ಭಾರತಕ್ಕೆ ದೊಡ್ಡ ಶಾಕ್ ಕೊಟ್ಟ ಅಮೆರಿಕ: ಶೇ.25 ರಷ್ಟು ತೆರಿಗೆ, ವಿವಿಧ ವಸ್ತುಗಳ ಬೆಲೆ ಏರಿಕೆಯ ಭೀತಿ!
ಪಾಕಿಸ್ತಾನ ಹಾಗೂ ಭಾರತದ ಯುದ್ಧದ ನಂತರ "ಕದನ ವಿರಾಮದ ಕ್ರೆಡಿಟ್" ಸಿಗಲಿಲ್ಲ ಎಂದು ಪರಿತಪಿಸುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೊನೆಗೂ ಭಾರತದ ಮೇಲೆ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಿವಿಧ ದೇಶಗಳ ಮೇಲೆ ತೆರಿಗೆ ಏರಿಕೆಯ ಮೂಲಕವೇ ಶಾಕ್ ಕೊಡುತ್ತಿರುವ ಡೊನಾಲ್ಡ್ ಟ್ರಂಪ್ ಅವರು ಮಿತ್ರರಾಷ್ಟ್ರ ಎಂದು ಹೇಳಿಕೊಳ್ಳುತ್ತಲ್ಲೇ ಭಾರತದ ಮೇಲೆ ಬರೋಬ್ಬರಿ ಶೇ. 25% ತೆರಿಗೆ ವಿಧಿಸುವುದಾಗಿ ಘೋಷಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತದ ಮೇಲೆ ಡೊನಾಲ್ಡ್ ಟ್ರಂಪ್ ಅವರು ಕತ್ತಿ ಮಸಿಯುವುದು ಮುಂದುವರಿದಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಕತ್ತಿ ಮಸಿಯುತ್ತಿರುವುದಕ್ಕೆ ಪ್ರಮುಖ ಕಾರಣ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ. ಹೌದು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷ ಹಾಗೂ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ನಂತರ ಎರಡೂ ದೇಶಗಳ ನಡುವೆ ಕದನ ವಿರಾಮ ಘೋಷಣೆ ಆಗುವುದಕ್ಕೆ ನಾನೇ ಕಾರಣ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬೆನ್ನು ತಟ್ಟಿಕೊಂಡಿದ್ದರು. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಭಾರತ ಸರ್ಕಾರವು ಸಂಪೂರ್ಣವಾಗಿ ನಿರಾಕರಿಸಿತ್ತು.

ಮಂಗಳವಾರ ಸಂಸತ್ತಿನಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷದಲ್ಲಿ ಯಾವುದೇ ದೇಶ ಮಧ್ಯಸ್ಥಿಕೆ ವಹಿಸಿರಲಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಹೀಗಾಗಿ, ಕ್ರೆಡಿಟ್ ತೆಗೆದುಕೊಳ್ಳುವ ಆಸೆಯಲ್ಲಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಭಾರೀ ನಿರಾಸೆ ಆಗಿದೆ. ಇದರ ಹೊರತಾಗಿಯೂ ಭಾರತದ ವ್ಯಾಪಾರ ಕ್ಷೇತ್ರದ ಮೇಲೆ ಡೊನಾಲ್ಡ್ ಟ್ರಂಪ್ ಅವರು