Live

US Elections 2024 Live Updates: ಅಮೆರಿಕ ಚುನಾವಣಾ ಫಲಿತಾಂಶಗಳು 2024

ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡ ರಂಗೇರಿದೆ, 'ಡೊಡ್ಡಣ್ಣ' ಅಂತಾ ಕರೆಸಿಕೊಳ್ಳುವ ಅಮೆರಿಕದ ಹೊಸ ಅಧ್ಯಕ್ಷರ ಆಯ್ಕೆಗೆ ಕೋಟಿ ಕೋಟಿ ಮತದಾರರು ಕೂಡ ಸನ್ನದ್ಧವಾಗಿದ್ದು, ಇನ್ನು ಕೆಲವೇ ನಿಮಿಷಗಳಲ್ಲಿ ಮತದಾನ ಆರಂಭ ಆಗಲಿದೆ. ಹಾಗಾದ್ರೆ ಅಮೆರಿಕದ ಒಟ್ಟಾರೆ ಎಷ್ಟು ಮತದಾರರ 2024ರ ಚುನಾವಣೆಯಲ್ಲಿ ವೋಟ್ ಮಾಡಲಿದ್ದಾರೆ? ಹೇಗೆ ನಡೆಯಲಿದೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ? ಸಂಪೂರ್ಣ ಮಾಹಿತಿ ನಿಮ್ಮ ಮುಂದೆ ಇಡಲಿದೆ ನಿಮ್ಮ 'ಒನ್‌ಇಂಡಿಯಾ' ಕನ್ನಡ.

1776ರ ಜುಲೈ 4ರಂದು ಬ್ರಿಟಿಷ್ ಸಾಮ್ರಾಜ್ಯದ ದಾಸ್ಯದಿಂದ ಅಮೆರಿಕ ಸ್ವಾತಂತ್ರ್ಯ ಪಡೆಯಿತು. ಆ ನಂತರ ಅಂದರೆ 1789 ರಲ್ಲಿ, ಅಮೆರಿಕದಲ್ಲಿ ಮೊದಲನೇ ಸರ್ಕಾರ ಅಸ್ತಿತ್ವಕ್ಕೆ ಬಂತು. ಹೀಗೆ ಸ್ವತಂತ್ರ ಅಮೆರಿಕದ ಮೊದಲ ದೊರೆ ಜಾರ್ಜ್ ವಾಷಿಂಗ್ಟನ್. ಅಂದಿನ ಸಂದರ್ಭದಲ್ಲಿ ಜಾರ್ಜ್ ವಾಷಿಂಗ್ಟನ್ ನೇತೃತ್ವದಲ್ಲಿ ಸ್ವಾತಂತ್ರ್ಯ ಪಡೆಯಲು ಹೋರಾಡಿದ್ದ ಅಮೆರಿಕನ್ನರು, ಅವರನ್ನೇ ಮೊದಲ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದರು.

US Elections 2024 Live Updates on Polling Results and analysis of Trump vs Harris in Kannada

1789ರಲ್ಲಿ ಅಮೆರಿಕ ಅಧ್ಯಕ್ಷ ಪಟ್ಟಕ್ಕೆ ಆಯ್ಕೆಯಾದ ವಾಷಿಂಗ್ಟನ್, ಈ ಎಲೆಕ್ಟೊರಾಲ್ ಕಾಲೇಜು ಪದ್ಧತಿ ಪರಿಚಯ ಮಾಡಿದರು. ಅಂದಿನಿಂದಲೂ ಅಮೆರಿಕ ಅಧ್ಯಕ್ಷರ ಆಯ್ಕೆಯಲ್ಲಿ ಇದೆ ಪದ್ಧತಿ ಅನುಸರಿಸಲಾಗುತ್ತೆ. ಇದೀಗ ಕಮಲಾ ಹ್ಯಾರಿಸ್ & ಡೊನಾಲ್ಡ್ ಟ್ರಂಪ್ ನಡುವೆ ಹೋರಾಟ ಶುರುವಾಗಿದ್ದು, ಇನ್ನು 2 ರಿಂದ 3 ದಿನದಲ್ಲಿ ಅಮೆರಿಕದ ಹೊಸ ಅಧ್ಯಕ್ಷರು ಯಾರು ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ. ಯಾಕಂದ್ರೆ ಮತದಾನ ಮುಕ್ತಾಯ ಆಗುತ್ತಿದ್ದಂತೆ ಮತಗಳ ಎಣಿಕೆಗೆ ಚಾಲನೆ ಸಿಗಲಿದೆ.

