ಕಾಬೂಲ್‌ನಲ್ಲಿರುವ ತನ್ನ ರಾಯಭಾರ ಕಚೇರಿ ಸ್ಥಗಿತಗೊಳಿಸಿದ ಅಮೆರಿಕ
ಕಾಬೂಲ್, ಆಗಸ್ಟ್ 31: ಅಫ್ಘಾನಿಸ್ತಾನದಿಂದ ಅಮೆರಿಕವು ತನ್ನ ಸೈನಿಕರು ಹಾಗೂ ಸಿಬ್ಬಂದಿಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡಿದೆ.
ಅಷ್ಟೇ ಅಲ್ಲದೆ ಕಾಬೂಲ್‌ನಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಕೂಡ ಸ್ಥಗಿತಗೊಳಿಸಿದೆ.
"ರಾಯಭಾರ ಕಚೇರಿಯು ಸ್ಮಾರ್ಟ್ ಟ್ರಾವೆಲರ್ ದಾಖಲಾತಿ ಕಾರ್ಯಕ್ರಮ STEP, ರಾಯಭಾರ ವೆಬ್ ಪುಟ, Travel.State.Gov ಮತ್ತು Facebook ಮತ್ತು Twitter ಮೂಲಕ ಮಾಹಿತಿ ನೀಡುವುದನ್ನು ಮುಂದುವರಿಸುತ್ತದೆ. ಅಫ್ಘಾನಿಸ್ತಾನದ ಹೊರಗೆ ಕಾನ್ಸುಲರ್ ಸೇವೆಗಳು ಲಭ್ಯವಿವೆ ಎಂದು ಹೇಳಿದೆ.
ತಾಲಿಬಾನ್ ನಾಯಕರು ಮಂಗಳವಾರ ಕಾಬೂಲ್ ವಿಮಾನ ನಿಲ್ದಾಣದ ನಿಯಂತ್ರಣವನ್ನು ವಹಿಸಿಕೊಂಡಿದ್ದು, ವಿಮಾನ ನಿಲ್ದಾಣದ ಏಕೈಕ ರನ್ ವೇ ಮೂಲಕ ಸಾಂಕೇತಿಕ ವಾಕ್ ಮೂಲಕ ದೇಶದಿಂದ ಕೊನೆಯ ಅಮೆರಿಕ ವಿಮಾನ ನಿರ್ಗಮಿಸಿತು.

ರಾಯಭಾರ ಕಚೇರಿಯು ತನ್ನ ನಾಗರಿಕರಿಗೆ ಮತ್ತು ಅವರ ಕುಟುಂಬಗಳಿಗೆ ದೋಹಾದಿಂದ ಸಹಾಯ ಮಾಡುವುದನ್ನು ಮುಂದುವರಿಸಲಾಗುವುದು. ಅಮೆರಿಕ ರಾಯಭಾರ ಕಚೇರಿಯು ತನ್ನ ಕಾರ್ಯಾಚರಣೆಗಳನ್ನು ದೋಹಾಕ್ಕೆ ವರ್ಗಾಯಿಸಿದೆ ಎಂದು ತಿಳಿಸಿದೆ.
ಅಫ್ಘಾನಿಸ್ತಾನದಿಂದ ಅಮೆರಿಕ ಸೈನಿಕರು ಮತ್ತು ಸಿಬ್ಬಂದಿಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡ ನಂತರ ತನ್ನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವುದಾಗಿ ಕಾಬೂಲ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮಂಗಳವಾರ ಘೋಷಿಸಿದೆ. ಆದರೆ ರಾಯಭಾರ ಕಚೇರಿಯು ದೋಹಾದಿಂದ ಅಮೆರಿಕದ ನಾಗರಿಕರು ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡುವುದಾಗಿ ಹೇಳಿದೆ.
ಆಗಸ್ಟ್ 31ರಂದು ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ಅಮೆರಿಕ ಸೇನೆ ವಾಪಸ್ ಆಗಲಿದೆ ಎಂದು ಅಧ್ಯಕ್ಷ ಜೋ ಬಿಡೆನ್ಹೇಳಿಕೆ ನೀಡಿದ್ದರು. ಅಮೆರಿಕ ಸೇನಾಪಡೆಯನ್ನು ಹಂತ ಹಂತವಾಗಿ ಅಮೆರಿಕ ವಾಪಸ್ ಕರೆಸಿಕೊಂಡ ಬಳಿಕ ತಾಲಿಬಾನ್ ಉಗ್ರರು ಕೂಡ ಹಂತ ಹಂತವಾಗಿ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ್ದರು.