ಕಣ್ಣಿರಿಸಿದ್ದರು. ಇದರ ಭಾಗವಾಗಿ ಭಾರತದ ಮೇಲೆ ಬರೋಬ್ಬರಿ ಶೇ 25ರಷ್ಟು ತೆರಿಗೆ ವಿಧಿಸುವುದಕ್ಕೆ ಅಮೆರಿಕ ನಿರ್ಧರಿಸಿದೆ. ಈ ಕ್ರಮ ಭಾರತದ ಆರ್ಥಿಕ ವಲಯದ ಮೇಲೆ ಭಾರೀ ಪೆಟ್ಟು ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಭಾರತೀಯ ವಸ್ತುಗಳ ಅಥವಾ ಆಮದುಗಳ ಮೇಲೆ ಶೇ 25% ತೆರಿಗೆ ಮತ್ತು ಕೆಲವು ಪ್ರಮುಖ ದಂಡವನ್ನೂ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಿದ್ದಾರೆ. ಭಾರತವು ರಷ್ಯಾದಿಂದ ನಿರಂತರವಾಗಿ ತೈಲ ಆಮದು ಮಾಡಿಕೊಳ್ಳುತ್ತಿದೆ. ಇದು ಅಮೆರಿಕದ ಕೋಪಕ್ಕೆ ಮತ್ತೊಂದು ಕಾರಣ. ಉಕ್ರೇನ್ ಹಾಗೂ ರಷ್ಯಾ ಯುದ್ಧ ಪ್ರಾರಂಭವಾದ ಮೇಲೆ ಅಮೆರಿಕ ಸೇರಿದಂತೆ ಯೂರೋಪ್ ಒಕ್ಕೂಟವು ರಷ್ಯಾದ ಮೇಲೆ ಆರ್ಥಿಕ ನಿರ್ಬಂಧವನ್ನು ವಿಧಿಸಿದೆ. ಹೀಗಾಗಿ, ರಷ್ಯಾ ಮತ್ತು ಭಾರತದ ನಡುವೆ ವ್ಯಾಪಾರ ಒಪ್ಪಂದ ಜೋರಾಗಿದೆ. ಇದು ಅಮೆರಿಕದ ಕಣ್ಣು ಕೆಂಪಗಾಗಿಸಿದೆ.
ಇದೀಗ ಟ್ರೂತ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತವನ್ನು ಅಮೆರಿಕ ಮಿತ್ರ ರಾಷ್ಟ್ರ ಎಂದು ಪರಿಗಣಿಸಲಾಗಿದ್ದರೂ, ಭಾರತದ ಅತಿಯಾದ ತೆರಿಗೆಗಳು ಹಾಗೂ ನೀತಿಗಳಿಂದಾಗಿ ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳಿಗೆ ಸೀಮಿತವಾಗಿವೆ ಎಂದಿದ್ದಾರೆ.
ಭಾರತ ನಮ್ಮ ಸ್ನೇಹಿತ ರಾಷ್ಟ್ರವಾಗಿದೆ ನಿಜ. ಆದರೆ, ನಾವು ಅವರೊಂದಿಗೆ ಬಹಳ ಕಡಿಮೆ ವ್ಯವಹಾರವನ್ನು ಮಾಡಿದ್ದೇವೆ. ಏಕೆಂದರೆ ಅವರ ತೆರಿಗೆಗಳು ತುಂಬಾ ಹೆಚ್ಚಾಗಿದೆ. ಅದು ವಿಶ್ವದಲ್ಲೇ ಅತಿ ಹೆಚ್ಚು, ಅವರು ವಿಶ್ವದ ಇತರ ದೇಶಕ್ಕಿಂತ ಹೆಚ್ಚು ಕಠಿಣ ವ್ಯಾಪಾರ ನಿಯಮಗಳನ್ನು ಅಳವಡಿಸಿಕೊಂಡಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.
ವಿವಿಧ ವಸ್ತುಗಳ ಬೆಲೆ ಏರಿಕೆ: ಇನ್ನು ಡೊನಾಲ್ಡ್ ಟ್ರಂಪ್ ಅವರು ಆಮದು ವಸ್ತುಗಳ ಮೇಲೆ ಶೇ 25% ರಷ್ಟು ಶುಲ್ಕ ವಿಧಿಸಿರುವುದರಿಂದ ಮುಂದಿನ ದಿನಗಳಲ್ಲಿ ಭಾರತದಲ್ಲಿ ವಿವಿಧ ವಸ್ತುಗಳ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.












Click it and Unblock the Notifications