ಕ್ಷಣಕ್ಷಣಕ್ಕೂ ತಿರುವು ಪಡೆಯುತ್ತಿದೆ ಫಲಿತಾಂಶ

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಇದೀಗ ವೇಗ ಪಡೆದುಕೊಂಡಿದೆ. ನಿನ್ನೆ ಮತದಾರರು ಕೂಡ ಹುಮ್ಮಸ್ಸಿನಲ್ಲಿ ಬಂದು ಮತ ಹಾಕಿದ್ದರು. ಪ್ರಮುಖ ರಾಜ್ಯಗಳಲ್ಲಿ ಡೊನಾಲ್ಡ್ ಟ್ರಂಪ್ & ಕಮಲಾ ಹ್ಯಾರಿಸ್ ನಡುವೆ ನೇರವಾದ ಪೈಪೋಟಿ ಇತ್ತು, ಯಾರಿಗೆ ಜಯ? ಎಂಬ ಕುತೂಹಲ ಕೂಡ ಮೂಡಿತ್ತು. ಅದರಲ್ಲೂ ಎಲೆಕ್ಟ್ರಾಲ್ ಮತ ಹೆಚ್ಚಾಗಿರುವ ರಾಜ್ಯದ ಪರಿಸ್ಥಿತಿ ಕ್ಷಣಕ್ಷಣಕ್ಕೂ ತಿರುವು ಪಡೆಯುತ್ತಿದ್ದು, 2020ರ ಚುನಾವಣೆ ನೆನಪು ಮಾಡುತ್ತಿದೆ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ. ಹೀಗಿದ್ದಾಗಲೇ ಬಹುತೇಕ ಫಲಿತಾಂಶ ಡೊನಾಲ್ಡ್ ಟ್ರಂಪ್ ಭರ್ಜರಿ ಗೆಲುವಿನ ಬಗ್ಗೆಯೇ ಮುನ್ಸೂಚನೆ ನೀಡುತ್ತಿದೆ.

Nov 07, 2024, 10:59 am IST

2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದ ಬಳಿಕ ಅವರ ನಿಕಟವರ್ತಿ ಕಾಶ್ ಪಟೇಲ್‌ರನ್ನು ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ (ಸಿಐಎ) ನಿರ್ದೇಶಕರ ಹುದ್ದೆಗೆ ಪರಿಗಣಿಸುವ ಸಾಧ್ಯತೆ ಇದೆ. ಟ್ರಂಪ್ ನಿಷ್ಠಾವಂತರಾದ ಪಟೇಲ್, ರಕ್ಷಣೆ ಮತ್ತು ಗುಪ್ತಚರ ಎರಡರಲ್ಲೂ ಎರಡರ ಹಿನ್ನೆಲೆಯನ್ನು ಹೊಂದಿದ್ದಾರೆ. 1980ರಲ್ಲಿ ನ್ಯೂಯಾರ್ಕ್‌ನ ಗಾರ್ಡನ್ ಸಿಟಿಯಲ್ಲಿ ಹುಟ್ಟಿದ ಕಾಶ್ ಪಟೇಲ್ ಗುಜರಾತಿ ಭಾರತೀಯ ವಲಸಿಗ ದಂಪತಿಯ ಪುತ್ರ. ಪಟೇಲ್ ವೃತ್ತಿ ಜೀವನ ಟ್ರಂಪ್ ರಾಜಕೀಯ ಬೆಳವಣಿಗೆಯೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ.
Nov 07, 2024, 9:05 am IST

ಅಮೆರಿಕ ಅಧ್ಯಕೀಯ ಚುನಾವಣೆಯಲ್ಲಿ ಭಾರತೀಯ ಮೂಲ ನಿವಾಸಿಗಳು ಹೇಗೆ ಮತದಾನ ಮಾಡಿದ್ದಾರೆ. ರಿಪಬ್ಲಿಕನ್ ಪಕ್ಷಕ್ಕೆ ಹೆಚ್ಚು ಬೆಂಬಲ ನೀಡಿದ್ದಾರೆ. 2024ರಲ್ಲಿ ಡೆಮಾಕ್ರಟಿಕ್ ಪಕ್ಷಕ್ಕೆ ಬೆಂಬಲ ನೀಡಿದರ ಪ್ರಮಾಣ ಶೇ 57ಕ್ಕೆ ಕುಸಿದಿದೆ. 2020ರಲ್ಲಿ ಶೇ 66ರಷ್ಟು ಜನರು ಪಕ್ಷ ಬೆಂಬಲಿಸಿದ್ದರು. ರಿಪಬ್ಲಿಕನ್ ಪಕ್ಷಕ್ಕೆ ಕಳೆದ ಚುನಾವಣೆಯಲ್ಲಿ ಶೇ 18ರಷ್ಟು ಜನರು ಬೆಂಬಲ ನೀಡಿದ್ದರು. ಅದು ಈ ಬಾರಿ ಶೇ 27ರಷ್ಟು ಏರಿಕೆಯಾಗಿದೆ ಎಂದು ಸಮೀಕ್ಷೆ ಹೇಳಿದೆ.
Nov 07, 2024, 8:47 am IST

ಜೋ ಬೈಡನ್ ನಿಂತಿದ್ದರೆ ಟ್ರಂಪ್ ಸೋಲುತ್ತಿದ್ದರಾ?

