ವೈರಲ್ ವಿಡಿಯೋ: ಬೇಸಿಗೆಯ ಬಿಸಿಲಿನಿಂದ ರಕ್ಷಣೆ ಪಡೆಯಲು ಕತ್ತೆಯ ಬಳಕೆ!
ಇಸ್ಲಾಮಾಬಾದ್, ಏಪ್ರಿಲ್ 21: ಎಂಥದ್ದೇ ಸಾಹಸಪಟ್ಟರೂ ಸಾಮಾನ್ಯ ಜನರು ಬಿಸಿಲ ಝಳದಿಂದ ರಕ್ಷಣೆ ಪಡೆಯುವುದು ಕಷ್ಟ, ಆದರೆ ಇಲ್ಲೊಬ್ಬ ವ್ಯಕ್ತಿ ಬಿಸಿಲಿಂದ ರಕ್ಷಣೆ ಪಡೆಯಲು ಕತ್ತೆಯನ್ನು ಬಳಕೆ ಮಾಡಿದ್ದಾರೆ.
ಇದು ಪಾಕಿಸ್ತಾನದ ಹಳ್ಳಿಯೊಂದರಲ್ಲಿ ನಡೆದ ಘಟನೆ, ಮರುಭೂಮಿಯ ಮಧ್ಯದಲ್ಲಿ ಮಂಚವನ್ನು ಹಾಕಿ, ಕಂಬವೊಂದು ನೆಟ್ಟು ಅದಕ್ಕೆ ಎರಡು ಬೆಡ್‌ಶೀಟ್‌ನ್ನು ತೂಗಿಹಾಕಲಾಗಿತ್ತು. ಆ ಕಂಬಕ್ಕೆ ಕತ್ತೆಯನ್ನು ಕಟ್ಟಲಾಗಿದೆ.

ಕತ್ತೆ ಆ ಕಡೆ ಈ ಕಡೆ ತಿರುಗುತ್ತಿದ್ದಂತೆ ಕೋಲು ಕೂಡ ತಿರುಗಿ, ಕಟ್ಟಿರುವ ಶೀಟ್ ಮೂಲಕ ಗಾಳಿ ಬೀಸಲಿದ್ದು, ಸೆಕೆ ಕೊಂಚ ಕಡಿಮೆಯಾಗಲಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
#Summer Solutions -
— Rupin Sharma IPS (@rupin1992) April 19, 2021
देसी उपाय गर्मी से बचने का..😊😊
पड़ोस से....@hvgoenka @vinodkapri pic.twitter.com/KHQVxj0Unn
ಬೇಸಿಗೆಯ ಬಿಸಿಲಿನ ಕುರಿತು ಪಾಕಿಸ್ತಾನಿ ಹಾಡೊಂದು ವಿಡಿಯೋದಲ್ಲಿ ಕೇಳಿಸುತ್ತದೆ. ಬಿಸಿಲಿನಿಂದ ಕಾಪಾಡಲು ದೇಶಿ ಪರಿಹಾರ ಎಂದು ಐಪಿಎಸ್ ಅಧಿಕಾರಿ ರೂಪೇಶ್ ಶರ್ಮಾ ಕಮೆಂಟ್ ಮಾಡಿದ್ದಾರೆ.
ಏಪ್ರಿಲ್-ಮೇ ಸಾಮಾನ್ಯವಾಗಿ ವಿಪರೀತ ಬಿಸಿಲಿರುವ ತಿಂಗಳುಗಳಾಗಿವೆ. ಆದರೆ ಈ ಬಾರಿ ದೇಶದಲ್ಲಿ ಆಗೊಂದು ಈಗೊಂದು ಮಳೆಯಾಗುತ್ತಿರುವ ಕಾರಣ ತಾಪಮಾನ ಕೊಂಚ ಕಡಿಮೆ ಇದೆ.












Click it and Unblock the Notifications