ಕಮಲಾ ಹ್ಯಾರಿಸ್ ಸೋಲಿಸುವಲ್ಲಿ ವರ್ಕ್‌ಔಟ್‌ ಆಗಿದ್ದು ಇದೇ ಅಂಶಗಳು!

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಬಾರಿ ಕಮಲಾ ಹ್ಯಾರಿಸ್‌ ಅವರು ಹೀನಾಯವಾಗಿ ಸೋತಿದ್ದಾರೆ. ಶ್ವೇತಭವನವನ್ನು ಪ್ರವೇಶಿಸಿದ ಮೊದಲ ಮಹಿಳೆ ಕಮಲಾ ಆಗಲಿದ್ದಾರೆಯೇ ಎಂದು ಎದುರು ನೋಡಲಾಗುತ್ತಿತ್ತು. ಆದರೆ, ಆ ಕನಸು ಈಡೇರಿಲ್ಲ. ಈ ಬಾರಿಯೂ ಮಹಿಳಾ ಅಧ್ಯಕ್ಷೆ ಆಯ್ಕೆ ಆಗಿಲ್ಲ. ಆದರೆ, ಕಮಲಾ ಹ್ಯಾರಿಸ್‌ನ ಸೋಲಿನ ಈ ಹಿಂದೆ ಈ ಒಂದು ಕುತಂತ್ರ ವರ್ಕ್‌ಔಟ್‌ ಆಗಿದೆ ಅಂತಲೇ ಹೇಳಲಾಗ್ತಿದೆ.

ಅಮೆರಿಕದ ಚುನಾವಣೆ ಎಂದರೆ ಘನತೆ ಹಾಗೂ ಬದ್ಧತೆಯಿಂದ ಕೂಡಿರುತ್ತದೆ. ಆದರೆ, ಈ ಬಾರಿ ಅಮೆರಿಕ ಚುನಾವಣೆ ಆ ರೀತಿ ಇರಲೇ ಇಲ್ಲ ಎನ್ನುವ ಮಾತಿದೆ. ಈ ಬಗ್ಗೆ ಅಮೆರಿಕನ್ಸ್‌ ಅಸಮಾಧಾನ ವ್ಯಕ್ತಪಡಿಸಿರುವುದು ಸಹ ಇದೆ. 2024ನೇ ಸಾಲಿನ ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಚಾರ ವರ್ಚಸ್ಸು ಕಳೆದುಕೊಂಡಿದೆ. ಪ್ರಚಾರ ಸಭೆ, ರ್ಯಾಲಿ ಹಾಗೂ ಚರ್ಚೆಗಳಲ್ಲಿ ಘನತೆ ಉಳಿಸಿಲ್ಲ ಎಂದು ಅಮೆರಿಕದ ಮತದಾರರು ಬೇಸರ ವ್ಯಕ್ತಪಡಿಸಿದ್ದರು. 10 ಜನರಲ್ಲಿ 7 ಜನರು ಈ ರೀತಿಯ ಅಭಿಪ್ರಾಯಕ್ಕೆ ಬಂದಿದ್ದರು ಅಂತಲೇ ಹೇಳಲಾಗಿತ್ತು.

These are the elements that worked out in beating Kamala Harris

ಇದರಲ್ಲೇ ಕಮಲಾ ಅವರ ಸೋಲಿನ ಸುಳಿವು ಇದೆ. ಹೌದು ಗೆಲ್ಲಲ್ಲು ಆಗದೆ ಇರುವವರು ಅಥವಾ ಹೇಗಾದರೂ ಎದುರಾಳಿಯನ್ನು ಸೋಲಿಸಬೇಕು ಎನ್ನುವವರು ಬಳಸುವ ಕೊನೆಯ ಅಸ್ತ್ರವೂ ಅಪಪ್ರಚಾರ ಅಂತ ಹೇಳಲಾಗುತ್ತೆ. ಕಮಲಾ ಹ್ಯಾರಿಸ್‌ ಅವರ ವಿರುದ್ಧ ವರ್ಕ್‌ ಆಗಿದ್ದು ಸಹ ಅದೇ. ಹೌದು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಟ್ರಂಪ್‌ಗೆ ಮೊದ ಮೊದಲು ತೀವ್ರ ಪೈಪೋಟಿ ನೀಡಿದ್ದರು. ಚುನಾವಣೆ ಪ್ರಾರಂಭವಾದ ಸಂದರ್ಭದಲ್ಲಿ ಹಾಗೂ ಪ್ರಚಾರ ಸಭೆಗಳು ನಡೆಯುವಾಗಲೂ ಇಬ್ಬರ ನಡುವೆಯೂ ತೀರ ಕೂದಲೆಳೆಯ ಅಂತರ ಮಾತ್ರ ಬಾಕಿ ಉಳಿದಿತ್ತು.

