US Elections 2024: ಅಮೆರಿಕ ಚುನಾವಣೆ: ಮಾಸ್‌ ಡೈಲಾಗ್‌, ಮಸಾಲೆ & ಟಫ್ ಫೈಟ್!

US Elections 2024 Updates: ಅಮೆರಿಕ ಅಧ್ಯಕ್ಷೀಯ ಚುನಾವಣೆಯು ಈ ಬಾರಿ ಮಸಾಲ, ಮಾಸ್‌ ಡೈಲಾಗ್‌ಗಳಿಂದಲೇ ತುಂಬೋಗಿದೆ. ಮಂಗಳವಾರ ಮತದಾನ ಪ್ರಕ್ರಿಯೆ ಕೆಲವು ಭಾಗದಲ್ಲಿ ತುಸು ಇಳಿಕೆಯಾಗಿತ್ತು. ಆದರೆ, ಬಹುತೇಕ ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ಅತ್ಯಂತ ಜೋರಾಗಿಯೇ ನಡೆದಿದೆ. ಈ ಬಾರಿಯ ಚುನಾವಣೆ ಅತ್ಯಂತ ಜಿದ್ದಾಜಿದ್ದಿನ ಹಾಗೂ ಗೆಲುವಿಗೆ ಕೂದಲೆಳೆಯ ಅಂತರ ಮಾತ್ರ ಬಾಕಿ ಉಳಿದಿದೆ ಅಂತಲೇ ವಿಶ್ಲೇಷಿಸಲಾಗುತ್ತಿದೆ.

ಅಧಿಕೃತವಾಗಿ ಮತದಾನ ಪ್ರಕ್ರಿಯೆಗಳು ಪ್ರಾರಂಭವಾಗುತ್ತಿದ್ದಂತೆಯೇ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ 60 ಮತ್ತು ರಿಪಬ್ಲಿಕ್‌ ಪಾರ್ಟಿಯ ಡೊನಾಲ್ಡ್‌ ಟ್ರಂಪ್ 78 ಮತ ಪ್ರಮಾಣದ ಪೈಪೋಟಿಯಲ್ಲಿದ್ದರು. ಶ್ವೇತಭವನದ ಪ್ರವೇಶಕ್ಕಾಗಿ ಎರಡೂ ಪಕ್ಷಗಳ ಅಭ್ಯರ್ಥಿಗಳು ಫೂಲ್‌ ಪೈಪೋಟಿಯನ್ನೇ ಕೊಡ್ತಾ ಇದ್ದಾರೆ. ಹೀಗಾಗಿ, ಇದು ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿದೆ.

US Elections Mass Dialogue Spice amp amp Tough Fight

ಅಂತಿಮ ಪ್ರಚಾರದ ದಿನದಲ್ಲೂ ಎರಡೂ ಪಕ್ಷದ ಅಭ್ಯರ್ಥಿಗಳು ದಣಿವರಿಯದೆ ಪ್ರಚಾರ ಮಾಡಿದ್ದಾರೆ. ಈ ಬಾರಿ ಸ್ವಲ್ಪ ಎಡವಿದರೂ ಯಾರಿಗಾದರೂ ಅದೃಷ್ಟ ಲಕ್ಷ್ಮಿ ಒಲಿಯಬಹುದು ಎನ್ನುವ ವಾತಾವರಣ ಇದೆ. ಇದೇ ಕಾರಣಕ್ಕೆ ಎರಡೂ ಪಕ್ಷದ ಅಭ್ಯರ್ಥಿಗಳು ರಿಸ್ಕ್‌ ತೆಗೆದುಕೊಂಡಿಲ್ಲ. ಡೆಮಾಕ್ರಟಿಕ್ ಹಾಗೂ ರಿಪಬ್ಲಿಕ್‌ ಪಾರ್ಟಿಯ ಬೆಂಬಲಿಗರು ಸಹ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಮ್ಮ ಪಕ್ಷದ ಹಾಗೂ ಇಷ್ಟದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದಾರೆ.

ಈ ಬಾರಿ ಕಮಲಾ ಹ್ಯಾರಿಸ್ ಅವರು ಎರೆಡೆರಡು ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ಅಂತಲೇ ಹೇಳಲಾಗ್ತಿದೆ. ಹಾಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರು ಚುನಾವಣಾ ಕಣದಿಂದ ಹಿಂದೆ ಸರಿದಿರುವುದರಿಂದ ಈ ಬಾರಿ ಕಮಲಾ ಹ್ಯಾರಿಸ್‌ ಅವರಿಗೆ ಅದೃಷ್ಟ ಸಿಕ್ಕಿದೆ. ಈಗ ಗೆದ್ದರೆ ಪರಿಶ್ರಮ ಹಾಗೂ ಅದೃಷ್ಟದ ಎರಡನೇ ಗೆಲುವು ಅಂತಲೇ ಕೌಂಟ್ ಆಗಲಿದೆ.

