ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಆರೋಗ್ಯ ಸಂಸ್ಥೆಯಿಂದ ಬಂತು ಮತ್ತೊಂದು ಎಚ್ಚರಿಕೆ ಸಂದೇಶ

|
Google Oneindia Kannada News

ಬೆಂಗಳೂರು, ಮೇ 12: ತರಾತುರಿಯಲ್ಲಿ ಲಾಕ್‌ಡೌನ್ ಸಡಿಲ ಮಾಡಿ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಲು ತುದಿಗಾಲಿನಲ್ಲಿ ನಿಂತಿರುವ ರಾಷ್ಟ್ರಗಳಿಗೆ ವಿಶ್ವಸಂಸ್ಥೆ ಎಚ್ಚರಿಕೆ ಸಂದೇಶ ರವಾನಿಸಿದೆ.

ಕೊರೊನಾ ಕೇಸುಗಳು ಕಡಿಮೆಯಿದ್ದ ದಕ್ಷಿಣ ಕೊರಿಯಾದಲ್ಲಿ ಇದೀಗ ದಿಢೀರ್ ಏರಿಕೆಯಾಗಿದೆ. ಲಾಕ್ ಡೌನ್ ಸಡಿಲಿಕೆ ಮಾಡಿದ ನಂತರ ನೈಟ್ ಕ್ಲಬ್ ಗಳ ಮೂಲಕ ಸೋಂಕು ವ್ಯಾಪಕವಾಗಿ ಹರಡಿದೆ ಎಂದು ಹೇಳಿದೆ.

ದೇಶದಲ್ಲೀಗ ಕೊರೊನಾ ಹಾಟ್‌ಸ್ಪಾಟ್‌ ರಾಜ್ಯ ಮಹಾರಾಷ್ಟ್ರ ಅಲ್ಲ, ತಮಿಳುನಾಡುದೇಶದಲ್ಲೀಗ ಕೊರೊನಾ ಹಾಟ್‌ಸ್ಪಾಟ್‌ ರಾಜ್ಯ ಮಹಾರಾಷ್ಟ್ರ ಅಲ್ಲ, ತಮಿಳುನಾಡು

ಲಾಕ್ ಡೌನ್ ಸಡಿಲಿಕೆ ಮಾಡಿದ ನಂತರ ಜರ್ಮನಿಯಲ್ಲಿ ಕೊವಿಡ್-19 ಹೊಸ ಕೇಸುಗಳು ದಿಢೀರ್ ಏರಿಕೆಯಾದ ನಂತರ ವಿಶ್ವ ಆರೋಗ್ಯ ಸಂಸ್ಥೆ ಈ ಎಚ್ಚರಿಕೆ ಘೋಷಿಸಿದೆ.

WHO Urges Extreme Vigilance As Countries Exit Lockdown

ಜರ್ಮನಿ ಮತ್ತು ದಕ್ಷಿಣ ಕೊರಿಯಾ ದೇಶಗಳು ಹೊಸ ರೀತಿಯಲ್ಲಿ ಕೊರೊನಾ ವೈರಸ್ ನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿದ್ದು ಈ ದೇಶಗಳು ಕೈಗೊಂಡ ಕಟ್ಟುನಿಟ್ಟಾದ ಮತ್ತು ಯೋಜಿತ ಎಚ್ಚರಿಕೆ ಮಾರ್ಗಗಳು ಅನುಕರಣೀಯ. ಎರಡನೇ ಬಾರಿ ವೈರಸ್ ಹುಟ್ಟಿಕೊಂಡು ಹಬ್ಬುವುದನ್ನು ತಡೆಗಟ್ಟಬಹುದು ಎಂದು ಮೈಕ್ ಹೇಳಿದ್ದಾರೆ.

ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಸಡಿಲಿಕೆ ಮಾಡಿರುವುದು ಸಮಾಧಾನ ತಂದಿದೆ. ಆದರೆ ಕೊರೊನಾ ವೈರಸ್ ಸೋಂಕಿನ ಬಗ್ಗೆ ಇನ್ನು ಮುಂದೆ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು. ಸೋಂಕು ಸಣ್ಣ ಪ್ರಮಾಣದಲ್ಲಿ ಹುಟ್ಟಿಕೊಂಡು ಅದು ಮತ್ತೆ ಹರಡುವ ಬಗ್ಗೆ ಯಾವುದೇ ಸಂಶಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಡಾ ಮೈಕ್ ಹೇಳಿದ್ದಾರೆ.

ಕೊರೊನಾ ವೈರಸ್ ಸೋಂಕಿನ ಅಲೆ ಎರಡನೇ ಬಾರಿ ಪಸರಿಸುತ್ತಿರುವ ಬಗ್ಗೆ ತೀವ್ರ ಆತಂಕಗೊಂಡಿರುವ ವಿಶ್ವ ಆರೋಗ್ಯ ಸಂಸ್ಥೆ ಲಾಕ್ ಡೌನ್ ಸಡಿಲಿಕೆ ಮಾಡಿ ಚಟುವಟಿಕೆಗಳನ್ನು ಆರಂಭಿಸುವಾಗ ದೇಶಗಳು ತೀವ್ರ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದೆ.

ವಿಶ್ವದಾದ್ಯಂತ 280,000 ಮಂದಿ ಮೃತಪಟ್ಟಿದ್ದಾರೆ, 40ಕ್ಕೂ ಹೆಚ್ಚು ಲಕ್ಷ ಮಂದಿ ಕೊರೊನಾವೈರಸ್‌ಗೆ ತುತ್ತಾಗಿದ್ದಾರೆ.

English summary
The World Health Organization on Monday hailed dwindling COVID-19 infection rates and deaths in some countries, but called on nations to show "extreme vigilance" as they begin loosening their restrictions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X