ಟ್ಯಾಕ್ಸ್‌ ವಾರ್ ಜೋರು ಮಾಡಿದ ಟ್ರಂಪ್ ಭಾರತಕ್ಕೂ ಬಿಗ್‌ ಶಾಕ್‌!

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೀಗ ವಿಶ್ವದ ವಿವಿಧ ರಾಷ್ಟ್ರಗಳಿಗೆ ಮತ್ತೊಮ್ಮೆ ಶಾಕ್‌ ಕೊಟ್ಟಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಹೊಸ ತೆರಿಗೆ ನೀತಿಯನ್ನು ಜಾರಿ ಮಾಡುತ್ತಿದ್ದಾರೆ. ಆದರೆ ಈಗಾಗಲೇ ವಿವಿಧ ರಾಷ್ಟ್ರಗಳ ಮೇಲೆ ಭಾರೀ ತೆರಿಗೆಯನ್ನು ಹಾಕಿದ್ದು. ಇದೀಗ ಹೊಸದಾಗಿ ಭಾರತಕ್ಕೂ ಅವರು ಶಾಕ್‌ ಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಭೇಟಿಯ ಸಂದರ್ಭದಲ್ಲಿಯೇ ಈ ಬೆಳವಣಿಗೆ ನಡೆದಿದೆ. ಡೊನಾಲ್ಡ್‌ ಟ್ರಂಪ್ ಅವರು ಮೆಕ್ಸಿಕೋ, ಕೆನಡಾ ಹಾಗೂ ಚೀನಾಗೆ ತೆರಿಗೆ ಶಾಕ್‌ ಕೊಟ್ಟಿದ್ದಾರೆ. ಇದೀಗ ಭಾರತಕ್ಕೂ ಶಾಕ್‌ ಕೊಡುವುದಕ್ಕೆ ಟ್ರಂಪ್ ಮುಂದಾಗಿದ್ದಾರೆ.

ಡೊನಾಲ್ಡ್‌ ಟ್ರಂಪ್ ಅವರ ಕಠಿಣ ಆರ್ಥಿಕ ನೀತಿಗಳು ವಿಶ್ವದಲ್ಲಿ ಭಾರೀ ಆರ್ಥಿಕ ನಷ್ಟ ಹಾಗೂ ಆರ್ಥಿಕ ಸಂಕಷ್ಟವನ್ನು ತಂದೊಡ್ಡುವ ಆತಂಕಕ್ಕೆ ಕಾರಣವಾಗಿದೆ. ಭಾರತಕ್ಕೂ ಈಗ ಅಮೆರಿಕದ ದೊಡ್ಡಣ್ಣ ಟ್ರಂಪ್‌ ಅವರು ಹೊಸ ತಲೆನೋವನ್ನು ತಂದೊಡ್ಡಿದ್ದಾರೆ. ಉಕ್ಕು ಮತ್ತು ಅಲ್ಯೂಮಿನಿಯಂನ ಮೇಲೆ ಭಾರೀ ಹೆಚ್ಚಳ ಮಾಡಲಾಗಿದ್ದು. ಭಾರತಕ್ಕೆ ಇದು ಸವಾಲಾಗಿ ಪರಿಣಮಿಸುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ. ಇಷ್ಟಕ್ಕೂ ಡೊನಾಲ್ಡ್‌ ಟ್ರಂಪ್ ಮಾಡಿರುವ ಹೊಸ ಆದೇಶವೇನು. ಇದರಿಂದ ಯಾವ ರೀತಿಯ ಪರಿಣಾಮ ಬೀರಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

Trumps Intensification of Tax War is a Big Shock For India Too

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಒಂದಲ್ಲ ಒಂದು ಶಾಕ್‌ ಕೊಡುತ್ತಲ್ಲೇ ಇದ್ದಾರೆ. ಭಾರತದ ತೆರಿಗೆ ನೀತಿಯ ಬಗ್ಗೆ ಅವರು ಈಗಾಗಲೇ ಗುಡುಗಿದ್ದಾರೆ. ಇದೀಗ ಅವರು ಮತ್ತೊಂದು ತೆರಿಗೆ ಹೆಚ್ಚಳದ ಆದೇಶಕ್ಕೆ ಮುಂದಾಗಿದ್ದಾರೆ. ಅಮೆರಿಕ ವ್ಯಾಪಾರ ನೀತಿಯನ್ನು ಪರಿಷ್ಕರಣೆ ಮಾಡುತ್ತಿದೆ. ಇದರ ಭಾಗವಾಗಿ ಇದೀಗ ಉಕ್ಕು ಹಾಗೂ ಅಲ್ಯೂಮಿನಿಯಂ ಆಮದಿನ ಮೇಲೆ ಬರೋಬ್ಬರಿ ಶೇ25 ರಷ್ಟು ತೆರಿಗೆ ವಿಧಿಸಿದ ಸೋಮವಾರ ಆದೇಶ ಮಾಡಿದ್ದಾರೆ. ಇದರಿಂದ ಭಾರತವೂ ಸೇರಿದಂತೆ ವಿಶ್ವದಾದ್ಯಂತ ಉಕ್ಕು ಮತ್ತು ಅಲ್ಯೂಮಿನಿಯಂ ಇಂಡಸ್ಟ್ರೀಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾದ ಮೇಲೆ ಡೊನಾಲ್ಡ್‌ ಟ್ರಂಪ್ ಅವರು ಅಮೆರಿಕ ಫಸ್ಟ್‌ ಎನ್ನುವ ಘೋಷಾವಾಕ್ಯದೊಂದಿಗೆ ವಿವಿಧ ಸುಧಾರಣೆ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಇದರ ಭಾಗವಾಗಿ ಅವರು ವಲಸೆ ನೀತಿ ಹಾಗೂ ತೆರಿಗೆ ನೀತಿಯನ್ನು ಮೊದಲ ಹಂತದಲ್ಲಿ ಜಾರಿ ಮಾಡುತ್ತಿದ್ದಾರೆ. ಅಮೆರಿಕದ ಮೇಲೆ ಅಥವಾ ಅಮೆರಿಕ ವಸ್ತುಗಳ ಮೇಲೆ ಭಾರತವೂ ಸೇರಿದಂತೆ ವಿವಿಧ ದೇಶಗಳು ಹೆಚ್ಚು ತೆರಿಗೆಯನ್ನು ವಿಧಿಸುತ್ತಿವೆ. ನಮ್ಮ ಮೇಲೆ ತೆರಿಗೆ ವಿಧಿಸಿದರೆ ನಾವೂ ಸಹ ತೆರಿಗೆ ವಿಧಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಎಲ್ಲಾ ಉಕ್ಕು ಹಾಗೂ ಅಲ್ಯೂಮಿನಿಯಂನ ಮೇಲೆ ಈಗಾಗಲೇ ಇರುವ ತೆರಿಗೆಗೆ ಸಮಾನವಾಗಿ ಶೇ 25ರಷ್ಟು ಆಮದು ತೆರಿಗೆಯನ್ನು ವಿಧಿಸುವುದಾಗಿ ಅವರು ಹೇಳಿದ್ದಾರೆ. ಯಾವ ದೇಶಗಳು ಯಾವ ರೀತಿ ತೆರಿಗೆ ವಿಧಿಸುತ್ತದೆಯೋ ಅದಕ್ಕೆ ಅನುಗುಣವಾಗಿ ನಾವು ಸಹ ತೆರಿಗೆಯನ್ನು ವಿಧಿಸಲಿದ್ದೇವೆ ಎಂದು ಡೊನಾಲ್ಡ್‌ ಟ್ರಂಪ್ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+