ಭಾರತದ ವಿರುದ್ಧ ಮತ್ತೆ ಮಾತನಾಡಿದ ಟ್ರಂಪ್, ವಿಶ್ವಸಂಸ್ಥೆಯಲ್ಲಿ ಹೇಳಿದ್ದೇನು? Donald Trump

ಭಾರತ & ಅಮೆರಿಕ ನಡುವಿನ ಸಂಬಂಧ ಹಾಳು ಮಾಡಲು ಪದೇ ಪದೇ ಡೊನಾಲ್ಡ್ ಟ್ರಂಪ್ ಅವರು ಪ್ರಯತ್ನ ಮಾಡುತ್ತಿದ್ದಾರೆ, ಅನ್ನೋ ಆರೋಪವನ್ನ ಸ್ವತಃ ಅಮೆರಿಕದ ರಾಜಕೀಯ ನಾಯಕರೇ ಈಗ ಮಾಡುತ್ತಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರು ಕೂಡ ಪದೇ ಪದೇ ಭಾರತದ ವಿರುದ್ಧ ಹೇಳಿಕೆ ನೀಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಟ್ಯಾಕ್ಸ್ ಕಿರಿಕ್ & ವೀಸಾ ಕಿರಿಕ್ ನಡೆಸಿದ್ದ ಡೊನಾಲ್ಡ್ ಟ್ರಂಪ್ ಇದೀಗ ನೇರವಾಗಿ ವಿಶ್ವಸಂಸ್ಥೆಯಲ್ಲೇ ನಿಂತು, ಭಾರತದ ವಿರುದ್ಧ ಹೇಳಿಕೆ ನೀಡಿದ್ದಾರೆ. ಇದು ಭಾರಿ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ...

ಭಾರತ & ಭಾರತೀಯರು ಇರದೇ ಹೋಗಿದ್ದರೆ ಬಹುಶಃ ಟ್ರಂಪ್ ಅವರು ಇಂದು ಅಮೆರಿಕದ ಅಧ್ಯಕ್ಷ ಪಟ್ಟಕ್ಕೆ ಆಯ್ಕೆ ಅಗುತ್ತಲೇ ಇರಲಿಲ್ಲ ಎನ್ನಬಹುದು. ಯಾಕಂದ್ರೆ ಇದೇ ನಮ್ಮ ಭಾರತೀಯರ ವೋಟ್ ಪಡೆದು ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಆದರೂ ಮತ್ತೆ ಮತ್ತೆ ನಮ್ಮ ಭಾರತೀಯರನ್ನೇ ಟಾರ್ಗೆಟ್ ಮಾಡುತ್ತಿರುವ ಗಂಭೀರ ಆರೋಪ ಇದೀಗ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಕೇಳಿಬಂದಿದೆ. ಅದರಲ್ಲೂ ಟ್ರಂಪ್ ಈಗ ವಿಶ್ವಸಂಸ್ಥೆ ನೆಲದಲ್ಲಿ ನಿಂತು ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಅಂತಾ ಆಕ್ರೋಶವೂ ಮೊಳಗಿದೆ...

Trump Criticises Russian Oil Purchase in UN Speech

ಭಾರತದ ಬಗ್ಗೆ ಡೊನಾಲ್ಡ್ ಟ್ರಂಪ್..

ಅಂದಹಾಗೆ ವಿಶ್ವಸಂಸ್ಥೆಯಲ್ಲಿ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ರಷ್ಯಾ ಮೂಲಕ ತೈಲ ಸೇರಿದಂತೆ ಶಸ್ತ್ರಾಸ್ತ್ರ ಖರೀದಿ ಮಾಡುವ ದೇಶಗಳ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಈ ಮೂಲಕ ಮತ್ತೆ ಭಾರತದ ವಿರುದ್ಧ ಪರೋಕ್ಷವಾಗಿ ಡೊನಾಲ್ಡ್ ಟ್ರಂಪ್ ಮಾತನಾಡಿದ್ದಾರೆ ಅಂತಾ ಚರ್ಚೆ ಕೂಡ ಶುರುವಾಗಿದೆ. ಈಗಾಗಲೇ ಭಾರತ ಕೂಡ ನೇರವಾಗಿ ಅಮೆರಿಕಗೆ ಉತ್ತರ ನೀಡಿದ್ದು, ತಾನು ರಷ್ಯಾ ಜೊತೆಗಿನ ಸಂಬಂಧ ಮುಂದುವರಿಸುವ ಬಗ್ಗೆ ದಿಟ್ಟ ಹೆಜ್ಜೆ ಇಟ್ಟಂತಾಗಿದೆ.

ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಹೇರಿಕೆ

ಒಂದು ಕಡೆ ಟ್ರಂಪ್ ಅವರು ಭಾರತದ ಜೊತೆಗೆ ಕಿತ್ತಾಡುತ್ತಾ ಹೆಚ್ಚಿನ ತೆರಿಗೆ ಹಾಕಿ ಸಂಚಲನ ಸೃಷ್ಟಿ ಮಾಡಿದ್ದಾರೆ. ಒಟ್ನಲ್ಲಿ ಅಮೆರಿಕದ ಜನತೆಯ ಹಣೆಬರಹ ಸರಿ ಇಲ್ವಾ? ಅನ್ನೋ ರೀತಿ ಇದೀಗ ಚರ್ಚೆ ಶುರುವಾಗಿದೆ. ಯಾಕಂದ್ರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೀಗೆ ಸುಖಾಸುಮ್ಮನೆ ತೆರಿಗೆ ಹೆಚ್ಚಿಸುವ ಮೂಲಕ ತಮ್ಮದೇ ದೇಶದ ಜನರ ಮೇಲೆ ಭಾರತ ಹಾಕುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಹೀಗಾಗಿ ಡೊನಾಲ್ಡ್ ಟ್ರಂಪ್ ತಮ್ಮ ನಿರ್ಧಾರಗಳನ್ನು ಸರಿ ಮಾಡಿಕೊಳ್ಳಬೇಕು ಎಂಬ ಆಗ್ರಹ ಕೂಡ ಮಾಡುತ್ತಿದ್ದಾರೆ ಅಲ್ಲಿನ ಪ್ರಜೆಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+