಾನೂನುಗಳಿಗೆ ಸಮಾನಾರ್ಥವಾಗಿ ಈ ಷರಿಯಾ ಕಾನೂನುಗಳನ್ನು ಗುರುತಿಸಲಾಗುತ್ತದೆ. ಷರಿಯಾ ನಿಜವಾಗಿಯೂ ಲಿಖಿತ ನಿಯಮಗಳ ಸಂಹಿತೆಯಲ್ಲ, ಬದಲಾಗಿ ಹಲವು ಮೂಲಗಳಿಂದ ಪಡೆದ ನಿಯಮಗಳ ಒಂದು ಅಂಗವಾಗಿದೆ. ಅವುಗಳ ಪೈಕಿ ಪ್ರಮುಖವಾಗಿರುವುದೇ ಕುರಾನ್. ಇದರ ಹೊರತಾಗಿ ಇಸ್ಲಾಂನ ಪವಿತ್ರ ಗ್ರಂಥಗಳು, ಹಾಗೂ ಹದೀಸ್ ಎಂದು ಕರೆಯಲ್ಪಡುವ ಪ್ರವಾದಿ ಮೊಹಮ್ಮದ್ ಅವರ ಜೀವನ, ಬೋಧನೆಗಳು ಮತ್ತು ಅಭ್ಯಾಸಗಳನ್ನು ಸಾರಿ ಹೇಳುವ ಸಾಕ್ಷ್ಯಚಿತ್ರಗಳಿವೆ. ಅರೇಬಿಕ್ 'ಷರಿಯಾ' ಕಟ್ಟುನಿಟ್ಟಾದ ಕಾನೂನು ಸಂಹಿತೆಗಿಂತ ಅನುಸರಿಸಬೇಕಾದ ಮಾರ್ಗಗಳನ್ನು ಸೂಚಿಸುತ್ತದೆ. ಇದು ಧರ್ಮವನ್ನು ಹೇಗೆ ಪಾಲಿಸುವುದು, ನಡವಳಿಕೆ ಮತ್ತು ನಿಯಮಗಳ ಜೊತೆಗೆ ಕಾನೂನು ವಿಷಯಗಳನ್ನೂ ಒಳಗೊಂಡಿರುತ್ತದೆ. ಇದರ ಹೊರತಾಗಿ ಷರಿಯಾ ಕಾನೂನುಗಳು ಹೇಗೆ ರೂಪಗೊಂಡವು ಎಂಬುದನ್ನು ನಿರ್ಧರಿಸುವುದಕ್ಕೆ ಇನ್ನೂ ಎರಡು ಅಂಶಗಳಿವೆ. "ಒಂದು ವಿಶ್ಲೇಷಣೆ ಆಧಾರಿತ 'ಕಿಯಾಸ್' ಆದರೆ, ಎರಡು ನ್ಯಾಯಸಮ್ಮತವಾದ 'ಇಜ್ಮಾ' ಆಗಿದೆ.

ಷರಿಯಾ ಕಾನೂನನ್ನು ತಾಲಿಬಾನ್ ಏಕೆ ಪಾಲನೆ ಮಾಡುತ್ತೆ?

ಷರಿಯಾ ಕಾನೂನನ್ನು ತಾಲಿಬಾನ್ ಏಕೆ ಪಾಲನೆ ಮಾಡುತ್ತೆ?

ಅಫ್ಘಾನಿಸ್ತಾನದಲ್ಲಿ ಹೆಚ್ಚಿನ ತಾಲಿಬಾನಿಗಳು ಪಶ್ತೂನ್ ಜನಾಂಗಕ್ಕೆ ಸೇರಿದ್ದು, ಇಸ್ಲಾಂನ ಸುನ್ನಿ ಅನುಯಾಯಿಗಳಾಗಿದ್ದಾರೆ. ತಾಲಿಬಾನ್ ಸಂಘಟನೆಯ ಬಹುಪಾಲು ಉನ್ನತ ಸ್ಥಾನಗಳಲ್ಲಿ ಇದೇ ಸುನ್ನಿ ಜನಾಂಗದ ನಾಯಕರಿದ್ದಾರೆ. ಇದರ ಮಧ್ಯೆ ಅಫ್ಘಾನಿಸ್ತಾನದಲ್ಲಿ ಜಾರಿಗೊಳಿಸಲು ಹೊರಟಿರುವ ಷರಿಯಾ ಕಾನೂನುಗಳಿಂದ ಹಜಾರಸ್ ಮತ್ತು ಶಿಯಾಗಳಂತಹ ಧಾರ್ಮಿಕ ಹಾಗೂ ಜನಾಂಗೀಯ ಅಲ್ಪಸಂಖ್ಯಾತರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆಗಳು ಹುಟ್ಟುಕೊಳ್ಳುತ್ತವೆ. ಅಲ್ಲದೆ, ಇಸ್ಲಾಮಿಕ್ ಪಾದ್ರಿಗಳ ಮಟ್ಟದಲ್ಲಿ ಮಹಿಳೆಯರು ಇಲ್ಲದೇ ಕಾನೂನು ಮತ್ತು ರಾಜಕೀಯ ಕ್ರಮದಲ್ಲಿ ಹಿತಾಸಕ್ತಿಗಳಿಗೆ ಸ್ಥಾನ ಸಿಗುವುದಿಲ್ಲ ಎಂಬ ಭಯವನ್ನು ಸೃಷ್ಟಿಸುತ್ತದೆ.

English summary
Women has disappeared from political, social and economic spaces, NGO Worker Samira Hamidi wrote in her Twitter thread.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X