ಅಮೆರಿಕದ ನೂತನ ಅಧ್ಯಕ್ಷರ ಬಗ್ಗೆ ಉಕ್ರೇನ್‌ ಬೆಣ್ಣೆ ಮಾತು, ಯುದ್ಧ ಲೆಕ್ಕಾಚಾರ ಜೋರು!

ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಜನವರಿ 20ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಮೆರಿಕದಲ್ಲಿ ಈಗಾಗಲೇ ಸಂಭ್ರಮ ಮನೆ ಮಾಡಿದೆ. ನೂತನ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್ ಅವರು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಹಲವು ಹೊಸ ಆದೇಶಗಳನ್ನು ಹೊರಡಿಸುವುದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇದರ ನಡುವೆ ಟ್ರಂಪ್ ಅವರಿಗೆ ಹತ್ತಿರವಾಗುವುದಕ್ಕೆ ವಿಶ್ವದ ಹಲವು ರಾಷ್ಟ್ರಗಳ ನಾಯಕರು ಸರ್ಕಸ್‌ ಮಾಡುತ್ತಿದ್ದಾರೆ. ಇದರ ನಡುವೆ ಉಕ್ರೇನ್‌ನ ಅಧ್ಯಕ್ಷರಾದ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಅಮೆರಿಕದ ನೂತನ ಅಧ್ಯಕ್ಷರಿಗೆ ಬೆಣ್ಣೆ ಮಾತು ಶುರು ಮಾಡಿಕೊಂಡಿದ್ದಾರೆ. ಹೌದು ಈ ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಜೋ ಬೈಡನ್‌ ಅವರು ಉಕ್ರೇನ್‌ ಪರವಾಗಿ ಇದ್ದರು. ಅಲ್ಲದೆ ಉಕ್ರೇನ್‌ - ರಷ್ಯಾದ ವಿರುದ್ಧ ಯುದ್ಧ ಮಾಡುವುದಕ್ಕೆ ಬೇಕಾದ ಶಸ್ತ್ರಾಸ್ತಗಳ ನೆರವು ಅಮೆರಿಕದಿಂದ ನೀಡಲಾಗಿತ್ತು. ಇದೀಗ ಬದಲಾದ ಸನ್ನಿವೇಶದಲ್ಲಿ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರೊಂದಿಗೂ ಒಳ್ಳೆಯ ಸಂಬಂಧ ಬೆಳೆಸಿಕೊಳ್ಳುವುದಕ್ಕೆ ಉಕ್ರೇನ್‌ ಸರ್ಕಸ್‌ ಶುರು ಮಾಡಿಕೊಂಡಿದೆ.

ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಮರು ಆಯ್ಕೆಯಾದ ಮೇಲೆ ಹಲವು ವಿಶ್ವದ ನಾಯಕರು ಟ್ರಂಪ್‌ ಅವರಿಗೆ ಹತ್ತಿರುವಾಗುವ ಸರ್ಕಸ್‌ ಮಾಡುತ್ತಿದ್ದಾರೆ. ವಿಶ್ವದ ದೊಡ್ಡಣ್ಣನಾಗಿರುವ ಅಮೆರಿಕ ವಿಶ್ವದ ಹಲವು ರಾಷ್ಟ್ರಗಳಿಗೆ ಒಂದಿಲ್ಲೊಂದು ಕಾರಣಕ್ಕೆ ತುಂಬಾನೇ ಇಂಪಾರ್ಟೆಂಟ್‌ ಅದರಲ್ಲೂ ಸಂಕಷ್ಟದಲ್ಲಿ ಇರುವ ಉಕ್ರೇನ್‌ಗೆ ಅಮೆರಿಕದ ನೆರವು ಹಾಗೂ ಬೆಂಬಲ ಅನಿವಾರ್ಯ ಅಂತನೇ ಹೇಳಬಹುದು.