ಆಗ ವರ್ಕ್‌ಔಟ್‌ ಆಗಿದ್ದೇ ಅಪಪ್ರಚಾರದ ಅಸ್ತ್ರ ಅಂತ ಹೇಳಲಾಗ್ತಿದೆ. ಈ ಬಾರಿ ಕಮಲಾ ಹ್ಯಾರಿಸ್‌ ಅವರನ್ನು ಟ್ರೋಲ್ ಮಾಡಲಾಗಿತ್ತು. ಸೋಷಿಯಲ್‌ ಮೀಡಿಯಾದಲ್ಲಿ ತೀರ ಕೆಳಮಟ್ಟದ ಭಾಷೆಯನ್ನು ಬಳಲಾಗಿತ್ತು. ಅವರ ಪೋಟೋಗಳನ್ನು ಬಳಸಿ ಮೀಮ್ಸ್‌ ಹಾಗೂ ಜೋಕ್ಸ್‌, ಟ್ರೋಲ್‌ಗಳು ಕ್ರಿಯೇಟ್‌ ಆಗಿದ್ದವು. ಅಲ್ಲದೇ ಕಮಲಾ ವಿರುದ್ಧ ಡೀಪ್ ಫೇಕ್‌ ಸಹ ಬಳಸಿದ್ದರು.

ಚುನಾವಣೆ ಪ್ರಚಾರ ಸಭೆಗಳಲ್ಲಿ ಡೊನಾಲ್ಡ್‌ ಟ್ರಂಪ್ ಅವರು ಕಮಲಾ ಹ್ಯಾರಿಸ್‌ ಅವರ ಸಾಮರ್ಥ್ಯದ ಬಗ್ಗೆ ವ್ಯಂಗ್ಯವಾಡಿದ್ದರು. ಅವರು ಅಧ್ಯಕ್ಷರಾಗಿ ಆಯ್ಕೆಯಾದರೆ, ಪ್ರಮುಖ ರಾಷ್ಟ್ರಗಳ ನಾಯಕರೊಂದಿಗೆ ವ್ಯವಹರಿಸುವುದಕ್ಕೆ ಆಗಲ್ಲ ಅಂತ ಬಹಿರಂಗವಾಗಿಯೇ ಸವಾಲು ಹಾಕಿದ್ದರು. ಇನ್ನು ಕಮಲಾ ಹ್ಯಾರಿಸ್ ಅವರು ಸೋಲುವುದಕ್ಕೆ ಕೇವಲ ಅಪಪ್ರಚಾರ ಮಾತ್ರ ಕಾರಣವಲ್ಲ. ಇನ್ನೂ ಹಲವು ವಿಷಯಗಳು ಸಹ ಇವೆ. ಆದರೆ, ಈ ವಿಷಯ ಅವರು ಸೋಲುವನ್ನು ವರ್ಕ್‌ಔಟ್‌ ಆಗಿರುವ ಸಾಧ್ಯತೆ ಇದೆ ಎಂದು ವಿಶ್ಲೇಷಣೆ ಮಾಡಲಾಗ್ತಿದೆ.

ಅಮೆರಿಕದಲ್ಲಿ ಇಲ್ಲಿಯ ವರೆಗೆ ಮಹಿಳಾ ಅಧ್ಯಕ್ಷರು ಆಯ್ಕೆಯಾಗಿರುವ ಉದಾಹರಣೆ ಇಲ್ಲ. ಈ ಬಾರಿ ಕಮಲಾ ಅವರು ಆಯ್ಕೆಯಾದರೆ, ಇದು ಮೊದಲ ಮಹಿಳಾ ಅಧ್ಯಕ್ಷೆ ಶ್ವೇತಭವನ ಪ್ರವೇಶಿಸಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಅದು ಈ ಬಾರಿಯೂ ಈಡೇರಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+