ಹೋದ ಜಾಗ ಮತ್ತೆ ಬಂತು.. ಗ್ಯಾಸ್ ನಿಕ್ಷೇಪಗಳು ವಾಪಸ್!

ಕಪ್ಪು ಸಮುದ್ರ ಭೂಮಿ ಮೇಲೆ ಇರುವ ವಿಸ್ಮಯಗಳ ಪೈಕಿ ಒಂದು. ಅದರಲ್ಲೂ ಹಲವು ದೇಶಗಳು ಇದೇ ಕಪ್ಪು ಸಮುದ್ರ ನಂಬಿ ಜೀವನ ನಡೆಸುತ್ತಿವೆ. ಆದರೆ ರಷ್ಯಾ & ಉಕ್ರೇನ್‌ನ ನಡುವೆ ಯುದ್ಧ ಶುರುವಾದ ಬಳಿಕ ಕಪ್ಪು ಸಮುದ್ರ ಸ್ಮಶಾನವಾಗಿದೆ. ಒಂದು ಕಡೆ ರಷ್ಯಾ ಪಡೆಗಳು ದಾಳಿ ನಡೆಸಿ ಉಕ್ರೇನ್ ದೋಣಿಗಳನ್ನ ಮುಳುಗಿಸುತ್ತಿದ್ದರೆ, ಇನ್ನೊಂದು ಕಡೆ ಈ ಜಾಗ ವಾಪಸ್ ಪಡೆಯಲು ಉಕ್ರೇನ್ ಪರದಾಡುತ್ತಿತ್ತು. ಈಗ ಉಕ್ರೇನ್‌ಗೆ ಸಿಹಿಸುದ್ದಿ ಸಿಕ್ಕಿದೆ.

ಉಕ್ರೇನ್ ಸೇನೆ ತಿಳಿಸಿದಂತೆ, ರಷ್ಯಾ ಹಿಡಿತಕ್ಕೆ ಸಿಲುಕಿದ್ದ 4 ಗ್ಯಾಸ್ ಡ್ರಿಲ್ಲಿಂಗ್ ಘಟಕಗಳನ್ನು ಮರಳಿ ಉಕ್ರೇನ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಲಾಗಿದೆ. ಉಕ್ರೇನ್ ಸೇನೆ ವಿಶೇಷ ಘಟಕದ ಯೋಧರು ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದ್ದು, ಮತ್ತೊಂದು ಪ್ರಮುಖ ಸಂಗತಿ ಏನೆಂದರೆ ಈಗ ವಶಕ್ಕೆ ಪಡೆದಿರುವ ಗ್ಯಾಸ್ ಡ್ರಿಲ್ಲಿಂಗ್ ಘಟಕಗಳು ಕ್ರಿಮಿಯಾ ಬಳಿ ಇವೆ. ಕ್ರಿಮಿಯಾ ಕಪ್ಪು ಸಮುದ್ರ ಪ್ರದೇಶದ ಬಹುಮುಖ್ಯ ಜಲ ಪ್ರದೇಶ. ಹೀಗಾಗಿ ರಷ್ಯಾ ಸೇನೆಗೆ ದೊಡ್ಡ ಹಿನ್ನಡೆ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ರಷ್ಯಾ ಈ ಕುರಿತು ಹೇಳಿಕೆ ನೀಡಿಲ್ಲ.

ukraine-forces-retaken-the-grip

ಸಂಕಷ್ಟಕ್ಕೆ ಸಿಲುಕಿದ ರಷ್ಯಾ ಸೇನೆ?

ಇಷ್ಟುದಿನ ಕಪ್ಪು ಸಮುದ್ರದ ಬಳಿ ರಷ್ಯಾ ಸೇನೆ ಅಬ್ಬರ ನಡೆಯುತ್ತಿತ್ತು. ಅದರಲ್ಲೂ ಈಗ ಉಕ್ರೇನ್ ಕಾರ್ಯಾಚರಣೆ ನಡೆಸಿದೆ ಎನ್ನಲಾಗುತ್ತಿರುವ ಪ್ರದೇಶದ ಮೇಲೆ ರಷ್ಯಾ ಸೇನೆ ತನ್ನ ಹಿಡಿತವನ್ನು ಪ್ರಬಲಗೊಳಿಸಿತ್ತು. ಬೇರೆ ದೇಶಗಳು ಇತ್ತ ಸುಳಿಯುವ ಸಾಧ್ಯತೆ ಇಲ್ಲ ಎಂಬ ರೀತಿ ಇತ್ತು. ಆದರೆ ದಿಢೀರ್ ರಷ್ಯಾಗೆ ಶಾಕ್ ಸಿಕ್ಕಿದೆ. ಕ್ರಿಮಿಯಾ ಸಮೀಪವೇ ಇಂತ ಸ್ಥಿತಿ ಉಂಟಾಗಿದೆ. ಹೀಗಾಗಿ ರಷ್ಯಾ ಸೇನೆ ಸಂಕಷ್ಟಕ್ಕೆ ಸಿಲುಕಿದೆಯಾ? ಎಂಬ ಪ್ರಶ್ನೆ ಕೂಡ ಈಗ ಉದ್ಭವಿಸಿದೆ.