Ukrainian President Volodymyr Zelensky Praised to US President Donald Trump War Calculations

ಇದೀಗ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ವಿಶ್ವದ ಶಾಂತಿ ಸ್ಥಾಪನೆಯಲ್ಲಿ ಮತ್ತು ರಷ್ಯಾದ ಅಧ್ಯಕ್ಷ ಪುಟಿನ್ ಅವರ ಆಕ್ರಮಣಶೀಲಕ್ಕೆ ಅಂತ್ಯವಾಡುವಲ್ಲಿ ಸಮರ್ಥರಾಗಿದ್ದಾರೆ. ಟ್ರಂಪ್ ಅವರು ರಷ್ಯಾದ ಮೊಂಡಾಟವನ್ನು ಕೊನೆಗಳಿಸಲಿದ್ದಾರೆ ಎನ್ನುವುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ ಅಂತಲೂ ಅವರು ಹೇಳಿದ್ದಾರೆ. ಇದು ಭಾರೀ ಅಚ್ಚರಿಗೆ ಕಾರಣವಾಗಿದೆ. ಈಚೆಗೆ ಅವರು ಅಮೆರಿಕದಲ್ಲಿ ಕಮಲಾ ಹ್ಯಾರಿಸ್‌ಗಿಂತ ಹೆಚ್ಚು ಬಲಿಷ್ಠರಾದ ನಾಯಕರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದಿದ್ದರು.

ಬುದ್ಧಿ ಹಾಗೂ ಶಕ್ತಿಯಿಂದಲೂ ಟ್ರಂಪ್‌ ಸಮರ್ಥರಿದ್ದಾರೆ ಅಂತ ಮೆಚ್ಚುಗೆ ಮಾತನಾಡಿದ್ದರು. ಇನ್ನು ಟ್ರಂಪ್‌ ಅವರನ್ನು ಹೊಗಳುವುದರಲ್ಲಿ ಹಲವರು ಮುಂಚೂಣಿಯಲ್ಲಿ ಇದ್ದಾರೆ. ಆದರೆ ಅಮೆರಿಕದ ನೂತನ ಅಧ್ಯಕ್ಷ ಟ್ರಂಪ್‌ ಅವರು ಇದಕ್ಕೆಲ್ಲ ಸೊಪ್ಪು ಹಾಕುವುದು ತೀರ ಕಡಿಮೆ ಅಂತಲೇ ಹೇಳಲಾಗುತ್ತಿದೆ.

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರಿಗೆ ಆಪ್ತರಾಗುವುದಕ್ಕೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಪ್ರಯತ್ನಿಸುತ್ತಿರುವುದರಲ್ಲಿ ಎರಡು ವಿಷಯಗಳಿವೆ. ಮೊದಲನೆಯದಾಗಿ ಉಕ್ರೇನ್‌ಗೆ ಅಮೆರಿಕದ ಬೆಂಬಲ ಅತ್ಯವಶ್ಯವಾಗಿದೆ. ಇನ್ನೊಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಅವರೊಂದಿಗೆ ಅಮೆರಿಕದ ನೂತನ ಅಧ್ಯಕ್ಷ ಕ್ಲೋಸ್‌ ಆಗಿದ್ದಾರೆ ಎನ್ನುವ ಆತಂಕ ಝೆಲೆನ್‌ಸ್ಕಿ ಅವರಲ್ಲಿದೆ. ಇನ್ನೂಂದು ಕಾರಣವೆಂದರೆ ಜೋ ಬೈಡನ್‌ಗಿಂತ ಟ್ರಂಪ್‌ ಆಡಳಿತ ಭಿನ್ನವಾಗಿರಲಿದೆ ಎನ್ನುವುದು. ಬೇರೆ ದೇಶಗಳ ಯುದ್ಧದ ವಿಚಾರದಲ್ಲಿ ಟ್ರಂಪ್ ಮೂಗು ತೂರಿಸುವುದಿಲ್ಲ. ನಮ್ಮ ದೇಶದ ಸಂಪತ್ತನ್ನು ಹೊರಗಿನ ದೇಶದವರಿಗಾಗಿ ಯಾಕೆ ಖರ್ಚು ಮಾಡಬೇಕು ಎನ್ನುವುದು ಇವರ ಕಾನ್ಸೆಪ್ಟ್‌.

Ukrainian President Volodymyr Zelensky Praised to US President Donald Trump War Calculations

ಇದನ್ನು ಈ ಹಿಂದೆಯೂ ಟ್ರಂಪ್‌ ಅವರು ಹೇಳಿದ್ದಾರೆ. ಹೀಗಾಗಿ ಉಕ್ರೇನ್‌ ಅಮೆರಿಕದ ನೂತನ ಅಧ್ಯಕ್ಷರಿಗೆ ಬೆಣ್ಣೆ ಸವರುವುದಕ್ಕೆ ಶುರು ಮಾಡಿಕೊಂಡಿದೆ ಅಂತ ಹೇಳಲಾಗ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+