ಜೋ ಬೈಡನ್ ನಿಂತಿದ್ದರೆ ಟ್ರಂಪ್ ಸೋಲುತ್ತಿದ್ದರಾ?
ಅಮೆರಿಕ ಅಧ್ಯಕ್ಷೀಯ ಚುನಾವಣೆ 2024 ರಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ಕಮಲಾ ಹ್ಯಾರಿಸ್ ಅವರು ಸೋತ ನಂತರ ಬೇರೆಯದ್ದೇ ಚರ್ಚೆ ಶುರುವಾಗಿದೆ. ಅಮೆರಿಕ ಹಾಲಿ ಅಧ್ಯಕ್ಷ ಜೋ ಬೈಡನ್ ಅವರನ್ನು ಪಕ್ಕಕ್ಕೆ ಕೂರಿಸಿ, ಕಮಲಾ ಹ್ಯಾರಿಸ್ ಮುಂದೆ ಬಂದಿದ್ದೇ ಸೋಲಿಗೆ ದೊಡ್ಡ ಕಾರಣ ಎಂಬ ಆರೋಪ ಈಗ ಕೇಳಿ ಬಂದಿದೆ. ಇದೇ ಕಾರಣಕ್ಕೆ ಡೊನಾಲ್ಡ್ ಟ್ರಂಪ್ ಎದುರು ಜೋ ಬೈಡನ್ ಸ್ಪರ್ಧೆ ಮಾಡಿದ್ದರೆ ಚುನಾವಣೆ ಹೇಗೆ ಇರುತ್ತಿತ್ತು? ಜೋ ಬೈಡನ್ ನಿಂತಿದ್ದರೆ ಟ್ರಂಪ್ ಸೋಲುತ್ತಿದ್ದರಾ? ಎಂಬ ಚರ್ಚೆ ಜೋರಾಗಿದೆ.
Nov 07, 2024, 7:44 am IST

ಜಗತ್ತೇ ಮೋದಿ ಅವರನ್ನು ಪ್ರೀತಿಸುತ್ತದೆ!

ಜಗತ್ತೇ ಮೋದಿ ಅವರನ್ನು ಪ್ರೀತಿಸುತ್ತದೆ!
ಪ್ರಧಾನಿ ನರೇಂದ್ರ ಮೋದಿ ಅವರು & ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅತ್ಯುತ್ತಮ ಸ್ನೇಹಿತರು. ಈ ಹಿಂದೆ ಕೂಡ ಹಲವು ಬಾರಿ ನರೇಂದ್ರ ಮೋದಿ ಅವರ ಬಗ್ಗೆ, ಇದೇ ಡೊನಾಲ್ಡ್ ಟ್ರಂಪ್ ಅವರು ಮುಕ್ತವಾಗಿ ಮಾತನಾಡಿದ್ದರು. ಅಲ್ಲದೆ ಮೋದಿ ಅವರು ನನ್ನ ಅತ್ಯುತ್ತಮ ಗೆಳೆಯ ಎಂದು ಕೂಡ ಹೇಳಿದ್ದಾರೆ ಡೊನಾಲ್ಡ್ ಟ್ರಂಪ್. ಇದೀಗ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿ, 2ನೇ ಬಾರಿಗೆ ಅಮೆರಿಕದ ಅಧ್ಯಕ್ಷ ಪಟ್ಟ ಅಲಂಕರಿಸಿರುವ ಡೊನಾಲ್ಡ್ ಟ್ರಂಪ್ ಅವರು ಮೋದಿ ಅವರನ್ನು ತುಂಬಾ ಹೊಗಳಿದ್ದಾರೆ. ‘ಜಗತ್ತೇ ಮೋದಿ ಅವರನ್ನು ಪ್ರೀತಿಸುತ್ತದೆ’ ಎಂದು ಡೊನಾಲ್ಡ್ ಟ್ರಂಪ್ ಇದೀಗ ಪ್ರಧಾನಿ ಮೋದಿ ಅವರನ್ನ ಹೊಗಳಿದ್ದಾರೆ.
Nov 07, 2024, 6:50 am IST

ಡೊನಾಲ್ಡ್ ಟ್ರಂಪ್ ಆಲೋಚನೆ ಏನು?

ಡೊನಾಲ್ಡ್ ಟ್ರಂಪ್ ಆಲೋಚನೆ ಏನು?
ಅಮೆರಿಕದ ಹೊಸ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಡೊನಾಲ್ಡ್ ಟ್ರಂಪ್‌ಗೆ ಅಧ್ಯಕ್ಷನ ಪಟ್ಟವು ಸುಖದ ವಾತಾವರಣ ನೀಡಲಾರದು. ಯಾಕಂದ್ರೆ ಒಂದು ಕಡೆ ಅಮೆರಿಕ ನೂರಾರು ಆರ್ಥಿಕ ಸಮಸ್ಯೆ ಎದುರಿಸುತ್ತಿದೆ. ಇನ್ನೊಂದು ಕಡೆ ರಷ್ಯಾ & ಉಕ್ರೇನ್ ಯುದ್ಧ, ಇಸ್ರೇಲ್ & ಗಾಜಾ ಯುದ್ಧ, ಇಸ್ರೇಲ್ & ಲೆಬನಾನ್ ಯುದ್ಧ, ಇಸ್ರೇಲ್ & ಇರಾನ್ ಯುದ್ಧ ಸಾಧ್ಯತೆ... ಹೀಗೆ ನೂರಾರು ಸವಾಲುಗಳು ಕಾಡಲಿವೆ. ಇದೇ ಕಾರಣಕ್ಕೆ ಡೊನಾಲ್ಡ್ ಟ್ರಂಪ್ ಅವರು ಈಗ ಈ ಎಲ್ಲಾ ಸಮಸ್ಯೆ ಎದುರಿಸಲು ಮತ್ತಷ್ಟು ಅಲರ್ಟ್ ಆಗಬೇಕಿದೆ. ಸುಖದ ಮಾತು ಬಿಡಿ ಇದೀಗ ಡೊನಾಲ್ಡ್ ಟ್ರಂಪ್ ತಮಗೆ ಸಿಕ್ಕಿರುವ ಅವಕಾಶ ಬಳಸಿಕೊಂಡು ಅಮೆರಿಕವನ್ನು ಮತ್ತೊಮ್ಮೆ ಬಲಿಷ್ಠವಾಗಿ ಕಟ್ಟಬೇಕಿದೆ!
Nov 07, 2024, 6:08 am IST

ಬರೋಬ್ಬರಿ 200 ವರ್ಷಗಳ ಇತಿಹಾಸ!

