US consulate: ಯುಎಸ್ ಕಾನ್ಸುಲೇಟ್‌ನಿಂದ ಕರ್ನಾಟಕ-ಅಮೇರಿಕಾ ಮತ್ತಷ್ಟು ಹತ್ತಿರ, ಹೇಗೆ?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದಿನಿಂದ ಅಮೇರಿಕಾ ಕಾನ್ಸುಲೇಟ್ (U.S.consulate) ಕಚೇರಿ ಕಾರ್ಯಾರಂಭ ಮಾಡಿದೆ. ವಿದೇಶಾಂಗ ಸಚಿವ ಎಸ್.ಜೈಶಂಕರ್ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನೂತನ ಕಾನ್ಸುಲೇಟ್ ಕಚೇರಿ ಉದ್ಘಾಟಿಸಿದ್ದಾರೆ. ಸದ್ಯ ಬೆಂಗಳೂರಿನ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್‌ನಲ್ಲಿ ತಾತ್ಕಾಲಿಕವಾಗಿ ಅಮೇರಿಕಾ ಕಾನ್ಸುಲೇಟ್ ಕಚೇರಿ ತೆರೆಯಲಾಗಿದೆ. ಈ ಕಾರ್ಯದಿಂದಾಗಿ ಕರ್ನಾಟಕ ಹಾಗೂ ಅಮೇರಿಕಾದ ನಡುವೆ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳಲಿದೆ.
ಶೈಕ್ಷಣಿಕ ವಿನಿಮಯ, ತಂತ್ರಜ್ಞಾನ, ಸಂಸ್ಕೃತಿ ಮತ್ತು ಉದ್ಯಮಶೀಲತೆಯ ಜಾಗತಿಕ ಕೇಂದ್ರವಾದ ಬೆಂಗಳೂರಿನಲ್ಲಿ ದಶಕಗಳ ಕಾಲ ನಮ್ಮ ಅಸ್ತಿತ್ವವನ್ನು ನಿರ್ಮಿಸಲು ಹಾಗೂ ವ್ಯಾಪಾರ ಸಹಯೋಗಗಳನ್ನು ಪೋಷಿಸಲು ಅಮೇರಿಕಾ ಎದುರು ನೋಡುತ್ತಿದೆ ಎಂದು ಹೇಳಿಕೊಂಡಿದೆ. ರಾಜತಾಂತ್ರಿಕವಾಗಿ 31 ವರ್ಷಗಳಿಗೂ ಹೆಚ್ಚು ಕಾಲ ಅಮೇರಿಕಾ ತನ್ನ ವಾಣಿಜ್ಯ ಸೇವೆ, ಹೂಡಿಕೆ ವಿಭಾಗ ಸೇರಿದಂತೆ ಕರ್ನಾಟಕದಲ್ಲಿ ಅವಕಾಶಗಳೊಂದಿಗೆ ಅಮೇರಿಕನ್ ವ್ಯವಹಾರಗಳನ್ನು ಸಂಪರ್ಕಿಸುವ ವ್ಯಾಪಾರ ಸಹಯೋಗವನ್ನು ಉತ್ತೇಜಿಸಲಿದೆ.

ಉದಯೋನ್ಮುಖ ತಂತ್ರಜ್ಞಾನಗಳ ವಿಚಾರದಲ್ಲಿ ಕ್ರಿಟಿಕಲ್ ಮತ್ತು ಎಮರ್ಜಿಂಗ್ ಟೆಕ್ನಾಲಜೀಸ್ (ಐಸಿಇಟಿ) ಉಪಕ್ರಮದಡಿ ನಮ್ಮ ಬೆಂಗಳೂರು ಅಮೇರಿಕಾ-ಭಾರತದ ನಾವೀನ್ಯತೆಯ ಸಹಕಾರದ ಕೇಂದ್ರವಾಗಲಿದೆ. ಬೆಂಗಳೂರಿನ ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಗಳು ಈಗಾಗಲೇ ಅಮೇರಿಕಾದೊಂದಿಗೆ ವ್ಯವಹಾರಗಳನ್ನು ಹೊಂದಿವೆ. ಇದರಲ್ಲಿ ಮತ್ತಷ್ಟು ಸುಧಾರಣೆಗಳಿಗೆ ಸಾಕ್ಷಿಯಾಗಲಿದೆ.
ಫೆಬ್ರವರಿ 2025ರಲ್ಲಿ ಯಲಹಂಕ ವಾಯುನೆಲೆಯಲ್ಲಿ ನಡೆಯುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಮತ್ತು ವಾಯುಯಾನ ಪ್ರದರ್ಶನದಲ್ಲಿ ಅಮೇರಿಕಾ ಕೂಡ ಭಾಗಿಯಾಗಲಿದೆ. ಅಮೇರಿಕಾ-ಭಾರತ ಸಿವಿಲ್ ಸ್ಪೇಸ್ ಜಾಯಿಂಟ್ ವರ್ಕಿಂಗ್ ಗ್ರೂಪ್ ಅಡಿಯಲ್ಲಿ ಭಾರತೀಯ ಬಾಹ್ಯಾಕಾಶ ಕಂಪನಿಗಳಿಗೆ ಸಹಯೋಗದ ಅವಕಾಶಗಳನ್ನು ವಿಸ್ತರಿಸಲು ಸಹಾಯ ಮಾಡುತ್ತದೆ.

