Us Elections: ವಿಯೆಟ್ನಾಂ ಯುದ್ಧದಲ್ಲಿ ಮೂಗು ತೂರಿಸಿದಾಗಲೇ ಅಮೆರಿಕನ್ಸ್ ಪಾಠ ಕಲಿಸಿದ್ದರು!
ಅಮೆರಿಕ ವಿಶ್ವದ ದೊಡ್ಡಣ ನಿಜ. ಆದರೆ, ಬೇರೆ ರಾಷ್ಟ್ರಗಳ ವಿಚಾರದಲ್ಲಿ ಅಮೆರಿಕ ಮೂಗು ತೂರಿಸುವುದನ್ನು ಅವರು ಎಂದೂ ಒಪ್ಪಿಕೊಂಡಿಲ್ಲ. ಅದಕ್ಕೆ 2024ನೇ ಸಾಲಿನ ಅಮೆರಿಕ ಅಧ್ಯಕ್ಷೀಯ ಚುನಾವಣೆ ಮತ್ತೊಂದು ಸಾಕ್ಷಿ ಎನ್ನುವಂತಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಬಾರಿ ಡೆಮಾಕ್ರಟಿಕ್ ಪಕ್ಷ ಮಕಾಡೆ ಮಲಗಿದೆ. ಇದಕ್ಕೆ ಕಾರಣ ಅಮೆರಿಕದ ಅಧ್ಯಕ್ಷ ಹಾಗೂ ಡೆಮಾಕ್ರಟಿಕ್ ಪಕ್ಷ ಕೆಲವು ರಾಷ್ಟ್ರಗಳ ವಿಚಾರದಲ್ಲಿ ಮೂಗು ತೂರಿಸಿದ್ದು ಅಂತ ಹೇಳಲಾಗ್ತಿದೆ.
ಅಮೆರಿಕದ ಜನರು ಎಲ್ಲವನ್ನೂ ಹಳೆದು ತೂಗಿಯೇ ನಿರ್ಧರಿಸುವ ಜನ. ನಮ್ಮ ತೆರಿಗೆಯ ದುಡ್ಡು ಬೇರೆ ರಾಷ್ಟ್ರಗಳಿಗೆ ಏಕೆ ಕೊಡಬೇಕು ಎನ್ನುವುದು ಅವರ ಮನೋಭಾವನೆ. ಅದರಲ್ಲಿ ಅರ್ಥವೂ ಇದೆ. ಅಮೆರಿಕದ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷರಾಗಿದ್ದ ಜೋ ಬೈಡನ್ ಅವರು ಅಮೆರಿಕ ಅಧ್ಯಕ್ಷರಾದ ಮೇಲೆ ವಿವಿಧ ರಾಷ್ಟ್ರಗಳ ಆಂತರಿಕ ವಿಚಾರದಲ್ಲಿ ಅಮೆರಿಕ ಜಾಸ್ತಿ ಮೂಗು ತೂರಿಸ್ತಿದೆ ಅಂತನೇ ಹೇಳಲಾಗಿತ್ತು. ಇದು ಅಮೆರಿಕನ್‌ರಿಗೆ ಸರಿ ಎನಿಸಿರಲಿಲ್ಲ.

ಉಕ್ರೇನ್ ಹಾಗೂ ರಷ್ಯಾ ವಾರ್‌ನಲ್ಲಿ ಅಮೆರಿಕದ ಪಾತ್ರವೇ ಪ್ರಧಾನವಾಗಿತ್ತು. ಸಣ್ಣ ಉಕ್ರೇನ್ ರಾಷ್ಟ್ರವನ್ನು ರಷ್ಯಾದ ಮೇಲೆ ಎತ್ತಿಕಟ್ಟುವಲ್ಲಿ ಅಮೆರಿಕದ ಪಾತ್ರ ಪ್ರಧಾನವಾಗಿತ್ತು. ಅಲ್ಲದೇ ನ್ಯಾಟೋ ಸದಸ್ಯತ್ವದ ಆಸೆ ತೋರಿಸಲಾಗಿತ್ತು. ಇದರಿಂದ ಉಕ್ರೇನ್ ಚೇತರಿಸಿಕೊಳ್ಳಲು ಆಗದಷ್ಟು ಆರ್ಥಿಕ ಕುಸಿತ ಕಂಡಿದೆ. ಅಲ್ಲದೇ ಈ ದೇಶದಲ್ಲಿ ಹಲವು ಮನೆಗಳು, ಆಸ್ತಿಗಳಿಗೆ ಅಪಾರ ಹಾನಿಯಾಗಿದ್ದು, ಸಾವುಗಳು ಸಂಭವಿಸಿವೆ. ಅಮೆರಿಕ ಈ ದೇಶಕ್ಕೆ ಭಾರೀ ಆರ್ಥಿಕ ನೆರವು ಕೊಡ್ತಿತ್ತು. ಮೂರನೇ ದೇಶದ ವಿಷಯದಲ್ಲಿ ಅಮೆರಿಕ ಭಾಗವಹಿಸುವುದನ್ನು ಅಮೆರಿಕನ್ಸ್ ಮೊದಲಿನಿಂದಲೂ ವಿರೋಧಿಸಿಕೊಂಡೇ ಬಂದಿದ್ದಾರೆ.