US Elections Mass Dialogue Spice amp amp Tough Fight

ಇನ್ನು ಈ ಬಾರಿ ಅಮೆರಿಕ ಚುನಾವಣೆಯಲ್ಲಿ ಈ ಬಾರಿ ಹಲವು ಹೈಡ್ರಾಮಾ ಹಾಗೂ ಭಯಾನಕ ಘಟನೆಗಳು ನಡೆದಿದ್ದವು. ಅಮೆರಿಕದಲ್ಲಿ ಅಧ್ಯಕ್ಷರನ್ನೇ ಗುಂಡಿಟ್ಟು ಕೊಂದ ಇತಿಹಾಸವಿದೆ. ಇಲ್ಲಿಯವರೆಗೂ ಜಾನ್‌ ಎಫ್‌. ಕೆನಡಿ ಅವರ ಸಾ* ನಿಗೂಢವಾಗಿಯೇ ಉಳಿದಿದೆ. ಅವರನ್ನು ಗುಂಡಿಟ್ಟು ಹ* ಮಾಡಲಾಗಿತ್ತು. ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್ ಅವರನ್ನು ಎರಡೆರಡು ಬಾರಿ ಕೊಲೆ ಮಾಡಲು ಪ್ರಯತ್ನಿಸಲಾಗಿತ್ತು.

ಅವರ ಮೇಲೆ ಎರಡು ಬಾರಿ ದಾಳಿಗಳು ಆಗಿದ್ದವು. ಶೂಟ್‌ಔಟ್‌ ನಲ್ಲಿ ಡೊನಾಲ್ಡ್‌ ಟ್ರಂಪ್‌ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು.

ಯುಎಸ್‌ ಎಲೆಕ್ಷನ್‌ನಲ್ಲಿ ಮಿಲಿಯನ್ ಮತದಾರರು ತಮ್ಮ ಮತ ಚಲಾಯಿಸುವ ನಿರೀಕ್ಷೆಯಿದೆ. ಈಗಾಗಲೇ ಹಲವು ಮತದಾರರು ಅವರ ಹಕ್ಕುಗಳನ್ನು ಚಲಾಯಿಸಿದ್ದಾರೆ.

ಟ್ರಂಪ್‌& ಬೆಂಬಲಿಗರದ್ದೇ ಭಯ: ಇನ್ನು ಈ ಬಾರಿಯ ಚುನಾವಣೆ ಫಲಿತಾಂಶವು ಸಣ್ಣ ಸುಳಿವನ್ನು ಸಹ ನೀಡುತ್ತಿಲ್ಲ. ಸಾಮಾನ್ಯವಾಗಿ ಯಾರು ಗೆಲ್ಲಬಹುದು ಎನ್ನುವುದು ಮತದಾನ ಶುರುವಾಗಲಾದರೂ ಗೊತ್ತಾಗುತ್ತಿತ್ತು. ಆದರೆ, ಈ ಬಾರಿ ಅದು ಸಹ ಕಾಣಿಸುತ್ತಿಲ್ಲ. ಇನ್ನು ಕಳೆದ ಬಾರಿ ಸೋಲಾದಾಗ ಡೊನಾಲ್ಡ್‌ ಟ್ರಂಪ್‌ ಅವರ ಬೆಂಬಲಿಗರು ಅಮೆರಿಕದಲ್ಲಿ ಭಾರೀ ಗದ್ದಲವನ್ನೇ ಸೃಷ್ಟಿ ಮಾಡಿದ್ದರು. ಹೀಗಾಗಿ, ಈ ಬಾರಿ ಅತ್ಯಂತ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಶ್ವೇತಭವನದ (ವೈಟ್‌ಹೌಸ್‌) ಸುತ್ತಮುತ್ತ ಭಾರೀ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿದೆ. ಒಂದೊಮ್ಮೆ ಈ ಬಾರಿ ಟ್ರಂಪ್ ಸೋತರೆ ನಂತರ ಪ್ರಕ್ಷುಬ್ಧತೆ ವಾತಾವರಣ ಎದುರಾಗುವ ಆತಂಕ ಇದೆ. ಹಿಂಸಾಚಾರದ ಭಯವಿದೆ. 2020ರಲ್ಲಿ ಈ ರೀತಿ ಘಟನೆ ನಡೆದಿತ್ತು. ಹೀಗಾಗಿ ಶ್ವೇತಭವನದ ಸುತ್ತಲೂ (ಪೊಲೀಸ್‌ ಸರ್ಪಗಾವಲು) ತಡೆಗೋಡೆಗಳನ್ನು ನಿರ್ಮಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+