ಬರೋಬ್ಬರಿ 200 ವರ್ಷಗಳ ಇತಿಹಾಸ!
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಮಾದರಿ ಶುರುವಾಗಿದ್ದು ಇಂದು ಅಥವಾ ನಿನ್ನೆಯಲ್ಲ. ಸುಮಾರು 200ಕ್ಕೂ ಹೆಚ್ಚು ವರ್ಷಗಳಿಂದ ಈ ರೀತಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಮಾದರಿ ಅನುಸರಿಸಲಾಗುತ್ತದೆ. ಹೀಗಿದ್ದರೂ 200ಕ್ಕೂ ಹೆಚ್ಚು ವರ್ಷಗಳಿಂದ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆದುಕೊಂಡು ಬರುತ್ತಿದ್ದರೂ ಒಬ್ಬರೇ ಒಬ್ಬ ಮಹಿಳಾ ಅಧ್ಯಕ್ಷರನ್ನ ಅಮೆರಿಕದ ಜನ ಆಯ್ಕೆ ಮಾಡಿಲ್ಲ. ಈಗಲೂ ಕಮಲಾ ಹ್ಯಾರಿಸ್ ಸೋತಿದ್ದು, ಮತ್ತೊಮ್ಮೆ ಜನ ಇತಿಹಾಸ ಮರುಕಳಿಸುವಂತೆ ಮಾಡಿದ್ದಾರೆ.
Nov 07, 2024, 6:02 am IST

US Elections 2024: ಡೊನಾಲ್ಡ್ ಟ್ರಂಪ್ ಎದುರು ಸಾಲು ಸಾಲು ಸವಾಲುಗಳು, ಸ್ವಲ್ಪ ಎಡವಿದರೂ ಅಮೆರಿಕ...

ಡೊನಾಲ್ಡ್ ಟ್ರಂಪ್ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ ನಿಜ, ಆದರೆ ಹೀಗೆ ಡೊನಾಲ್ಡ್ ಟ್ರಂಪ್ ಆಯ್ಕೆ ಅನ್ನೋದು ಸುಲಭದ ತುತ್ತಾಗಿ ಉಳಿದಿಲ್ಲ. ಯಾಕೆ ಅಂದ್ರೆ ಈಗ ದೈತ್ಯ ದೇಶ ಅಮೆರಿಕ ಸಾಲು ಸಾಲು ಸವಾಲುಗಳನ್ನ ಎದುರಿಸುತ್ತಿದೆ. ಆರ್ಥಿಕವಾಗಿ ಮಾತ್ರ ಅಲ್ಲ, ನೂರಾರು ವಿಚಾರದಲ್ಲಿ ಅಮೆರಿಕ ಈಗ ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿದೆ. ಇಂತಹ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಏನು ಮಾಡಬೇಕು? ಡೊನಾಲ್ಡ್ ಟ್ರಂಪ್ ಏನು ಮಾಡಲೇ ಬಾರದ? ಡೊನಾಲ್ಡ್ ಟ್ರಂಪ್ ಅವರ ಎದುರು ಇರುವ ಸಾಲು ಸಾಲು ಸವಾಲುಗಳ ಪಟ್ಟಿಯನ್ನ ತಿಳಿಯೋಣ ಬನ್ನಿ.
Nov 07, 2024, 5:45 am IST

ಅಮೆರಿಕದ ನೂತನ ಅಧ್ಯಕ್ಷ ಟ್ರಂಪ್‌ ಅವರನ್ನು ಹಂಗಾಮಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಕರೆ ಮಾಡಿ ಶುಭಕೋರಿದ್ದಾರೆ. ಟ್ರಂಪ್‌ ಅವರನ್ನು ಶ್ವೇತಭವನಕ್ಕೆ ಆಹ್ವಾನಿಸಿದರು. ಬೈಡನ್‌ ಕರೆ ಮಾಡಿ ಆಹ್ವಾನ ನೀಡಿರುವುದಕ್ಕೆ ಟ್ರಂಪ್‌ ಸಂತೋಷ ವ್ಯಕ್ತಪಡಿಸಿದ್ದಾರೆ.
Nov 07, 2024, 5:31 am IST

Donald Trump: ಅಮೆರಿಕ ಇತಿಹಾಸದಲ್ಲಿಯೇ ಅತ್ಯಂತ ಹಿರಿಯ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌- ಕುಟುಂಬ, ವ್ಯವಹಾರಗಳ ಕುರಿತು ತಿಳಿಯಿರಿ

2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಎರಡನೇ ಭಾರಿ ಆಯ್ಕೆಯಾಗಿದ್ದಾರೆ. ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ ಅವರನ್ನು ಸೋಲಿಸುವ ಮೂಲಕ 78 ವರ್ಷ ವಯಸ್ಸಿನ ಟ್ರಂಪ್‌ ಹೊಸದೊಂದು ಇತಿಹಾಸ ಬರೆದಿದ್ದಾರೆ. ಇದೀಗ ಅವರು ಅಮೆರಿಕ ಇತಿಹಾಸದಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ.
Nov 07, 2024, 5:17 am IST

