Trump 2.0: ಮೋದಿ & ಟ್ರಂಪ್ ಜೋಡಿ, ಇನ್ಮುಂದೆ ಬರೀ ಮೋಡಿ!

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ನನ್ನ ಗೆಳಯ ಅಂತಲೇ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ. ಮೋದಿ ಹಾಗೂ ಟ್ರಂಪ್ ಜೋಡಿ ಈಗಾಗಲೇ ಮೋಡಿ ಮಾಡಿದೆ. ಇದೀಗ ಟ್ರಂಪ್ 2.0 ನಲ್ಲಿ ಯಾವ ರೀತಿ ಇರಲಿದೆ ಎನ್ನುವುದಷ್ಟೇ ಕುತೂಹಲ ಉಳಿದಿದೆ. ಮೋದಿ ಹಾಗೂ ಟ್ರಂಪ್‌ ಸೇರಿ ಹೊಸ ಜಾದು ಸೃಷ್ಟಿ ಮಾಡಲಿದ್ದಾರೆ. ಎರಡು ಪ್ರಮುಖ ರಾಷ್ಟ್ರಗಳ ನಡುವೆ ಹೊಸ ಬಾಂಧವ್ಯ ಸೃಷ್ಟಿಯಾಗಲಿದ್ದು, ಚೀನಾವನ್ನು ಕಟ್ಟಿ ಹಾಕಲು ಭಾರತಕ್ಕೆ ಪ್ರಮುಖ ಅಸ್ತ್ರ ಸಿಕ್ಕಂತಾಗಿದೆ ಎಂದು ಹೇಳಲಾಗುತ್ತಿದೆ.

ಡೊನಾಲ್ಡ್‌ ಟ್ರಂಪ್‌ ಹಾಗೂ ನರೇಂದ್ರ ಮೋದಿಯ ನಡುವೆ ಮೊದಲಿನಿಂದಲೂ ಒಳ್ಳೆಯ ಸಂಬಂಧವಿದೆ. ಕಳೆದ ಬಾರಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲೂ ಇದು ಬಹಿರಂಗವಾಗಿತ್ತು. ಇನ್ನು ಎರಡನೇ ಬಾರಿ ಅಮೆರಿಕ ಅಧ್ಯಕ್ಷರಾಗಿರುವ ಡೊನಾಲ್ಡ್‌ ಟ್ರಂಪ್‌ ಅವರನ್ನು ಮೋದಿ ಹಾಡಿ ಹೊಗಳಿದ್ದರೆ, ಮೋದಿ ಎಲ್ಲರಿಗೂ ಇಷ್ಟವಾಗುವ ನಾಯಕ ಅಂತ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಈ ಶುಭಾಶಯ ವಿನಿಮಯಗಳನ್ನು ನೋಡಿದರೆ, ಅಮೆರಿಕ ಹಾಗೂ ಭಾರತದ ಸ್ನೇಹ ಇನ್ನಷ್ಟು ಗಟ್ಟಿ ಆಗಲಿದೆ ಅಂತಲೇ ಹೇಳಲಾಗ್ತಿದೆ.

Trump 2 0 Modi amp amp Trump couple now only charm

ಡೊನಾಲ್ಡ್‌ ಟ್ರಂಪ್‌ ಹಾಗೂ ಮೋದಿ ಜೊತೆ ಉತ್ತಮ ಒಡನಾಟವಿದೆ. ಮೊದಲ ಬಾರಿ ಅಮೆರಿಕ ಅಧ್ಯಕ್ಷರಾಗಿದ್ದ ಟ್ರಂಪ್‌ ಹಾಗೂ ಪ್ರಧಾನಿಯಾಗಿದ್ದ ಮೊದಲ ಅವಧಿಯಲ್ಲಿ ಮೋದಿ ಇಬ್ಬರೂ ಒಟ್ಟೊಟ್ಟಿಗೆ ಹೆಜ್ಜೆ ಹಾಕಿದ್ದರು. 2019ರಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ ಟ್ರಂಪ್ ಅವರು ಟೆಕ್ಸಾಸ್‌ನಲ್ಲಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ‌ ನರೇಂದ್ರ ಮೋದಿ ಅವರಿಗೆ ರಾಜಾತಿಥ್ಯ ಕೊಟ್ಟಿದ್ದರು. ಈ ಸಮಾರಂಭದಲ್ಲಿ ಬರೋಬ್ಬರಿ 50,000 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು.