ವಿಯೆಟ್ನಾಂ ಯುದ್ಧದಲ್ಲೇ ಬುದ್ಧಿ ಕಲಿಸಿದ್ದರು
ಅಮೆರಿಕನ್ನರು ಅಲ್ಲಿನ ರಾಜಕಾರಣಿಗಳು ಅಹಂಕಾರಕ್ಕೆ ವಿಯೆಟ್ನಾಂ ಯುದ್ಧದಲ್ಲಿ ಅಮೆರಿಕ ಮೂಗು ತೂರಿಸಿದಾಗಲೇ ಬುದ್ಧಿ ಕಲಿಸಿದ್ದರು. ವಿನಾಕಾರಣ ತನ್ನ ಪ್ರತಿಷ್ಠೆಯನ್ನು ಅಮೆರಿಕ ವಿಯೆಟ್ನಾಂ ಯುದ್ಧದಲ್ಲಿ ಪಣಕ್ಕೆ ಇಟ್ಟಿತ್ತು. ಸಾವಿರಾರು ಜನರ ಸಾವಿಗೆ ಪರೋಕ್ಷ ಕಾರಣವಾಗಿತ್ತು.
ಈ ಯುದ್ಧದಲ್ಲಿ ಒಂದು ಬಣದ ಪರವಾಗಿ ಅಮೆರಿಕ ಯುದ್ಧೋನ್ಮಾದದಲ್ಲಿ ಮುಳುಗಿತ್ತು. ಆಗ ಅಮೆರಿಕದ ಅಂದಿನ ರಾಜಕಾರಣಿಗಳ ವಿರುದ್ಧ ಅಮೆರಿಕನ್ಸ್ ತಿರುಗಿ ಬಿದಿದ್ದರು. ರಸ್ತೆಗಳಿಗೆ ಇಳಿದು ಪ್ರತಿಭಟನೆ ಮಾಡಿದ್ದರು.
ಈಗ ಬಂದಿರುವ ಫಲಿತಾಂಶವೂ ಅದೇ. ಏಕೆಂದರೆ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಅಮೆರಿಕ ಹಲವು ರಾಷ್ಟ್ರಗಳ ಯುದ್ಧ ಹಾಗೂ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿ, ಕೈ ಸುಟ್ಟುಕೊಂಡಿದೆ. ಮಧ್ಯಪ್ರಾಚ್ಯ ಸಮಸ್ಯೆ, ರಷ್ಯಾ ಹಾಗೂ ಉಕ್ರೇನ್‌ನ ನಡುವೆ ಬಿಕ್ಕಟ್ಟು ಎಲ್ಲಾ ವಿಚಾರದಲ್ಲೂ ಒಂದು ಹಂತಕ್ಕೂ ಮೀರಿ ವರ್ತಿಸಿದೆ ಎನ್ನುವ ಆರೋಪ ಇದೆ. ಅದಕ್ಕೆ ಈಗ ಉತ್ತರ ಸಿಕ್ಕಿದೆ ಅಂತಲೇ ವಿಶ್ಲೇಷಣ ಮಾಡಲಾಗ್ತಿದೆ. ಅಮೆರಿಕನ್ಸ್ ಎಂದಿಗೂ ಅವರ ಹಣ ಹಾಗೂ ಪ್ರತಿಷ್ಠೆಯ ಬಗ್ಗೆ ಹೆಚ್ಚು ಕಾಳಜಿ ಹೊಂದಿರ್ತಾರೆ ಅನ್ನೋದಕ್ಕೆ ಇದೂ (ಅಮೆರಿಕ ಅಧ್ಯಕ್ಷೀಯ ಚುನಾವಣೆ) ಸಹ ಸಾಕ್ಷಿ ಅಂತಲೇ ಹೇಳಲಾಗ್ತಿದೆ.
ಏನಿದು ವಿಯೆಟ್ನಾಂ ವಾರ್
1959ರಿಂದ 1975ರ ನಡುವೆ ಉತ್ತರ ವಿಯೆಟ್ನಾಂ ಯುದ್ಧ ನಡೆದಿತ್ತು. ಉತ್ತರ ವಿಯೆಟ್ನಾಂ ಹಾಗೂ ದಕ್ಷಿಣ ವಿಯೆಟ್ನಾಂನ ನಡುವೆ ಈ ಯುದ್ಧ ನಡೆದಿತ್ತು. ಕಮ್ಯೂನಿಸ್ಟ್ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ವಿಯೆಟ್ನಾಂ (ಉತ್ತರ ವಿಯೆಟ್ನಾಂ) ಹಾಗೂ ರಿಪಬ್ಲಿಕ್ ಆಫ್ ವಿಯೆಟ್ನಾಂ ( ದಕ್ಷಿಣ ವಿಯೆಟ್ನಾಂ) ನಡುವೆ ಘೋರ ಯುದ್ಧ ನಡೆದು, ಸಾವಿರಾರು ಜನ ಸಾವನ್ನಪ್ಪಿದ್ದರು.
ವಿಯೆಟ್ನಾಂನಲ್ಲಿ ಆಂತರಿಕ ಸಂಘರ್ಷ ನಡೆದಿತ್ತು. ಆದರೆ, ಇದನ್ನು ಸೂಪರ್ ಪವರ್ ಎನ್ನುವ ಅಮೆರಿಕ ಕಮ್ಯುನಿಸ್ಟ್‌ಗಳ ವಿರುದ್ಧ ಹೋರಾಡಲು ಬಳಸಿತ್ತು. ಈ ಯುದ್ಧದಲ್ಲಿ ಕಮ್ಯನಿಸ್ಟ್ ರಾಷ್ಟ್ರಗಳು ಉತ್ತರ ವಿಯೆಟ್ನಾಂಗೆ ಹಾಗೂ ಸಂಯುಕ್ತ ರಾಷ್ಟ್ರಗಳು ದಕ್ಷಿಣ ವಿಯೆಟ್ನಾಂಗೆ ಬೆಂಬಲ ಕೊಟ್ಟಿದ್ದವು. ಇದಕ್ಕೆ ಅಮೆರಿಕನ್ಸ್‌ನಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು.












Click it and Unblock the Notifications