Donald Trump: ಅಮೆರಿಕ ಇತಿಹಾಸದಲ್ಲಿಯೇ ಅತ್ಯಂತ ಹಿರಿಯ ಅಧ್ಯಕ್ಷ ಡೊನಾಲ್ಡ್ ಟ್ರಂಪ್- ಕುಟುಂಬ, ವ್ಯವಹಾರಗಳ ಕುರಿತು ತಿಳಿಯಿರಿ
2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಎರಡನೇ ಭಾರಿ ಆಯ್ಕೆಯಾಗಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರನ್ನು ಸೋಲಿಸುವ ಮೂಲಕ 78 ವರ್ಷ ವಯಸ್ಸಿನ ಟ್ರಂಪ್ ಹೊಸದೊಂದು ಇತಿಹಾಸ ಬರೆದಿದ್ದಾರೆ. ಇದೀಗ ಅವರು ಅಮೆರಿಕ ಇತಿಹಾಸದಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ.
2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅವರು ಅಧಿಕಾರವನ್ನು ಕಳೆದುಕೊಂಡಿದ್ದರು. ಆದರೆ, ಅಮೆರಿಕದ ರಾಜಕಾರಣದಲ್ಲಿ ಸಕ್ರಿಯರಾಗಿಯೇ ಉಳಿದಿದ್ದ ಟ್ರಂಪ್ ಎರಡನೇ ಭಾರಿ ಅಧಿಕಾರ ಬಯಸಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದರು.

ಟ್ರಂಪ್ ಅವರ ವರ್ಣರಂಜಿತ ಬದುಕು ಅವರನ್ನು ಹಲವು ವಿವಾದಗಳಿಗೆ ಎಡೆಮಾಡಿಕೊಟ್ಟಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಸೋಲುಂಡಾಗ, ಅವರು ಗಲಭೆಗೆ ಪ್ರಚೋದನೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿದ್ದವು. ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು. ಅವರನ್ನು ಬಂಧಿಸಿ ಜೈಲಿಗೆ ಹಾಕಲಾಗಿತ್ತು. ಆದರೆ, ಟ್ರಂಪ್ ಮಾತ್ರ ಸಕ್ರಿಯ ರಾಜಕಾರಣದಲ್ಲಿಯೇ ಮುಂದುವರಿಯಲು ನಿರ್ಧರಿಸಿದ್ದರು.
ಮೂವರು ಪತ್ನಿಯರನ್ನು ಹೊಂದಿರುವ ಟ್ರಂಪ್‌ಗೆ ಹಲವರ ಜೊತೆ ಪ್ರೇಮ ಸಂಬಂಧಗಳಿದ್ದವು ಎಂಬ ಆರೋಪ ಕೇಳಿಬಂದಿದ್ದವು. ಟ್ರಂಪ್ ವಿರುದ್ಧ ಮೀಟೂ ಪ್ರಕರಣವು ಇದೆ. ಚುನಾವಣೆ ಪ್ರಚಾರದ ವೇಳೆ ಟ್ರಂಪ್ ಮೇಲೆ ಗುಂಡಿನ ದಾಳಿಗಳಾದವು. ಇದೆಲ್ಲದಕ್ಕೆ ತಲೆಕೆಡಿಸಿಕೊಳ್ಳದೇ ಟ್ರಂಪ್ ಅವರು ದೀರ್ಘಾವಧಿಯ ಪ್ರಚಾರವನ್ನು ಮುಂದುವರಿಸಿದರು. ಈಗ ಎಲ್ಲವನ್ನು ಮೆಟ್ಟಿ ನಿಂತು ಅಮೆರಿಕ ಅಧ್ಯಕ್ಷ ಗಾದಿಗೆ ಮತ್ತೆ ಮರಳಿದ್ದಾರೆ.

ಅಧ್ಯಕ್ಷರಾಗಿ ಆಯ್ಕೆಯಾದ ಅತ್ಯಂತ ಹಿರಿಯ ವ್ಯಕ್ತಿ
ಟ್ರಂಪ್ ಅವರಿಗೆ ಈಗ 78 ವರ್ಷ ವಯಸ್ಸಾಗಿದೆ. ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅತ್ಯಂತ ಹಿರಿಯ ವ್ಯಕ್ತಿಯಾಗಿ ಟ್ರಂಪ್ ಹೊರಹೊಮ್ಮಿದ್ದಾರೆ. ಟ್ರಂಪ್ ಅವರು ಇಬ್ಬರು ಪತ್ನಿಯರಿಗೆ ವಿಚ್ಛೇದನ ನೀಡಿದ್ದು ಈಗ ಮೆಲಾನಿಯ (54) ಜೊತೆ ವೈವಾಹಿಕ ಜೀವನವನ್ನು ನಡೆಸುತ್ತಿದ್ದಾರೆ. ಟ್ರಂಪ್ ಅವರಿಗೆ ನಾಲ್ವರು ಮಕ್ಕಳಿದ್ದು, ಮೆಲಾನಿಯ ಹಾಗೂ ಟ್ರಂಪ್ ಅವರ ದಾಂಪತ್ಯಕ್ಕೆ ಒಬ್ಬ ಮಗನಿದ್ದಾನೆ.
ಮೊದಲ ಪತ್ನಿ ಇವಾನಾ ಟ್ರಂಪ್ ಜೊತೆಗಿನ ದಾಂಪತ್ಯಕ್ಕೆ ಡೊನಾಲ್ಡ್ ಟ್ರಂಪ್ ಜೂನಿಯರ್, ಎರಿಕ್ ಟ್ರಂಪ್ ಹಾಗೂ ಇವಾಂಕಾ ಟ್ರಂಪ್ ಎಂಬ ಮೂವರು ಮಕ್ಕಳಿದ್ದಾರೆ. ಮೆಲಾನಿಯ ಟ್ರಂಪ್ ಜೊತೆಗಿನ ದಾಂಪತ್ಯಕ್ಕೆ ಬ್ಯಾರನ್ ಟ್ರಂಪ್ ಎಂಬ ಮಗನಿದ್ದಾನೆ. ಹೋಟೆಲ್, ರಿಯಲ್ ಎಸ್ಟೇಟ್, ಸ್ಟೀಲ್ ಹಾಗೂ ಕ್ರಿಪ್ಟೋ ಕರೆನ್ಸಿ ಸೇರಿದಂತೆ ಟ್ರಂಪ್ ಅವರು ಹಲವು ಉದ್ಯಮಗಳಲ್ಲಿ ತೊಡಗಿಕೊಂಡಿದ್ದಾರೆ. ಅವರು ಯಶಸ್ವಿ ಉದ್ಯಮಿಯಾಗಿಯೂ ಹೆಸರುವಾಸಿಯಾಗಿದ್ದಾರೆ.












Click it and Unblock the Notifications