ಇತ್ತೀಚೆಗಷ್ಟೇ ರಾಜಧಾನಿ ಕಾಬೂಲ್ ಅನ್ನು ತಮ್ಮ ವಶಕ್ಕೆ ತೆಗೆದುಕೊಂಡು ವಿಜಯೋತ್ಸವ ಆಚರಿಸಿದ್ದರು. ಆ.31ರೊಳಗೆ ಅಮೆರಿಕ ಸೇನೆಯನ್ನು ಸಂಪೂರ್ಣವಾಗಿ ವಾಪಸ್ ಪಡೆಯದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದು ತಾಲಿಬಾನ್ ನಾಯಕರು ದೊಡ್ಡಣ್ಣನಿಗೆ ಎಚ್ಚರಿಕೆ ನೀಡಿದ್ದರು.
ಹೇಳಿದಂತೆ ನಡೆದುಕೊಂಡಿರುವ ಜೋ ಬೈಡನ್ ಸಂಪೂರ್ಣವಾಗಿ ತಮ್ಮ ಸೇನೆಯನ್ನು ವಾಪಸ್ ದೇಶಕ್ಕೆ ಕರೆಸಿಕೊಂಡಿದ್ದಾರೆ. ಮಂಗಳವಾರ ಅಫ್ಘಾನ್ನಿಂದ ಹೊರಬಿದ್ದ ಅಮೆರಿಕದ ಕೊನೆಯ ಯೋಧನ ಫೋಟೋವನ್ನು ಅಮೆರಿಕದ ರಕ್ಷಣಾ ಇಲಾಖೆ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
20 ವರ್ಷಗಳ ಸಂಘರ್ಷ ಅಂತ್ಯಗೊಳಿಸಿ ಅಫ್ಘಾನಿಸ್ತಾನದಿಂದ ಹೊರಡುವಾಗ ಅಮೆರಿಕ ಸೈನಿಕರು 73 ವಿಮಾನಗಳು ಸೇರಿದಂತೆ ಹಲವು ಸೇನಾ ವಾಹನಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ.
70 ಸೇನಾ ಲಾರಿಗಳು, 27 ಹಮ್ಮರ್ ಜೀಪುಗಳನ್ನೂ ಸೇನೆ ತಾಲಿಬಾನ್ ಕೈಗೆ ಸಿಗದಂತೆ, ಸಿಕ್ಕರೂ ಬಳಸಲು ಸಾಧ್ಯವಾಗದಂತೆ ಅಮೆರಿಕನ್ ಸೈನಿಕರು ಹಾಳುಗೆಡವಿದ್ದಾರೆ. ಒಂದೊಂದು ವಾಹನದ ಬೆಲೆಯೂ ಕೋಟ್ಯಂತರ ರೂ. ಗಳಷ್ಟಿದೆ.
ಅಮೆರಿಕದ ಕಡೆಯ ಸೈನಿಕ ಆಫ್ಘನ್ ನೆಲದಲ್ಲಿ ಇರುವವರೆಗೂ ನಮ್ಮ ಶಸ್ತ್ರಾಗಾರವನ್ನು ಉಳಿಸಿಕೊಳ್ಳಲು ತೀರ್ಮಾನಿಸಿದ್ದೆವು. ತಾಲಿಬಾನ್ ಆಡಳಿತದಲ್ಲಿ ಪರಿಸ್ಥಿತಿ ಯಾವ ಕ್ಷಣದಲ್ಲಿ ಅಪಾಯಕಾರಿಯಾಗುವುದೋ ಎಂದು ಹೇಳಲು ಆಗದೆ ಇರುವುದರಿಂದ ತಮ್ಮ ಶಸ್ತ್ರಾಗಾರವನ್ನು ಉಳಿಸಿಕೊಂಡೆವು ಎಂದು ಅಮೆರಿಕ ರಕ್ಷಣಾ ಇಲಾಖೆ ತಿಳಿಸಿದೆ.
ಅಮೆರಿಕ ಸೈನಿಕರು ನಿಷ್ಕ್ರಿಯಗೊಳಿಸಿರುವ ಸೇನಾ ಸಾಮಗ್ರಿಯಲ್ಲಿ 73 ಯುದ್ಧವಿಮಾನಗಳೂ ಸೇರಿವೆ. ನಿಷ್ಕ್ರಿಯಗೊಳಿಸಲಾಗಿರುವ ಯುದ್ಧವಿಮಾನಗಳನ್ನು ಇನ್ನುಮುಂದೆ ಯಾರೂ ಬಳಸಲಾಗುವುದಿಲ್ಲ ಎಂದು ಅಮೆರಿಕ ಖಚಿತ ಪಡಿಸಿದೆ.












Click it and Unblock the Notifications