ಸೌದಿ ವೈಮಾನಿಕ ದಾಳಿ: ಇಪ್ಪತ್ತು ಭಾರತೀಯರ ಸಾವು

ಸಾನಾ, ಸೆ 8 (ರಾಯಟರ್ಸ್): ಸೌದಿ ಅರೇಬಿಯಾ ಜಂಟಿಯಾಗಿ ನಡೆಸಿದ ವೈಮಾನಿಕ ದಾಳಿಯಲ್ಲಿ ಇಪ್ಪತ್ತು ಭಾರತೀಯರು ಮೃತ ಪಟ್ಟಿದ್ದಾರೆಂದು ರಾಯಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಯೆಮನ್ ದೇಶದ ಅಲ್ ಕೋಕಾ ನಗರದ ಹೋಡೇ ಬಂದರಿನಲ್ಲಿ ( Hodeidah port) ತೈಲ ಕಳ್ಳಸಾಗಾಣಿಕೆದಾರರ ಮೇಲೆ ನಡೆದ ದಾಳಿಯಲ್ಲಿ ಇಪ್ಪತ್ತು ಭಾರತೀಯರು ಸಾವನ್ನಪ್ಪಿದ್ದಾರೆಂದು, ಸ್ಥಳೀಯ ನಿವಾಸಿಗಳು ಮತ್ತು ಮೀನುಗಾರರ ಹೇಳಿಕೆಯನ್ನು ಉಲ್ಲೇಖಿಸಿ ರಾಯಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

20 Indians reportedly killed by Saudi-led air strikes on Yemen's Hodeidah port

ಹೌಥೀಯಲ್ಲಿ ಶುಕ್ರವಾರ (ಸೆ 4) ನಡೆದ ಕ್ಷಿಪಣಿ ದಾಳಿಯಲ್ಲಿ ಅರವತ್ತಕ್ಕೂ ಹೆಚ್ಚು ಸೌದೀ, ಬಹ್ರೇನ್ ಮತ್ತು ಗಲ್ಫಿನ ಸೈನಿಕರು ಮೃತ ಪಟ್ಟಿದ್ದರು. ಈ ಘಟನೆಯ ನಂತರ ಸೌದೀ ಅರೇಬಿಯಾ ತನ್ನ ಕಾರ್ಯಾಚರಣೆಯನ್ನು ತೀವ್ರ ಗೊಳಿಸಿತ್ತು.

ಅಲ್ ಕೋಕಾ ನಗರದ ಬಂದರಿನಲ್ಲಿ ಎರಡು ಬೋಟಿನ ಮೇಲೆ ಸೌದಿ ವೈಮಾನಿಕ ಪಡೆಗಳು ದಾಳಿ ನಡೆಸಿದ್ದು, ಅದರಲ್ಲಿದ್ದ ಎಲ್ಲಾ ಇಪ್ಪತ್ತು ಭಾರತೀಯರು ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. (ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+