ಅಮೆರಿಕದ ಯುವಕರನ್ನು ಉದ್ದೇಶಿಸಿ ಮಾತನಾಡಿರುವ ಕಮಲಾ ಹ್ಯಾರಿಸ್ ಅವರು, ನಿರಾಸೆಗೆ ಒಳಗಾಗಬೇಡಿ ಎಂದಿದ್ದಾರೆ. ಜಗತ್ತಿನಲ್ಲಿ ಅಸಾಧಾರಣ ಒಳ್ಳೆಯದನ್ನು ಮಾಡುವ ಸಾಮರ್ಥ್ಯ ಯುವಕರಿಗೆ ಇದೆ ಎಂದು ಹೇಳಿದ್ದಾರೆ.
Nov 07, 2024, 5:02 am IST

ನಾನು ಚುನಾವಣೆಯಲ್ಲಿ ಸೋತಿದ್ದೇನೆ. ಆದರೆ, ಹೋರಾಟದಲ್ಲಿ ಸೋತಿಲ್ಲ ಎಂದು ಕಮಲಾ ಹ್ಯಾರಿಸ್‌ ಹೇಳಿದ್ದಾರೆ. ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷೆಯಾಗಿದ್ದು, ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ಮಾಡಿದ್ದರು.
Nov 07, 2024, 4:37 am IST

Trump 2.0: ಮೋದಿ & ಟ್ರಂಪ್ ಜೋಡಿ, ಇನ್ಮುಂದೆ ಬರೀ ಮೋಡಿ!

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ನನ್ನ ಗೆಳಯ ಅಂತಲೇ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ. ಮೋದಿ ಹಾಗೂ ಟ್ರಂಪ್ ಜೋಡಿ ಈಗಾಗಲೇ ಮೋಡಿ ಮಾಡಿದೆ. ಇದೀಗ ಟ್ರಂಪ್ 2.0 ನಲ್ಲಿ ಯಾವ ರೀತಿ ಇರಲಿದೆ ಎನ್ನುವುದಷ್ಟೇ ಕುತೂಹಲ ಉಳಿದಿದೆ. ಮೋದಿ ಹಾಗೂ ಟ್ರಂಪ್‌ ಸೇರಿ ಹೊಸ ಜಾದು ಸೃಷ್ಟಿ ಮಾಡಲಿದ್ದಾರೆ. ಎರಡು ಪ್ರಮುಖ ರಾಷ್ಟ್ರಗಳ ನಡುವೆ ಹೊಸ ಬಾಂಧವ್ಯ ಸೃಷ್ಟಿಯಾಗಲಿದ್ದು, ಚೀನಾವನ್ನು ಕಟ್ಟಿ ಹಾಕಲು ಭಾರತಕ್ಕೆ ಪ್ರಮುಖ ಅಸ್ತ್ರ ಸಿಕ್ಕಂತಾಗಿದೆ ಎಂದು ಹೇಳಲಾಗುತ್ತಿದೆ.
Nov 07, 2024, 4:15 am IST

ಅಮೆರಿಕದ ನೂತನ ಅಧ್ಯಕ್ಷರ 2.0 ಆಡಳಿತ ಇನ್ನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಈ ಬಾರಿ ಟ್ರಂಪ್‌ ಆಡಳಿತ ಶೈಲಿ ಹೇಗಿರಲಿದೆ ಎನ್ನುವುದೇ ಈಗ ಇರುವ ಕುತೂಹಲ. ಇನ್ನು ಮೋದಿ ಹಾಗೂ ಟ್ರಂಪ್‌ ನ ನಡುವೆ ಹಳೆಯ ಗೆಳತನ ಇದೆ. ಇದು ಭಾರತಕ್ಕೆ ಪ್ಲಸ್‌ ಪಾಯಿಂಟ್‌ ಆಗಿದೆ.
Nov 07, 2024, 3:51 am IST

ಅಮೆರಿಕದ ಭರವಸೆಯ ಬೆಳಕು ಸದಾ ಪ್ರಕಾಶಮಾನವಾಗಿ ಉರಿಯುತ್ತದೆ ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ. ತಮ್ಮ ವಿದಾಯದ ಭಾಷಣದಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ. ಕೆಲವೇ ಗಂಟೆಗಳ ಮುಂಚೆ ಕಮಲಾ ಹ್ಯಾರಿಸ್‌ ಅವರು ಡೊನಾಲ್ಡ್‌ ಟ್ರಂಪ್‌ಗೆ ಶುಭಕೋರಿದ್ದರು.
Nov 07, 2024, 3:21 am IST

ಅಮೆರಿಕದಲ್ಲಿ ಬಂದೂಕು (ಗನ್) ಹಿಂಸೆ ಕೊನೆಗೊಳ್ಳಬೇಕು ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ. ಗನ್ ನಿಂದ ಅಮೆರಿಕದಲ್ಲಿ ಹಿಂಸಾಚಾರ ನಡೆಯುತ್ತಲ್ಲೇ ಇದೆ. ಇದನ್ನು ತಪ್ಪಿಸುವ ಬಗ್ಗೆ ಹ್ಯಾರಿಸ್ ಪ್ರತಿಜ್ಞೆ ಸ್ವೀಕರಿಸಿದ್ದಾರೆ. ಪ್ರಜಾಪ್ರಭುತ್ವವನ್ನು ರಕ್ಷಿಸಲು, ಎಲ್ಲರಿಗೂ ಸಮಾನ ನ್ಯಾಯ ಎನ್ನುವ ವಿಷಯದ ಬಗ್ಗೆ ಮಾತನಾಡಿದ್ದಾರೆ.
Nov 07, 2024, 2:52 am IST

