Russia & Ukraine War: 100 ಮಿಲಿಯನ್ ಡಾಲರ್ ಶಸ್ತ್ರಾಸ್ತ್ರ ಮಾರಾಟಕ್ಕೆ ಒಪ್ಪಿಗೆ, ಉಕ್ರೇನ್ ಬೆನ್ನಿಗೆ ಅಮೆರಿಕ!
ಅಮೆರಿಕ ಇದೀಗ ಮತ್ತೊಮ್ಮೆ ತಾನು ಉಕ್ರೇನ್ ಬೆನ್ನಿಗೆ ನಿಂತಿರುವ ಮುನ್ಸೂಚನೆ ನೀಡಿದೆ. ಈ ಮೂಲಕ ಉಕ್ರೇನ್ & ರಷ್ಯಾ ಯುದ್ಧದಲ್ಲಿ ಇನ್ನೊಮ್ಮೆ ಉಕ್ರೇನ್ ಬೆಂಬಲಿಸುವ ಮೂಲಕ ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ ಅಮೆರಿಕ. ಈಗಾಗಲೇ 1000 ದಿನಗಳನ್ನ ಪೂರೈಸಿರುವ ಉಕ್ರೇನ್ & ರಷ್ಯಾ ಯುದ್ಧ ಸಾಕಷ್ಟು ಘೋರ ಪರಿಣಾಮ ಹುಟ್ಟುಹಾಕಿದೆ. ಇದರ ಪರಿಣಾಮ ಜಾಗತಿಕ ಮಟ್ಟದಲ್ಲಿ 3ನೇ ಮಹಾಯುದ್ಧದ ಭಯ ಕೂಡ ಆವರಿಸಿದೆ. ಇಷ್ಟೆಲ್ಲದರ ನಡುವೆ ಮತ್ತೊಂದು ಮಹತ್ವದ ಘಟನೆ ಸಂಭವಿಸಿದೆ.
ರಷ್ಯಾ ಕೊಟ್ಟಿರುವ ಏಟಿಗೆ & ರಷ್ಯಾ ಸೈನಿಕರ ದಾಳಿಗೆ ಉಕ್ರೇನ್ ನಲುಗಿ ಹೋಗಿದೆ. ಅಲ್ಲದೆ ಈ ಒತ್ತಡದಿಂದ ಹೊರಗೆ ಬರಲು ಕೂಡ ಪರದಾಡುತ್ತಿದೆ ಉಕ್ರೇನ್. ಪರಿಸ್ಥಿತಿ ಕೈಮೀರಿದ್ದು ಯಾವ ಕ್ಷಣದಲ್ಲಿ ರಷ್ಯಾ ಎದುರು ಉಕ್ರೇನ್ ಸೋತು ಹೋಗುತ್ತೋ? ಎಂಬ ಪ್ರಶ್ನೆ ಉದ್ಭವಿಸಿ ಯುರೋಪ್ ಭಾಗದಲ್ಲಿ ಭಯ ಆವರಿಸಿದೆ. ಇಂತಹ ಸಮಯದಲ್ಲೇ ಅಮೆರಿಕ ಮಹತ್ವದ & ಜಗತ್ತಿನ ಗಮನ ಸೆಳೆಯುವ ನಿರ್ಧಾರ ಕೈಗೊಂಡಿದೆ.

100 ಮಿಲಿಯನ್ ಡಾಲರ್ ಶಸ್ತ್ರಾಸ್ತ್ರ ಮಾರಾಟ!
ಅಷ್ಟಕ್ಕೂ ಇದೀಗ ಅಮೆರಿಕ & ಉಕ್ರೇನ್ ನಡುವೆ ದೊಡ್ಡ ಒಪ್ಪಂದ ಒಂದು ನಡೆಯುತ್ತಿದ್ದು, ಸುಮಾರು 100 ಮಿಲಿಯನ್ ಡಾಲರ್ ಮೊತ್ತದ ಶಸ್ತ್ರಾಸ್ತ್ರ ಮಾರಾಟಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಶಸ್ತ್ರಾಸ್ತ್ರಗಳ ಜೊತೆಗೆ ಮಿಲಿಟರಿ ಉಪಕರಣಗಳು ಕೂಡ ಸೇರಲಿದ್ದು, ಉಕ್ರೇನ್ ಸೇನೆಗೆ ಹೀಗೆ ಮತ್ತಷ್ಟು ಬಲ ತುಂಬುವ ಕೆಲಸ ಇದೀಗ ಅಮೆರಿಕದ ಕಡೆಯಿಂದ ನಡೆದಿದೆ. ಅಮೆರಿಕ ಈ ಒಪ್ಪಂದಕ್ಕೆ ಒಪ್ಪಿಗೆ ಕೂಡ ಸೂಚಿಸಿದೆ ಎಂಬ ಸುದ್ದಿ ಹೊರ ಬಿದ್ದಿದೆ.