ಇನ್ನು ಹೂಸ್ಟನ್‌ನಲ್ಲಿ ನಡೆದಿದ್ದ ಹೌಡಿ, ಮೋದಿ.. ಎನ್ನುವ ಕಾರ್ಯಕ್ರಮವಂತು ಹೊಸ ದಾಖಲೆಯನ್ನೇ ಸೃಷ್ಟಿ ಮಾಡಿತ್ತು. ಅಲ್ಲದೇ ಭಾರತದ ಗುಜರಾತ್‌ನಲ್ಲಿ 2020ರಲ್ಲಿ ನಮಸ್ತೆ ಟ್ರಂಪ್ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದಕ್ಕೆ ಬರೋಬ್ಬರಿ 120,000 ಹೆಚ್ಚು ಜನ ಸೇರಿದ್ದರು.

ಡೊನಾಲ್ಡ್‌ ಟ್ರಂಪ್ ಅಭಿನಂದಿಸಿದ ಮೋದಿ

ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ನನ್ನ ಸ್ನೇಹಿತ, ಅಧ್ಯಕ್ಷ ಟ್ರಂಪ್‌ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದೆ. ಟ್ರಂಪ್‌ ಅವರ ಅದ್ಭುತ ವಿಜಯಕ್ಕಾಗಿ ಅವರನ್ನು ಅಭಿನಂದಿಸಿದ್ದೇನೆ. ತಂತ್ರಜ್ಞಾನ, ರಕ್ಷಣೆ, ಇಂಧನ, ಬಾಹ್ಯಾಕಾಶ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಭಾರತ ಹಾಗೂ ಅಮೆರಿಕ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಲು, ಮತ್ತೊಮ್ಮೆ ಒಟ್ಟಿಗೆ ಕೆಲಸ ಮಾಡುವ ನಿಟ್ಟಿನಲ್ಲಿ ಎದುರು ನೋಡುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ. ಮೋದಿ ಅವರ ಟ್ವೀಟ್‌ ವೈರಲ್‌ ಆಗಿದೆ. ಅಲ್ಲದೇ ಟ್ರಂಪ್‌ ಸಹ ಮೋದಿಯನ್ನು ಹಾಡಿ ಹೊಗಳಿದ್ದಾರೆ.

ಮೋದಿಯನ್ನು ಹೊಗಳಿದ ಟ್ರಂಪ್: ಇನ್ನು ಟ್ರಂಪ್‌ ಸಹ ಮೋದಿಯನ್ನು ಹೊಗಳಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಡೀ ಜಗತ್ತೇ ಪ್ರೀತಿಸುತ್ತದೆ ಎಂದಿದ್ದಾರೆ ಟ್ರಂಪ್. ಅಲ್ಲದೇ ಮೋದಿ ಮಹಾನ್‌ ವ್ಯಕ್ತಿ ಹಾಗೂ ಭಾರತ ಅಮೋಘ ರಾಷ್ಟ್ರ ಎಂದು ಮೆಚ್ಚುಗೆ ಸೂಚಿಸಿರುವುದು ವರದಿಯಾಗಿದೆ.

ಚೀನಾ ಕಟ್ಟಿ ಹಾಕಲು ಸಹಕಾರಿ: ಟ್ರಂಪ್ ಗೆದ್ದಿರುವುದು ಭಾರತಕ್ಕೆ ಪ್ಲಸ್‌ ಪಾಯಿಂಟ್‌ ಅಂತಲೇ ಹೇಳಲಾಗ್ತಿದೆ. ಯಾಕೆಂದರೆ, ಅಮೆರಿಕದ ಅಧ್ಯಕ್ಷ ಭಾರತದ ಪರವಾದ ಒಲವು ಹೊಂದಿದ್ದು, ಇದು ಚೀನಾವನ್ನು ಕಟ್ಟಿ ಹಾಕುವುದಕ್ಕೆ ಭಾರತಕ್ಕೆ ಸಹಕಾರಿಯಾಗಲಿದೆ ಅಂತ ಹೇಳಲಾಗ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+