ಚೀನಾದ ಕ್ಸಿ ಜಿನ್‌ಪಿಂಗ್ ಅವರು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರಿಗೆ ಶುಭ ಕೋರಿದ್ದಾರೆ. ಅಮೆರಿಕ ಹಾಗೂ ಚೀನಾದ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಹಲವು ವಿಚಾರಗಳಲ್ಲಿ ಅಮೆರಿಕ ಹಾಗೂ ಚೀನಾದ ನಡುವೆ ಭಿನ್ನಾಭಿಪ್ರಾಯ ಇದೆ. ಈಗ ನೂತನ ಅಧ್ಯಕ್ಷರು ಇದನ್ನು ಹೇಗೆ ನಿಭಾಯಿಸಲಿದ್ದಾರೆ ಎನ್ನುವ ಕುತೂಹಲ ಇದೆ.
Nov 07, 2024, 2:18 am IST

ಟ್ರಂಪ್ ಯುಎಸ್‌ ಎಲೆಕ್ಷನ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. 20 ವರ್ಷಗಳ ಅವಧಿಯಲ್ಲಿ ಎರಡನೇ ಬಾರಿ ಅಮೆರಿಕ ಅಧ್ಯರಾದ ರಿಪಬ್ಲಿಕನ್‌ ಪಾರ್ಟಿಯ ಎರಡನೇ ನಾಯಕರಾಗಿದ್ದಾರೆ. ರಿಪಬ್ಲಿಕನ್ ಪಕ್ಷದ ಜಾರ್ಜ್ ಬುಷ್ 2001 ರಿಂದ 2009 ರವರೆಗೆ ಅಧ್ಯಕ್ಷರಾಗಿದ್ದರು.
Nov 07, 2024, 2:03 am IST

ಡೊನಾಲ್ಡ್‌ ಟ್ರಂಪ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೋಘ ಗೆಲುವು ಸಾಧಿಸಿದ್ದಾರೆ. ಅಮೆರಿಕದ ಹಲವು ಸುದ್ದಿ ಮಾಧ್ಯಮಗಳು ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿವೆ. ಇನ್ನು ಸ್ವಿಂಗ್‌ ರಾಜ್ಯಗಳಲ್ಲೂ ಟ್ರಂಪ್‌ಗೆ ಭರ್ಜರಿ ಗೆಲುವು ಸಿಕ್ಕಿದೆ. ಸ್ವಿಂಗ್‌ ರಾಜ್ಯಗಳೇ ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲೂ ನಿರ್ಣಾಯಕ ಪಾತ್ರವನ್ನು ವಹಿಸಿದ್ದವು
Nov 07, 2024, 1:48 am IST

ಟ್ರಂಪ್ ರಾಜಕೀಯ ಭವಿಷ್ಯ ಈ ನಾಲ್ಕು ವರ್ಷ ತುಂಬಾ ಇಂಪಾರ್ಟೆಂಟ್ ಯಾಕೆ ?

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಜಕೀಯವಾಗಿ ಪುಟಿದೆದಿದ್ದಾರೆ. ಅವರ ರಾಜಕೀಯ ಭವಿಷ್ಯ ಇನ್ನೇನು ಮುಗಿದೇ ಹೋಯಿತು ಎನ್ನುವ ಹಂತದಲ್ಲಿ ಅವರು ಮತ್ತೊಮ್ಮೆ ದೊಡ್ಡಣನ ಚುಕ್ಕಾಣಿ ಹಿಡಿದಿದ್ದಾರೆ. ಆದರೆ, ಈ ಬಾರಿ ಅವರ ಹೋರಾಟ ಕಳೆದ ಬಾರಿಗಿಂತಲೂ ರೋಚಕವಾಗಿತ್ತು.
Nov 07, 2024, 1:33 am IST

ಯುದ್ಧ ನಿಲ್ಲಿಸುತ್ತಾರಾ ಟ್ರಂಪ್

ಯುದ್ಧ ನಿಲ್ಲಿಸುತ್ತಾರಾ ಟ್ರಂಪ್
ಅಧಿಕಾರಕ್ಕೆ ಬಂದ ಒಂದೇ ತಾಸಿನಲ್ಲಿ ಯುದ್ಧ ನಿಲ್ಲಿಸುವುದಾಗಿ ಡೊನಾಲ್ಡ್‌ ಟ್ರಂಪ್ ಹೇಳಿದ್ದರು. ಇದೀಗ ಹಮಾಸ್‌ ನಾಯಕ ಸಮಿ ಅಬು ಜುಹ್ರಿ ಯುದ್ಧ ನಿಲ್ಲಿಸುವ ಟ್ರಂಪ್ ಅವರ ಹೇಳಿಕೆ ಈಗ ಪರೀಕ್ಷೆಗೆ ಒಳಪಡುವ ಸಮಯ (ಕೊಟ್ಟ ಮಾತು ಉಳಿಸಿಕೊಳ್ತಾರಾ ನೋಡಬೇಕು) ಎಂದಿದ್ದಾರೆ.
Nov 07, 2024, 1:19 am IST

