US Elections 2024: ಡೊನಾಲ್ಡ್ ಟ್ರಂಪ್ ಎದುರು ಸಾಲು ಸಾಲು ಸವಾಲುಗಳು, ಸ್ವಲ್ಪ ಎಡವಿದರೂ ಅಮೆರಿಕ...
ಡೊನಾಲ್ಡ್ ಟ್ರಂಪ್ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ ನಿಜ, ಆದರೆ ಹೀಗೆ ಡೊನಾಲ್ಡ್ ಟ್ರಂಪ್ ಆಯ್ಕೆ ಅನ್ನೋದು ಸುಲಭದ ತುತ್ತಾಗಿ ಉಳಿದಿಲ್ಲ. ಯಾಕೆ ಅಂದ್ರೆ ಈಗ ದೈತ್ಯ ದೇಶ ಅಮೆರಿಕ ಸಾಲು ಸಾಲು ಸವಾಲುಗಳನ್ನ ಎದುರಿಸುತ್ತಿದೆ. ಆರ್ಥಿಕವಾಗಿ ಮಾತ್ರ ಅಲ್ಲ, ನೂರಾರು ವಿಚಾರದಲ್ಲಿ ಅಮೆರಿಕ ಈಗ ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿದೆ. ಇಂತಹ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಏನು ಮಾಡಬೇಕು? ಡೊನಾಲ್ಡ್ ಟ್ರಂಪ್ ಏನು ಮಾಡಲೇ ಬಾರದ? ಡೊನಾಲ್ಡ್ ಟ್ರಂಪ್ ಅವರ ಎದುರು ಇರುವ ಸಾಲು ಸಾಲು ಸವಾಲುಗಳ ಪಟ್ಟಿಯನ್ನ ತಿಳಿಯೋಣ ಬನ್ನಿ.
ಅಮೆರಿಕದ ಹೊಸ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಡೊನಾಲ್ಡ್ ಟ್ರಂಪ್‌ಗೆ ಅಧ್ಯಕ್ಷನ ಪಟ್ಟವು ಸುಖದ ವಾತಾವರಣ ನೀಡಲಾರದು. ಯಾಕಂದ್ರೆ ಒಂದು ಕಡೆ ಅಮೆರಿಕ ನೂರಾರು ಆರ್ಥಿಕ ಸಮಸ್ಯೆ ಎದುರಿಸುತ್ತಿದೆ. ಇನ್ನೊಂದು ಕಡೆ ರಷ್ಯಾ & ಉಕ್ರೇನ್ ಯುದ್ಧ, ಇಸ್ರೇಲ್ & ಗಾಜಾ ಯುದ್ಧ, ಇಸ್ರೇಲ್ & ಲೆಬನಾನ್ ಯುದ್ಧ, ಇಸ್ರೇಲ್ & ಇರಾನ್ ಯುದ್ಧ ಸಾಧ್ಯತೆ...

ಡೊನಾಲ್ಡ್ ಟ್ರಂಪ್ ಆಲೋಚನೆ ಏನು?
ಹೀಗೆ ನೂರಾರು ಸವಾಲುಗಳು ಅಮೆರಿಕದ ನೂತನ ಅಧ್ಯಕ್ಷರನ್ನ ಕಾಡಲಿವೆ. ಇದೇ ಕಾರಣಕ್ಕೆ ಡೊನಾಲ್ಡ್ ಟ್ರಂಪ್ ಅವರು ಈಗ ಎಲ್ಲಾ ಸಮಸ್ಯೆ ಎದುರಿಸಲು ಮತ್ತಷ್ಟು ಅಲರ್ಟ್ ಆಗಬೇಕಿದೆ. ಸುಖದ ಮಾತು ಬಿಡಿ ಇದೀಗ ಡೊನಾಲ್ಡ್ ಟ್ರಂಪ್ ತಮಗೆ ಸಿಕ್ಕಿರುವ ಅವಕಾಶ ಬಳಸಿಕೊಂಡು ಅಮೆರಿಕವನ್ನು ಮತ್ತೊಮ್ಮೆ ಬಲಿಷ್ಠವಾಗಿ ಕಟ್ಟಬೇಕಿದೆ. ಇಲ್ಲವಾದರೆ ಅಮೆರಿಕದ ಮೇಲೆ ಈ ಸಂಕಷ್ಟದ ಸಮಯದಲ್ಲಿ ಶತ್ರು ದೇಶಗಳು ಎರಗುವುದು ಗ್ಯಾರಂಟಿ ಎಂಬ ಭಯ ಕಾಡ್ತಿದೆ.
ಯುದ್ಧ ನಿಲ್ಲಿಸುತ್ತಾರಾ ಡೊನಾಲ್ಡ್ ಟ್ರಂಪ್?
ಜಗತ್ತಿನಲ್ಲಿ ಮತ್ತೊಂದು ಮಹಾಯುದ್ಧದ ಭಯವು ಕಾಡುತ್ತಿದೆ. ಹೀಗಾಗಿ, ಡೊನಾಲ್ಡ್ ಟ್ರಂಪ್ ಏನು ಮಾಡ್ತಾರೋ ಬಿಡ್ತಾರೋ ಗೊತ್ತಿಲ್ಲ ಆದರೆ ಮೊದಲಿಗೆ ರಷ್ಯಾ & ಉಕ್ರೇನ್ ಯುದ್ಧವನ್ನ ನಿಲ್ಲಿಸಬೇಕಿದೆ. ಡೊನಾಲ್ಡ್ ಟ್ರಂಪ್ ಅವರು ಚುನಾವಣೆಗೆ ಮೊದಲು ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸುವ ಭರವಸೆ ನೀಡಿದ್ದರು.
ತಮ್ಮ ಮಾತಿನ ಪ್ರಕಾರ ಡೊನಾಲ್ಡ್ ಟ್ರಂಪ್ ಈಗ ನಡೆದುಕೊಂಡರೆ ರಷ್ಯಾ & ಉಕ್ರೇನ್ ಯುದ್ಧ ಕೆಲವೇ ದಿನಗಳಲ್ಲಿ ನಿಂತು ಹೋಗಲಿದೆ. ಯಾಕಂದ್ರೆ ಅಮೆರಿಕ ಈಗ ಉಕ್ರೇನ್‌ಗೆ ನೀಡುತ್ತಿರುವ ಯುದ್ಧ ಪರಿಹಾರ ಅಂದ್ರೆ ಹಣದ ಸಹಾಯ ನಿಲ್ಲಿಸಲಿದೆ. ಹೀಗೆ ಉಕ್ರೇನ್‌ಗೆ ಬರುತ್ತಿರುವ ಹಣ ನಿಂತರೆ ಉಕ್ರೇನ್ ಯುದ್ಧ ಮುಂದುವರಿಸಲು ಒದ್ದಾಡಲಿದೆ. ಈ ಕಾರಣಕ್ಕೆ ರಷ್ಯಾ & ಉಕ್ರೇನ್ ಯುದ್ಧ ನಿಲ್ಲುವ ಮುನ್ಸೂಚನೆ ಈಗ ಸಿಗುತ್ತಿದೆ.












Click it and Unblock the Notifications