ಕೊರೊನಾ ವಿರುದ್ಧ ಹೋರಾಟ: ಅಮೆರಿಕ, ಚೀನಾ ಒಗ್ಗಟ್ಟಿಗೆ WHO ಕರೆ

ವಾಷಿಂಗ್ಟನ್, ಏಪ್ರಿಲ್ 8: ಕೊರೊನಾ ವಿರುದ್ಧದ ಹೋರಾಟಕ್ಕೆ ಚೀನಾ ಹಾಗೂ ಅಮೆರಿಕ ಒಟ್ಟಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಆಗ್ರಹಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರವಾಗಿದೆ ಹಾಗೂ ಮೃದು ಧೋರಣೆ ಹೊಂದಿದೆ. ಇದರಿಂದ ಅನುದಾನ ಕಡಿತಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಎಚ್ಚರಿಕೆ ಕೊಟ್ಟ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಹೀಗೆ ಹೇಳಿದೆ.

ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಜನರನ್ನು ಉಳಿಸಿಕೊಳ್ಳಲು ಪ್ರಯತ್ನ ಪಡುತ್ತಿವೆ. ಆದರೆ ವೈರಸ್‌ನ್ನು ಯಾವುದೇ ಪಕ್ಷಕ್ಕೆ ಸೇರಿಸಬೇಡಿ. ಇಡೀ ವಿಶ್ವದಾದ್ಯಂತ 83 ಸಾವಿರಕ್ಕೂ ಹೆಚ್ಚು ಮಂದಿಯನ್ನು ಕೊರೊನಾ ಬಲಿ ಪಡೆದಿದೆ.

WHO Urges To US And China To Fight Against Corona

ಮಹಾಮಾರಿ ಕೊರೊನಾ ವೈರಸ್ ಪ್ರಕರಣದಲ್ಲಿ ಚೀನಾ ವಿರುದ್ಧ ಮೃದು ಧೋರಣೆ ತಳೆದಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವಿರುದ್ಧ ಗುಡುಗಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಇನ್ನು ಮುಂದೆ ಆರ್ಥಿಕ ನೆರವು ನೀಡಲ್ಲ ಎಂದು ಬೆದರಿಕೆ ಹಾಕಿದ್ದರು.

ಈ ಹಿಂದೆ ಟ್ರಂಪ್ ಅವರ 'ಅಮೆರಿಕ ಮೊದಲು' ಧೋರಣೆಗೆ ವಿಶ್ವಸಂಸ್ಥೆ ಸೇರಿದಂತೆ ಅನೇಕ ಏಜೆನ್ಸಿಗಳು ಟೀಕೆ ಮಾಡಿತ್ತು. ಹಾಗಿದ್ದರೂ ಎಷ್ಟು ಮೊತ್ತವನ್ನು ತಡೆ ಹಿಡಿಯಲಿದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದರು. 'ನಾನು ಹೇಳುವುದಿಲ್ಲ. ಆದರೆ ಅದನ್ನು ಮಾಡಿಯೇ ತೀರುತ್ತೇನೆ. ಹಣದ ನೆರವನ್ನು ನಿಲ್ಲಿಸಲಿದ್ದೇನೆ' ಎಂದು ಟ್ರಂಪ್ ಉಲ್ಲೇಖಿಸಿದ್ದರು.

WHO Urges To US And China To Fight Against Corona

ವಿಶ್ವ ಆರೋಗ್ಯ ಸಂಸ್ಥೆ ಪಕ್ಷಪಾತ ತೋರುತ್ತಿದ್ದು, ಚೀನಾ ವಿರುದ್ಧ ಮೃದು ಧೋರಣೆ ತಲೆದಿದೆ ಎಂದು ಟ್ರಂಪ್ ಆರೋಪ ಮಾಡಿದರು. ವಿಶ್ವ ಆರೋಗ್ಯ ಸಂಸ್ಥೆಯು ಚೀನಾ ಕೇಂದ್ರಿತವಾಗಿದೆ ಎಂದು ಆರೋಪ ಮಾಡಿದರು.

ಕೊರೊನಾ ವೈರಸ್ ಚೀನಾದಿಂದಲೇ ಆರಂಭವಾಗಿದೆ. ಇದರ ಹೊರತಾಗಿಯೂ ಆರಂಭದಲ್ಲಿ ತಪ್ಪು ಮಾಹಿತಿಯನ್ನು ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ, ಚೀನಾ ಜೊತೆಗಿನ ಬಾರ್ಡರ್ ತೆರೆದುಕೊಳ್ಳುವಂತೆ ಸೂಚಿಸಿತ್ತು.ಅದೃಷ್ಟವಶಾತ್ ಡಬ್ಲ್ಯುಎಚ್‌ಒ ಸಲಹೆಯನ್ನು ನಾನು ನಿರಾಕರಿಸಿದ್ದೆ' ಎಂದು ಟ್ರಂಪ್ ಹೇಳಿದ್ದರು.

ಹೀಗಾಗಿ ಕೊರೊನಾ ವಿರುದ್ಧ ಎರಡೂ ರಾಷ್ಟ್ರಗಳು ಒಗ್ಗಟ್ಟಾಗಿ ಹೋರಾಟ ನಡೆಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+