ಸೌದಿ ಕ್ರೌನ್ ಪ್ರಿನ್ಸ್ ಅವರು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಶುಭಕೋರಿದ್ದಾರೆ. ಸೌದಿ ಅರೇಬಿಯಾ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಐತಿಹಾಸಿಕ ಸಂಬಂಧದ ಬಗ್ಗೆ ಟ್ವೀಟ್ ಮಾಡಿದ್ದಾರೆ.
Nov 07, 2024, 1:01 am IST

ಕಮಲಾ ಹ್ಯಾರಿಸ್ ಸೋಲಿಸುವಲ್ಲಿ ವರ್ಕ್‌ಔಟ್‌ ಆಗಿದ್ದು ಇದೇ ಅಂಶಗಳು!

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಬಾರಿ ಕಮಲಾ ಹ್ಯಾರಿಸ್‌ ಅವರು ಹೀನಾಯವಾಗಿ ಸೋತಿದ್ದಾರೆ. ಶ್ವೇತಭವನವನ್ನು ಪ್ರವೇಶಿಸಿದ ಮೊದಲ ಮಹಿಳೆ ಕಮಲಾ ಆಗಲಿದ್ದಾರೆಯೇ ಎಂದು ಎದುರು ನೋಡಲಾಗುತ್ತಿತ್ತು. ಆದರೆ, ಆ ಕನಸು ಈಡೇರಿಲ್ಲ. ಈ ಬಾರಿಯೂ ಮಹಿಳಾ ಅಧ್ಯಕ್ಷೆ ಆಯ್ಕೆ ಆಗಿಲ್ಲ. ಆದರೆ, ಕಮಲಾ ಹ್ಯಾರಿಸ್‌ನ ಸೋಲಿನ ಈ ಹಿಂದೆ ಈ ಒಂದು ಕುತಂತ್ರ ವರ್ಕ್‌ಔಟ್‌ ಆಗಿದೆ ಅಂತಲೇ ಹೇಳಲಾಗ್ತಿದೆ.
Nov 07, 2024, 12:46 am IST

ಅಮೆರಿಕದ ಉಪಾಧ್ಯಕ್ಷೆ ಹಾಗೂ ಡೆಮಾಕ್ರಟಿಕ್ ಪಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ಡೊನಾಲ್ಡ್‌ ಟ್ರಂಪ್‌ಗೆ ಕರೆ ಮಾಡಿ ಅಭಿನಂದನೆ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಶಾಂತಿಯುತ ಅಧಿಕಾರ ವರ್ಗಾವಣೆ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ಎಲ್ಲಾ ಅಮೆರಿಕರನ್ನು ಪ್ರತಿನಿಧಿಸುವ ಅಧ್ಯಕ್ಷರ ಜವಾಬ್ದಾರಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗಿದೆ.
Nov 07, 2024, 12:31 am IST

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಟ್ರಂಪ್‌ನೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಇರಾನ್ ಬೆದರಿಕೆಯ ಬಗ್ಗೆ ಚರ್ಚೆ ಮಾಡಲಾಗಿದೆ ಎನ್ನಲಾಗಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಡೊನಾಲ್ಡ್‌ ಟ್ರಂಪ್ ಅವರು ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜಯಸಾಧಿಸಿದ ನಂತರ ಕರೆ ಮಾಡಿ ಶುಭಾಶಯ ಕೋರಿದ್ದಾರೆ. ಇಸ್ರೇಲ್‌ ಭದ್ರತೆ ಹಾಗೂ ಅಮೆರಿಕ ಸಹಕಾರ ಕೋರಿದ್ದಾರೆ ಎಂದು ವರದಿಯಾಗಿದೆ.
Nov 07, 2024, 12:15 am IST

Us Elections: ವಿಯೆಟ್ನಾಂ ಯುದ್ಧದಲ್ಲಿ ಮೂಗು ತೂರಿಸಿದಾಗಲೇ ಅಮೆರಿಕನ್ಸ್‌ ಪಾಠ ಕಲಿಸಿದ್ದರು!

ಅಮೆರಿಕ ವಿಶ್ವದ ದೊಡ್ಡಣ ನಿಜ. ಆದರೆ, ಬೇರೆ ರಾಷ್ಟ್ರಗಳ ವಿಚಾರದಲ್ಲಿ ಅಮೆರಿಕ ಮೂಗು ತೂರಿಸುವುದನ್ನು ಅವರು ಎಂದೂ ಒಪ್ಪಿಕೊಂಡಿಲ್ಲ. ಅದಕ್ಕೆ 2024ನೇ ಸಾಲಿನ ಅಮೆರಿಕ ಅಧ್ಯಕ್ಷೀಯ ಚುನಾವಣೆ ಮತ್ತೊಂದು ಸಾಕ್ಷಿ ಎನ್ನುವಂತಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಬಾರಿ ಡೆಮಾಕ್ರಟಿಕ್ ಪಕ್ಷ ಮಕಾಡೆ ಮಲಗಿದೆ. ಇದಕ್ಕೆ ಕಾರಣ ಅಮೆರಿಕದ ಅಧ್ಯಕ್ಷ ಹಾಗೂ ಡೆಮಾಕ್ರಟಿಕ್ ಪಕ್ಷ ಕೆಲವು ರಾಷ್ಟ್ರಗಳ ವಿಚಾರದಲ್ಲಿ ಮೂಗು ತೂರಿಸಿದ್ದು ಅಂತ ಹೇಳಲಾಗ್ತಿದೆ.
Nov 07, 2024, 12:01 am IST