ಮಾರುಕಟ್ಟೆ ಪ್ರವೇಶ, ಸರ್ಕಾರಿ ಸಂಗ್ರಹಣೆ, ವಿದೇಶಿ ನೇರ ಹೂಡಿಕೆ ಮತ್ತು ರಫ್ತು ನಿಯಂತ್ರಣಗಳು ಈ ನಾಲ್ಕು ವಿಚಾರಗಳ ಮೇಲೆ ಅತಿ ಹೆಚ್ಚಿನ ಗಮನಹರಿಸಲಿದೆ. ಭಾರತದ ಸಿಲಿಕಾನ್ ವ್ಯಾಲಿಯಾಗಿರುವ ಬೆಂಗಳೂರು, ಸುಮಾರು 700 ಅಮೇರಿಕಾ ಕಂಪನಿಗಳು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ನೆರವಾಗಲಿದೆ. ಅಮೇರಿಕಾ ವಾಣಿಜ್ಯ ಸೇವೆಯು ಈ ಪ್ರದೇಶದಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸುವಲ್ಲಿ ಮತ್ತು ವಿಸ್ತರಿಸುವಲ್ಲಿ ಬೆಂಬಲಿಸುತ್ತದೆ.
ಅಮೇರಿಕಾ-ಭಾರತದ ವ್ಯಾಪಾರ ಮತ್ತು ತಂತ್ರಜ್ಞಾನದ ಸಹಕಾರವನ್ನು ಗಾಢವಾಗಿಸಲು ಮತ್ತು ಭಾರತದ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು ಅಮೇರಿಕಾ ಸರ್ಕಾರದ ಹೂಡಿಕೆಗಳಲ್ಲಿ ಕರ್ನಾಟಕವು ಪ್ರಮುಖ ಪಾತ್ರವಹಿಸಲಿದೆ. ಅಮೇರಿಕಾ ತನ್ನ ವ್ಯಾಪಾರ ಕಾರ್ಯಾಚರಣೆ ಅವಕಾಶಗಳು ಹಾಗೂ ಆರ್ಥಿಕ ಸಂಬಂಧಗಳನ್ನು ಬಲಪಡಿಸಲು ಅಲ್ಲಿಂದ ಹಲವು ವ್ಯಾಪಾರ ನಿಯೋಗಗಳು ಬೆಂಗಳೂರಿಗೆ ಭೇಟಿ ನೀಡಲಿವೆ.
ಬೆಂಗಳೂರಿನಲ್ಲಿ ಅತಿದೊಡ್ಡ ಹೂಡಿಕೆದಾರರಲ್ಲಿ ಅಮೇರಿಕಾ ಒಂದಾಗಿದೆ. ಮೈಕ್ರೋಸಾಫ್ಟ್, ಗೂಗಲ್ ಮತ್ತು ಅಮೆಜಾನ್ ಸೇರಿದಂತೆ ಜಾಗತಿಕ ಟೆಕ್ ದೈತ್ಯರಿಂದ ಅಪಾರ ಕೊಡುಗೆಗಳನ್ನು ಬೆಂಗಳೂರು ಹೊಂದಿದೆ. ಬೆಂಗಳೂರಿನ ತಂತ್ರಜ್ಞಾನ ಮತ್ತು ಸೇವಾ ಉದ್ಯಮಗಳು ಭಾರತ-ಅಮೇರಿಕಾ ನಡುವಿನ ವ್ಯಾಪಾರಕ್ಕೆ ಗಣನೀಯ ಕೊಡುಗೆ ನೀಡುವುದಲ್ಲದೆ ಸಾಫ್ಟ್‌ವೇರ್ ರಫ್ತು ಕೂಡ ಪ್ರಮುಖ ಪಾತ್ರ ವಹಿಸಲಿದೆ.
ಶಿಕ್ಷಣ: ಅಮೇರಿಕಾ ಬೆಂಗಳೂರಿನ ಟೆಕ್ ಉದ್ಯಮದೊಂದಿಗೆ ಸಹಕಾರ ನೀಡಲಿದೆ. ಕರ್ನಾಟಕದ ಎಲ್ಲ ಪ್ರಮುಖ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳು, ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು ಅಮೇರಿಕನ್ ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ನಡೆಯುತ್ತಿರುವ ಪಾಲುದಾರಿಕೆಗಳನ್ನು ಮುಂದುವರಿಸಲಿದೆ. ಕರ್ನಾಟಕವು ಅಮೇರಿಕಾದ ಸರ್ಕಾರದ ಅನುದಾನಿತ ವೃತ್ತಿಪರ, ಶೈಕ್ಷಣಿಕ ಮತ್ತು ಯುವ ವಿನಿಮಯ ಕಾರ್ಯಕ್ರಮಗಳಡಿ ಸುಮಾರು 270 ವಿದ್ಯಾರ್ಥಿಗಳಿಗೆ ನೆಲೆಯಾಗಿದೆ.
ಹವಾಮಾನ: ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಕರ್ನಾಟಕ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ, ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (USAID) ಕರ್ನಾಟಕದಲ್ಲಿ ಅರಣ್ಯ ನಿರ್ವಹಣೆ ಮತ್ತು ಜೀವವೈವಿಧ್ಯ ಸಂರಕ್ಷಣೆಯನ್ನು ಬಲಪಡಿಸುವ ಮೂಲಕ ಭಾರತದ ಹವಾಮಾನ ನಾಯಕತ್ವವನ್ನು ಮುನ್ನಡೆಸುತ್ತಿದೆ. ಇದು ಹವಾಮಾನ ಬದಲಾವಣೆಯ ವಿರುದ್ಧ ಜಾಗತಿಕ ಹೋರಾಟದಲ್ಲಿ ಭಾರತದ ನಾಯಕತ್ವವನ್ನು ಬಲಪಡಿಸುತ್ತದೆ.
-
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications