ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್ ದಾಳಿ ಬೆನ್ನಲ್ಲೇ ಇತ್ತ ಜಿಹಾದಿ ಗುಂಪುಗಳು ಸಂಭ್ರಮಾಚರಣೆ

By Sachhidananda Acharya
|
Google Oneindia Kannada News

ಲಂಡನ್, ಜೂನ್ 4: ಬ್ರಿಟನ್ ಮತ್ತೆ ಉಗ್ರರ ದಾಳಿಗೆ ಗುರಿಯಾಗಿದೆ. ಅತ್ತ ಸ್ಕಾಟ್ ಲ್ಯಾಂಡ್ ಪೊಲೀಸರು ಮತ್ತು ತುರ್ತು ಸೇವೆಗಳ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರೆ, ಇತ್ತ ಜಿಹಾದಿ ಗುಂಪುಗಳು ಸಂಭ್ರಮಾಚರಣೆಯಲ್ಲಿ ತೊಡಗಿವೆ.

ಲಂಡನ್ ಬ್ರಿಡ್ಜ್, ಬರೋ ಮಾರ್ಕೆಟ್, ದಿ ವಾಕ್ಸ್ ಹಾಲ್ ಪ್ರದೇಶಗಳು ಉಗ್ರರ ದಾಳಿಗೆ ಗುರಿಯಾಗುತ್ತಿದ್ದಂತೆ ಜಿಹಾದಿಗಳ ಟ್ವಿಟ್ಟರುಗಳಲ್ಲಿ ಸಂಭ್ರಮಾಚರಣೆ ಕಾಣಿಸಿಕೊಂಡಿದೆ. ಲಂಡನ್ ದಾಳಿಯನ್ನು ಗಮನಿಸುತ್ತಿರುವ ಭಾರತದ ಗುಪ್ತಚರ ಇಲಾಖೆ ಅಧಿಕಾರಿಗಳು, ಇದೊಂದು ಐಸಿಸ್ ಮಾದರಿಯ 'ಒಂಟಿ ನರಿ' (ಸಿಂಗಲ್ ವೂಲ್ಫ್) ದಾಳಿ ಎಂದು ಹೇಳಿದ್ದಾರೆ.[ಉಗ್ರರ ದಾಳಿಗೆ ಬೆಚ್ಚಿದ ಲಂಡನ್, ಹೈ ಅಲರ್ಟ್ ಘೋಷಣೆ!]

ISIS handles celebrate as Britain is hit by terror again

ಇನ್ನು ಐಸಿಸ್ ಟೆಲಿಗ್ರಾಂ ಮತ್ತು ಮೆಸೇಜ್ ಗುಂಪುಗಳಲ್ಲಿ ಧನ್ಯವಾದ ಸಂದೇಶಗಳು ಓಡಾಡುತ್ತಿವೆ ಎಂದು ಹೇಳಿದ್ದಾರೆ. ಇದರ ಹೊಣೆಯನ್ನೂ ಐಸಿಸ್ ಉಗ್ರರು ಹೊತ್ತುಕೊಳ್ಳುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.[ಲಂಡನ್ನಿನ ಉಗ್ರರ ದಾಳಿಗೂ ಬೆಂಗಳೂರಿಗೂ ನಂಟಿದೆ!]

ಇನ್ನು ಇತ್ತೀಚೆಗೆ ಐಸಿಸ್ ಪುಸ್ತಕವೊಂದನ್ನು ಬಿಡುಗಡೆ ಮಾಡಿತ್ತು. ಈ ಪುಸ್ತಕದಲ್ಲಿ ದಾಳಿಗೆ ಕಲ್ಲು, ಚೂರಿ, ಕಟ್ಟಡದಿಂದ ದೂಡುವುದು ಮುಂತಾದ ಮಾದರಿಯನ್ನು ಬಳಸುವ ಬಗ್ಗೆ ಹೇಳಲಾಗಿತ್ತು. ಸದ್ಯ ಇದೇ ಮಾದರಿಯ ದಾಳಿಗಳಾಗಿದ್ದನ್ನು ಇಲ್ಲಿ ಗಮನಿಸಬಹುದು.

English summary
One can anticipate ISIS responsibility as Britain was hit by terror again. Several jihadist groups were celebrating on Twitter as Scotland Yard and emergency services responded to three incidents on London Bridge and in nearby Borough Market and Vauxhall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X