ಟ್ರಂಪ್ ರಾಜಕೀಯ ಭವಿಷ್ಯ ಈ ನಾಲ್ಕು ವರ್ಷ ತುಂಬಾ ಇಂಪಾರ್ಟೆಂಟ್ ಯಾಕೆ ?

US election 2024: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಜಕೀಯವಾಗಿ ಪುಟಿದೆದಿದ್ದಾರೆ. ಅವರ ರಾಜಕೀಯ ಭವಿಷ್ಯ ಇನ್ನೇನು ಮುಗಿದೇ ಹೋಯಿತು ಎನ್ನುವ ಹಂತದಲ್ಲಿ ಅವರು ಮತ್ತೊಮ್ಮೆ ದೊಡ್ಡಣನ ಚುಕ್ಕಾಣಿ ಹಿಡಿದಿದ್ದಾರೆ. ಆದರೆ, ಈ ಬಾರಿ ಅವರ ಹೋರಾಟ ಕಳೆದ ಬಾರಿಗಿಂತಲೂ ರೋಚಕವಾಗಿತ್ತು.

ನಾಲ್ಕು ವರ್ಷಗಳ ಹಿಂದೆ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲೂ ಟ್ರಂಪ್ ಸ್ಪರ್ಧೆ ಮಾಡಿ ಹೀನಾಯವಾಗಿ ಸೋತಿದ್ದರು. ಆದರೆ, ಆ ಸೋಲನ್ನು ಅವರು ಅಷ್ಟು ಸುಲಭವಾಗಿ ಒಪ್ಪಿಕೊಂಡಿರಲಿಲ್ಲ. ನಾಲ್ಕು ವರ್ಷಗಳ ನಂತರ ಅವರ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ. ಆದರೆ, ಅವರ ರಾಜಕೀಯ ಆಯಸ್ಸು ಇನ್ನು ನಾಲ್ಕು ವರ್ಷ ಮಾತ್ರ ಎನ್ನಲಾಗ್ತಿದೆ.

Why are these four years so important for Trump s political future

ಹೌದು ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಈ ಬಾರಿ ಅವರು ಇನ್ನಷ್ಟು ಚಾರ್ಮ್ ಹಾಗೂ ಜೋಶ್‌ನಿಂದಲೇ ಅಧಿಕಾರ ನಡೆಸುವ ಸಾಧ್ಯತೆ ಇದೆ. ಏಕೆಂದರೆ ಅವರ ರಾಜಕೀಯ ಭವಿಷ್ಯದ ಮುಖ್ಯ ಹಾಗೂ ಅಂತಿಮ ಘಟ್ಟ ಎಂದೇ ಇದನ್ನು ಪರಿಗಣಿಸಲಾಗ್ತಿದೆ.

2020ನೇ ಸಾಲಿನಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ಗೆ ಮುಖಭಂಗವಾಗಿತ್ತು. ಅಲ್ಲದೇ ಚುನಾವಣೆ ಫಲಿತಾಂಶದ ನಂತರ ಅವರ ಬೆಂಬಲಿಗರು ಮಾಡಿದ್ದ ರಾದ್ಧಾಂತ ಅಮೆರಿಕ ಇತಿಹಾಸದಲ್ಲಿ ಕರಾಳ ಹಾಗೂ ಕಪ್ಪು ಚುಕ್ಕಿ ಅಂತಲೇ ದಾಖಲಾಗಿದೆ.

ಇದಾದ ಮೇಲೆ ಡೊನಾಲ್ಡ್‌ ಟ್ರಂಪ್‌ಗೆ ಅಲ್ಲಿನ ಸಂಸತ್‌ನಿಂದ ವಾಗ್ದಂಡನೆ (ಛೀಮಾರಿ) ಹಾಕಲಾಗಿತ್ತು. ಎರಡೆರಡು ಬಾರಿ ಟ್ರಂಪ್‌ ಅಮೆರಿಕ ಸಂಸತ್ತಿನಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಆದರೆ, ಅವರು ಅವರ ತಪ್ಪುಗಳನ್ನು ತಿದ್ದಿಕೊಂಡು, ಮತ್ತಷ್ಟು ಹೋಮ್‌ ವರ್ಕ್‌ ಮಾಡಿಕೊಂಡು ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಇಳಿದರು.

ಡೊನಾಲ್ಡ್‌ ಟ್ರಂಪ್‌ ಮತ್ತೆ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನುವುದೇ ಜೋ ಬೈಡನ್ ಅವರನ್ನು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡಿತ್ತು. ಟ್ರಂಪ್ ಅರ್ಧ ಆಗಲೇ ಗೆದ್ದಂತೆ ಆಗಿತ್ತು. ಆದರೆ, ಕಮಲಾ ಹ್ಯಾರಿಸ್‌ ಅವರು ಕೊನೆಯ ಹಂತದ ವರೆಗೂ ಟ್ರಂಪ್‌ಗೆ ಪೈಪೋಟಿ ನೀಡುತ್ತಲ್ಲೇ ಬಂದರು.

ಮೂರು ಬಾರಿ ಸ್ಪರ್ಧೆ

ಇನ್ನು ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಡೊನಾಲ್ಡ್‌ ಟ್ರಂಪ್‌ ಮೂರು ಬಾರಿ ಸ್ಪರ್ಧೆ ಮಾಡಿದ್ದಾರೆ. ಮೊದಲ ಬಾರಿ ಗೆದ್ದು ಅಧಿಕಾರಕ್ಕೆ ಹೇರಿದ್ದರು. ಎರಡನೇ ಬಾರಿ ಅಂದರೆ, 2020ನೇ ಸಾಲಿನಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರಿಗೆ ಸೋಲಾಗಿತ್ತು. ಇದೀಗ 2024ನೇ ಸಾಲಿನಲ್ಲಿ ಮತ್ತೆ ಗೆಲುವಾಗಿದೆ. ಹೀಗಾಗಿ, ವೈಟ್‌ ಹೌಸ್‌ಅನ್ನು ಅವರು ಎರಡನೇ ಬಾರಿ ಪ್ರವೇಶಿಸುತ್ತಿದ್ದಾರೆ.

ಗರಿಷ್ಠ ಎರಡು ಬಾರಿ ಅಧ್ಯಕ್ಷರಾಗಬಹುದು

ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ನಡೆಯುತ್ತದೆ. ಅಮೆರಿಕ ಅಧ್ಯಕ್ಷರಾಗಲು ಗರಿಷ್ಠ ಎರಡು ಬಾರಿ ಅವಕಾಶ ಇರಲಿದೆ. ಇನ್ನು ಈಗಾಗಲೇ ಟ್ರಂಪ್‌ ಒಮ್ಮೆ ಅಧ್ಯಕ್ಷರಾಗಿದ್ದರು. ಇದೀಗ ಎರಡನೇ ಅವಧಿಯಾಗಿದೆ. ಈಗಾಗಲೇ ಅವರಿಗೆ 78 ವರ್ಷ ವಯಸ್ಸಾಗಿದೆ. ಹೀಗಾಗಿ, ಈ ನಾಲ್ಕು ವರ್ಷವೇ ನಿರ್ಣಾಯಕ ಹಾಗೂ ರಾಜಕೀಯದ ಮಹತ್ವದ ವರ್ಷಗಳಾಗಿರಲಿವೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+