ಮತ್ತಷ್ಟು ದಾಳಿ ಐಸಿಸ್ ನಿಂದ ಪಾಶ್ಚಿಮಾತ್ಯ ದೇಶಗಳಿಗೆ ಬೆದರಿಕೆ
ಲಂಡನ್, ಜೂನ್ 5: ಲಂಡನ್ ದಾಳಿಯ ಬೆನ್ನಿಗೆ ಉಗ್ರ ಸಂಘಟನೆ ಐಸಿಸ್ ಪಾಶ್ಚಿಮಾತ್ಯ ದೇಶಗಳ ಮೇಲೆ ಮತ್ತಷ್ಟು ದಾಳಿ ನಡೆಸುವ ಬೆದರಿಕೆ ಹಾಕಿದೆ.
ಭಾನುವಾರ ಲಂಡನ್ನಿನ ಮೂರು ಸ್ಥಳಗಳಲ್ಲಿ ಉಗ್ರರ ದಾಳಿ ನಡೆದು 7 ಜನ ಸಾವಿಗೀಡಾಗಿದ್ದರು. ಐಸಿಸ್ ಸಂಘಟನೆ ಈ ದಾಳಿಯನ್ನು ನಮ್ಮ ಸಂಘಟನೆಗೆ ಸೇರಿದ ಉಗ್ರರು ನಡೆಸಿದ್ದಾರೆ ಎಂದು ಹೇಳಿತ್ತು.[ಲಂಡನ್ ದಾಳಿ ಬೆನ್ನಲ್ಲೇ ಇತ್ತ ಜಿಹಾದಿ ಗುಂಪುಗಳು ಸಂಭ್ರಮಾಚರಣೆ]

ಇದೀಗ ಐಸಿಸ್ ಮತ್ತಷ್ಟು ಪ್ರತೀಕಾರದ ದಾಳಿಗಳನ್ನು ನಡೆಸುವುದಾಗಿ ಪಾಶ್ಚಿಮಾತ್ಯ ದೇಶಗಳಿಗೆ ಬೆದರಿಕೆ ಹಾಕಿದೆ. ಉಗ್ರರ ವಿರುದ್ಧ ಸಿರಿಯಾದಲ್ಲಿ ಮತ್ತು ಇರಾಕಿನಲ್ಲಿ ಹೋರಾಟ ಮಾಡುತ್ತಿರುವುದಕ್ಕೆ ಈ ದೇಶಗಳ ವಿರುದ್ಧ ದಾಳಿ ನಡೆಸುವುದಾಗಿ ಐಸಿಸ್ ಹೇಳಿದೆ.[ಲಂಡನ್ನಿನ ಉಗ್ರರ ದಾಳಿಗೂ ಬೆಂಗಳೂರಿಗೂ ನಂಟಿದೆ!]
ಇನ್ನು ಭಾನುವಾರ ಐಸಿಸ್ ಮುಖವಾಣಿ ಅಮಾಕ್ ಮತ್ತು ಹಲವು ಐಸಿಸ್ ಗುಂಪುಗಳು ಲಂಡನ್ ದಾಳಿಯನ್ನು ಸಂಭ್ರಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications