ಟೆಕ್ಸಾಸ್ ಚರ್ಚ್ ನಲ್ಲಿ ಶೂಟೌಟ್ : ಕನಿಷ್ಠ 20 ಜನರ ಹತ್ಯೆ

Posted By:
Subscribe to Oneindia Kannada

ಟೆಕ್ಸಾಸ್, ನವೆಂಬರ್ 06 : ಟೆಕ್ಸಾಸ್ ನಲ್ಲಿರುವ ಚರ್ಚೊಂದರಲ್ಲಿ ಡೆವಿನ್ ಪ್ಯಾಟ್ರಿಕ್ ಕೆಲ್ಲಿ (26) ಎಂಬಾತ ಬೇಕಾಬಿಟ್ಟಿ ಶೂಟ್ ಮಾಡಿ 20ರಿಂದ 24 ಜನರನ್ನು ಹತ್ಯೆಗೈದಿದ್ದಾನೆ. 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಭಾನುವಾರದ ಪ್ರಾರ್ಥನೆಯಲ್ಲಿ ಜನರು ನಿರತರಾಗಿದ್ದಾಗ 11.30ರ ಸುಮಾರಿಗೆ ಬ್ಯಾಪ್ಟಿಸ್ಟ್ ಚರ್ಚ್ ಒಳಹೊಕ್ಕ ಡೆವಿನ್ ಸೆಮಿ ಆಟೋಮ್ಯಾಟಿಕ್ ಗನ್ ಬಳಸಿ ಮನಸೋಇಚ್ಛೆ ಗುಂಡು ಹಾರಿಸಿದ್ದಾನೆ. ಸತ್ತವರಲ್ಲಿ 5 ವರ್ಷದ ಮಗುವಿನಂದ ಹಿಡಿದು 72 ವರ್ಷದ ವಯೋವೃದ್ಧರವರೆಗಿದ್ದಾರೆ.

Texas church shooting : Several killed by christian atheist

ಕಪ್ಪು ಬಣ್ಣದ ಬಟ್ಟೆ ಧರಿಸಿದ್ದ ಆತ ಏಕೆ ಈರೀತಿ ಹತ್ಯೆ ಮಾಡಲು ಕಾರಣವೇನೆಂದು ತಿಳಿದುಬಂದಿಲ್ಲ. ಈ ಘಟನೆ ಸ್ಯಾನ್ ಆಂಟೋನಿಯೋದಿಂದ 50 ಕಿ.ಮೀ. ದೂರದಲ್ಲಿರುವ ಹಳ್ಳಿಯೊಂದರಲ್ಲಿ ನಡೆದಿದೆ.

ಈ ಘಟನೆಯಲ್ಲಿ ಡೆವಿನ್ ಕೆಲ್ಲಿ ಕೂಡ ಸತ್ತಿದ್ದಾನೆ. ಆದರೆ, ಆತ ಹೇಗೆ ಸತ್ತ ಎಂದು ಇನ್ನೂ ತಿಳಿದುಬಂದಿಲ್ಲ. ತಾನೇ ಸ್ವತಃ ಶೂಟ್ ಮಾಡಿಕೊಂಡನೋ ಅಥವಾ ಅಲ್ಲಿಯವರೇ ಆತನನ್ನು ಶೂಟ್ ಮಾಡಿ ಹತ್ಯೆಗೈದರೋ ತಿಳಿದುಬರಬೇಕಿದೆ. ಈ ಭೀಕರ ಹತ್ಯಾಕಾಂಡದಲ್ಲಿ ಪಾದ್ರಿಯ 14 ವರ್ಷದ ಮಗಳು ಕೂಡ ಸೇರಿದ್ದಾಳೆ. ಈ ಸಂದರ್ಭದಲ್ಲಿ ಪಾದ್ರಿ ಮತ್ತು ಆತನ ಹೆಂಡತಿ ಊರಿನಲ್ಲಿರಲಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Texas church shooting : Several killed by christian atheist. The killer has been identified as Devin Pattrick Kelly (26). The incident happened in a small rural place 50 km awaay from San Antonio.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