ಉಕ್ರೇನ್ ನೆಲದಲ್ಲಿ ಭಯದ ವಾತಾವರಣ
ರಷ್ಯಾ ಸೇನೆಯ ದಾಳಿಗೆ ಬೆಚ್ಚಿ ಬಿದ್ದಿರುವ ಉಕ್ರೇನ್ ನೆಲದಲ್ಲಿ ಕ್ಷಣಕ್ಷಣಕ್ಕೂ ಇದೀಗ ಭಯದ ವಾತಾವರಣ ನಿರ್ಮಾಣ ಆಗುತ್ತಿದೆ. ಅದರಲ್ಲೂ ಉಕ್ರೇನ್ ರಾಜಧಾನಿ ಕೀವ್ ಮೇಲೆ ಭಾರಿ ದೊಡ್ಡ ಪ್ರಮಾಣದಲ್ಲಿ ಕ್ಷಿಪಣಿ ದಾಳಿ ನಡೆಯುವ ಆತಂಕ ಕಾಡುತ್ತಿದೆ. ಹೀಗಾಗಿ ಉಕ್ರೇನ್‌ನ ರಾಜಧಾನಿ ಸುತ್ತಮುತ್ತಲೂ ಹೈಅಲರ್ಟ್ ಘೋಷಣೆ ಮಾಡಲಾಗಿದ್ದು, ರಷ್ಯಾ ಸೇನೆಯಿಂದ ಮಿಸೈಲ್ ಅಂದ್ರೆ ಕ್ಷಿಪಣಿಗಳ ಮೂಲಕ ದಾಳಿ ನಡೆಯುವ ಭಯ ಅಲ್ಲಿ ಆವರಿಸಿದೆ.
ಯುದ್ಧ ನಿಲ್ಲಿಸುತ್ತಾರಾ ಡೊನಾಲ್ಡ್ ಟ್ರಂಪ್?
ರಷ್ಯಾ & ಉಕ್ರೇನ್ ಯುದ್ಧ ಸಾಕಷ್ಟು ಘೋರವಾಗಿರುವ ಸಮಯದಲ್ಲೇ, ಅಮೆರಿಕದಲ್ಲಿ ಈ ಸಮಯದಲ್ಲಿ ದೊಡ್ಡ ಬದಲಾವಣೆ ನಡೆಯುತ್ತಿದೆ. ಅದು ಏನಂದ್ರೆ, ಜೋ ಬೈಡನ್ ಆಡಳಿತ ನೋಡಿ ಬೇಸತ್ತು ಹೋಗಿದ್ದ ಅಮೆರಿಕದ ಮತದಾರರು ಈಗ ಡೊನಾಲ್ಡ್ ಟ್ರಂಪ್ ಅವರಿಗೆ ಚಾನ್ಸ್ ಕೊಟ್ಟಿದ್ದಾರೆ.
ಯಾಕಂದ್ರೆ ಉಕ್ರೇನ್ ಮತ್ತು ರಷ್ಯಾ ಯುದ್ಧದಲ್ಲಿ ಅಮೆರಿಕ ಎಂಟ್ರಿ ಆಗಿರುವುದು ಅಮೆರಿಕದ ಮತದಾರರಿಗೆ ಇಷ್ಟ ಇರಲಿಲ್ಲ. ಹೀಗಾಗಿ ಡೊನಾಲ್ಡ್ ಟ್ರಂಪ್ ಈ ಯುದ್ಧವನ್ನ ನಿಲ್ಲಿಸಿ ಶಾಂತಿ ಸ್ಥಾಪನೆ ಮಾಡುವ ಶಪಥ ಮಾಡಿದ್ದಾರೆ. ಇಷ್ಟೆಲ್ಲದರ ನಡುವೆ ಬೈಡನ್ ಕೊನೆಯ ಹಂತದಲ್ಲಿ ಉಕ್ರೇನ್‌ಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದು, ಪರಿಸ್ಥಿತಿಯು ಕುತೂಹಲದ ಘಟಕ್ಕೆ ಎಂಟ್ರಿ ಕೊಟ್ಟಿದೆ.












Click it and Unblock the Notifications