ಟ್ರಂಪ್ ಗೆಲುವಿನಿಂದ ಆರ್ಥಿಕ ಸಂಕಷ್ಟ

ಟ್ರಂಪ್ ಗೆಲುವಿನಿಂದ ಆರ್ಥಿಕ ಸಂಕಷ್ಟ
ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್ ಅವರು ಆಯ್ಕೆಯಾಗಿರುವುದರಿಂದ ಜಾಗತಿಕವಾಗಿ ಆರ್ಥಿಕ ಸಂಕಷ್ಟ ಹೆಚ್ಚಾಗಲಿದೆ ಎಂದು ಬ್ಯಾಂಕ್ ಆಫ್ ಫ್ರಾನ್ಸ್‌ ಗವರ್ನರ್ ಎಚ್ಚರಿಸಿದ್ದಾರೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅವರ ಗೆಲುವು ಜಾಗತಿಕ ಆರ್ಥಿಕತೆಗೆ ಅಪಾಯದ ಮುನ್ಸೂಚನೆ ಎಂದಿದ್ದಾರೆ.
Nov 06, 2024, 11:39 pm IST

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಡೀ ವಿಶ್ವವೇ ಪ್ರೀತಿಸುತ್ತದೆ ಎಂದು ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಮೋದಿ ಮಹಾನ್‌ ವ್ಯಕ್ತಿ ಹಾಗೂ ಭಾರತ ಅಮೋಘ ರಾಷ್ಟ್ರ ಎಂದು ಹೇಳಿದ್ದಾರೆ.
Nov 06, 2024, 11:17 pm IST

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಅಖಾಡದಲ್ಲಿದ್ದ ಕಮಲಾ ಹ್ಯಾರಿಸ್‌ಗೆ ಸೋಲಾಗಿದೆ. ಯುಎಸ್​ನಲ್ಲಿ ಹೆಣ್ಣು ಮಕ್ಕಳ ಅಬಾರ್ಷನ್​ಗಳು ವಿಪರೀತಕ್ಕೆ ಹೋಗುತ್ತಿವೆ. ನಾಲ್ವರಲ್ಲಿ ಒಬ್ಬಳು ಗರ್ಭಿಣಿ ಅಬಾರ್ಷನ್ ಮೊರೆ ಹೋಗುತ್ತಿದ್ದಾಳೆ ಎನ್ನುವ ವರದಿ ಇದೆ. ಹೀಗಾಗಿ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿಯೂ ಕೂಡ ಕಮಲಾ ಹ್ಯಾರಿಸ್ ಯಾವುದೇ ಸ್ಪಷ್ಟವಾದ ನಿಲುವಿಗೆ ಬರಲಿಲ್ಲ ಎನ್ನುವುದು ಕೂಡ ಕಮಲಾ ಹ್ಯಾರಿಸ್‌ ಸೋಲಿಗೆ ಕಾರಣ ಎನ್ನುವ ವಿಚಾರಗಳು ಹರಿದಾಡುತ್ತಿದೆ.
Nov 06, 2024, 10:57 pm IST

ಟ್ರಂಪ್‌ ಅಭಿನಂದಿಸಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರನ್ನು ಅಭಿನಂದಿಸಿದ್ದಾರೆ. ನನ್ನ ಸ್ನೇಹಿತ, ಅಧ್ಯಕ್ಷ @realDonaldTrump ಅವರೊಂದಿಗೆ ಉತ್ತಮ ಸಂಭಾಷಣೆ ನಡೆಸಿದೆ. ಅದ್ಭುತ ವಿಜಯಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ತಂತ್ರಜ್ಞಾನ, ರಕ್ಷಣೆ, ಇಂಧನ, ಬಾಹ್ಯಾಕಾಶ ಮತ್ತು ವಿವಿಧ ಕ್ಷೇತ್ರಗಳಲ್ಲಿ ಭಾರತ-ಯುಎಸ್ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಮತ್ತೊಮ್ಮೆ ಒಟ್ಟಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಮೋದಿ ಹೇಳಿದ್ದು, ಟ್ವೀಟ್ ಮಾಡಿದ್ದಾರೆ.
Nov 06, 2024, 10:32 pm IST

ಡೊನಾಲ್ಡ್‌ ಟ್ರಂಪ್‌ ಅವರು ಎರಡನೇ ಬಾರಿ ಶ್ವೇತಭವನವನ್ನು ಪ್ರವೇಶಿಸುವುದಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಎರಡನೇ ಬಾರಿಗೆ ಅವರು ಅಮೆರಿಕ ಅಧ್ಯಕ್ಷರಾಗಿದ್ದು, ವೈಟ್‌ಹೌಸ್‌ ಪ್ರವೇಶಿಸುತ್ತಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಅವರು ಮೂರು ಬಾರಿ ಸ್ಪರ್ಧೆ ಮಾಡಿದ್ದರು, ಕಳೆದ ಬಾರಿ ಅವರಿಗೆ ಸೋಲಾಗಿತ್ತು
READ MORE

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+