ಎಲ್ಲವನ್ನೂ ಕಳೆದುಕೊಂಡ ಉಕ್ರೇನ್

ಕಪ್ಪು ಸಮುದ್ರದ ಮೇಲೆ ರಷ್ಯಾ ಭೀಕರ ಕ್ಷಿಪಣಿ ದಾಳಿ ನಡೆಸುತ್ತಿದೆ. ಅದರಲ್ಲೂ ಉಕ್ರೇನ್‌ ಧಾನ್ಯ ಸಂಗ್ರಹ ಗೋದಾಮು ಮೇಲೆ ರಷ್ಯಾ ಟಾರ್ಗೆಟ್ ಮಾಡಿ ಅಟ್ಯಾಕ್ ಮಾಡಿದ ಆರೋಪವೂ ಇದೆ. ಹೀಗೆ ಕೆಲ ದಿನಗಳ ಅಂತರದಲ್ಲಿ 2,70,00 ಮೆಟ್ರಿಕ್‌ ಟನ್‌ ಆಹಾರ ಧಾನ್ಯ ನಾಶವಾಗಿ ಹೋದ ಆರೋಪ ಕೇಳಿಬಂದಿತ್ತು. ಅಲ್ಲದೆ ಉಕ್ರೇನ್ ಕಪ್ಪು ಸಮುದ್ರದ ಮೂಲಕ ಯಾವ ವ್ಯವಹಾರ ಮಾಡುತ್ತದೆ ಎಂದು ನಿಗಾ ಇಟ್ಟಿದ್ದ ರಷ್ಯಾ, ಸರಕು ಸಾಗಣೆ ಮಾಡುವ ಹಡಗು & ಸಣ್ಣಪುಟ್ಟ ದೋಣಿಗಳ ಮೇಲೂ ದಾಳಿ ಮಾಡಿದ ಆರೋಪ ಕೇಳಿಬಂದಿತ್ತು.

ukraine-forces-retaken-the-grip

ಕಪ್ಪು ಸಮುದ್ರದ ಅಗತ್ಯತೆ ಏನು?

ಯುರೋಪ್ ರಾಷ್ಟ್ರಗಳಿಗೆ ಕಪ್ಪು ಸಮುದ್ರ ಜೀವ. ಇದೇ ಜಲಮಾರ್ಗದ ಮೂಲಕವೇ ಉಕ್ರೇನ್ ವ್ಯವಹಾರ ನಡೆಯುತ್ತಿತ್ತು. ಹೀಗಿದ್ದಾಗ ರಷ್ಯಾ ಜಿದ್ದಿಗೆ ಬಿದ್ದಿದ್ದು, ಕಳೆದ ತಿಂಗಳಷ್ಟೇ ಇಲ್ಲಿ ಉಕ್ರೇನ್ ನೌಕೆಯನ್ನು ಉಡಾಯಿಸಿತ್ತು. 2014ರ ಬಳಿಕ ಉಕ್ರೇನ್‌ಗೆ ಕಪ್ಪು ಸಮುದ್ರದ ಮೇಲಿನ ಹಿಡತ ಭಾಗಶಃ ಕೈತಪ್ಪಿದೆ. 2022ರಲ್ಲಿ ರಷ್ಯಾ ಯುದ್ಧ ಘೋಷಣೆ ಮಾಡಿದ ಬಳಿಕ ದಿನದಿನಕ್ಕೆ ಉಕ್ರೇನ್ ನರಳುತ್ತಿದೆ. ಅಗತ್ಯ ಇರುವ ದಿನಬಳಕೆ ವಸ್ತು ತರಿಸಿಕೊಳ್ಳುವುದಕ್ಕೂ ಪರದಾಡುತ್ತಿದೆ ಉಕ್ರೇನ್. ಹೀಗಿದ್ದಾಗ ಉಕ್ರೇನ್ ಪಡೆಗಳು ಪುಟಿದೇಳುವ ಮುನ್ಸೂಚನೆ ಸಿಕ್ಕಿದೆ.

ರಷ್ಯಾಗೆ ಸರ್ವಾಧಿಕಾರಿ ಕಿಮ್ ಭೇಟಿ

ಉಕ್ರೇನ್ ಯುದ್ಧ ಆರಂಭವಾದ ನಂತರ ರಷ್ಯಾ ಪರಿಸ್ಥಿತಿ ಕೂಡ ಥೇಟ್ ಉತ್ತರ ಕೊರಿಯಾ ರೀತಿಯೇ ಆಗಿದೆ. ರಷ್ಯಾಗೆ ಈಗಿನ ಸ್ಥಿತಿಯಲ್ಲಿ ಜಗತ್ತಿನ ಕೆಲವೇ ಕೆಲವು ದೇಶಗಳು ಬೆಂಬಲ ನೀಡುತ್ತಿವೆ. ಚೀನಾ ಮತ್ತು ಉತ್ತರ ಕೊರಿಯಾ ರಷ್ಯಾಗೆ ಶಸ್ತ್ರಾಸ್ತ್ರವನ್ನ ರಫ್ತು ಮಾಡುತ್ತಿವೆ ಎಂಬ ಆರೋಪ ಇದೆ. ಇದೇ ಹೊತ್ತಲ್ಲಿ ವೆಪನ್ಸ್ ಡೀಲ್ ಮಾಡೋಕೆ ಕಿಮ್ ಜಾಂಗ್ ಉನ್ ರಷ್ಯಾಗೆ ಪ್ರಯಾಣ ಬೆಳೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಹೀಗೆ ಕಿಮ್ & ಪುಟಿನ್ ನಡುವೆ ಶಸ್ತ್ರಾಸ್ತ್ರ ರಫ್ತು ಕುರಿತು ಮಾತುಕತೆ ನಡೆಯುವ ಸಂದರ್ಭದಲ್ಲೇ ಉಕ್ರೇನ್ ಆಘಾತ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+