50 ರಾಷ್ಟ್ರಗಳ ಮಂಡಿಯೂರಿಸಿದ ಡೊನಾಲ್ಡ್‌ ಟ್ರಂಪ್!

Donald Trump Tax Policy: ವಿಶ್ವದಾದ್ಯಂತ ಸಂಚಲನವನ್ನೇ ಸೃಷ್ಟಿ ಮಾಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಟ್ಯಾಕ್ಸ್‌ ವಾರ್ ಇದೀಗ ಅಮೆರಿಕಗೆ ತಿರುಗುಬಾಣವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಆದರೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ವಿವಿಧ ರಾಷ್ಟ್ರಗಳ ಮೇಲೆ ವಿಪರೀತವಾಗಿ ಟ್ಯಾಕ್ಸ್‌ ಹಾಕುತ್ತಿದ್ದು. ಇದೀಗ 50ಕ್ಕೂ ಹೆಚ್ಚು ರಾಷ್ಟ್ರಗಳು ಅಮೆರಿಕದ ಮುಂದೆ ಮಂಡಿಯೂರಿವೆ. ಆದರೆ, ಅಮೆರಿಕ ಶೇ 26% ತೆರಿಗೆ ವಿಧಿಸಿದರೂ ಭಾರತ ಮಾತ್ರ ಮೌನವಾಗಿದೆ. ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿಯ ವರೆಗೆ ರಿಯಾಕ್ಟ್‌ ಮಾಡಿಲ್ಲ. ಆದರೆ, ಅಮೆರಿಕದ ಜೊತೆ ಚರ್ಚೆ ಮಾಡುವುದಕ್ಕೆ 50ಕ್ಕೂ ಹೆಚ್ಚು ರಾಷ್ಟ್ರಗಳು ಮುಂದಾಗಿವೆ. ಅದೇನು ಎನ್ನುವ ವಿವರ ಇಲ್ಲಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಇತ್ತೀಚಿನ ದಿನಗಳಲ್ಲಿ ತಂದಿರುವ ಹೊಸ ತೆರಿಗೆ ನೀತಿಯು ಭಾರತವೂ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ಸಂಕಷ್ಟವನ್ನು ತಂದೊಡ್ಡಿವೆ. ಈಗಾಗಲೇ ಇರಾನ್‌ - ಇಸ್ರೇಲ್‌ ವಾರ್ ಹಾಗೂ ರಷ್ಯಾ ಹಾಗೂ ಉಕ್ರೇನ್‌ ನಡುವಿನ ಯುದ್ಧಗಳಿಂದ ವಿಶ್ವದ ಆರ್ಥಿಕತೆಗೆ ಸಾಕಷ್ಟು ಪೆಟ್ಟು ಬಿದ್ದಿದೆ. ಕೊರೊನಾ ಮಹಾಮಾರಿಯ ನಂತರ ಭಾರತವೂ ಸೇರಿದಂತೆ ವಿಶ್ವದ ಪ್ರಮುಖ ದೇಶಗಳು ಈಗಷ್ಟೇ ಸುಧಾರಿಸಿಕೊಂಡು ಒಂದು ಹಂತಕ್ಕೆ ಬಂದಿವೆ. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು 2.0 ಆಡಳಿತವು ಆರ್ಥಿಕತೆಯ ಮೇಲೆ ಬರೆ ಎಳೆದಂತೆ ಆಗಿದೆ.

Tax War US President Donald Trump Has Forced 50 Nations to kneel

ಅಮೆರಿಕ ಫಸ್ಟ್‌: ಅಮೆರಿಕ ಫಸ್ಟ್‌ ಎನ್ನುವ ಪರಿಕಲ್ಪನೆಯಲ್ಲಿ ಡೊನಾಲ್ಡ್‌ ಟ್ರಂಪ್ ಅವರು ಟ್ಯಾಕ್ಸ್‌ ವಾರ್‌ ಶುರು ಮಾಡಿದ್ದಾರೆ. ಯಾವ ದೇಶಗಳು ಎಷ್ಟು ತೆರಿಗೆ ವಿಧಿಸುತ್ತಿದೆಯೋ ಅದಕ್ಕಿಂತ ಹೆಚ್ಚಿನ ತೆರಿಗೆಯನ್ನು ನಾವು ವಿಧಿಸಲಿದ್ದೇವೆ ಎಂದು ಡೊನಾಲ್ಡ್‌ ಟ್ರಂಪ್ ಹೇಳಿದ್ದರು. ಹೀಗಾಗಿ, ಅಮೆರಿಕಗೆ ಭಾರತವೂ ಸೇರಿದಂತೆ ವಿವಿಧ ದೇಶಗಳಿಂದ ಆಮದು ಆಗುವ ವಸ್ತುಗಳ ಮೇಲೆ ವಿಪರೀತ ತೆರಿಗೆ ವಿಧಿಸಲಾಗುತ್ತಿದೆ. ಇದೀಗ ಬರೋಬ್ಬರಿ 50 ರಾಷ್ಟ್ರಗಳು ಒಂದಾಗಿ ಅಮೆರಿಕದ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿ, ಟ್ಯಾಕ್ಸ್‌ ಕಡಿಮೆ ಮಾಡುವಂತೆ ಮನವಿ ಮಾಡಿಕೊಳ್ಳಲು ಮುಂದಾಗಿವೆ ಎಂದು ಹೇಳಲಾಗಿದೆ.

ರಿಟರ್ನ್‌ ಟ್ಯಾಕ್ಸ್‌: ಅಮೆರಿಕದ ದುಬಾರಿ ತೆರಿಗೆ ನೀತಿಗೆ ಈಗಾಗಲೇ ಕೆಲವು ದೇಶಗಳು ಬಳಲಿವೆ. ಅಮೆರಿಕದ ರಿಟರ್ನ್‌ ಟ್ಯಾಕ್ಸ್‌ನಿಂದ ಬರೋಬ್ಬರಿ 50 ದೇಶಗಳು ಕಂಗಾಲಾಗಿವೆ. ಅಮೆರಿಕದ ನಿರ್ಧಾರದಿಂದಾಗಿ ಜಾಗತಿಕ ವ್ಯಾಪಾರ ವ್ಯವಸ್ಥೆಯಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ ಏರ್ಪಟ್ಟಿದೆ. ಈ ಆರ್ಥಿಕ ಅನಿಶ್ಚಿತತೆಗೆ 50 ರಾಷ್ಟ್ರಗಳು ಕಂಗಾಲಾಗಿವೆ.

Take a Poll

ಬೇಕಾಗಿದ್ದು ಆಗಲಿ ಟ್ಯಾಕ್ಸ್‌ ಕಡಿಮೆ ಮಾಡಲ್ಲ ಎಂದ ಟ್ರಂಪ್

ಇನ್ನು ವಿಶ್ವದಾದ್ಯಂತ ಅಮೆರಿಕ ಆರ್ಥಿಕ ನೀತಿಯ ಬಗ್ಗೆ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿಯೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ದುಬಾರಿ ಟ್ಯಾಕ್ಸ್‌ ನೀತಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ರಿಟರ್ನ್‌ ಟ್ಯಾಕ್ಸ್‌ ಪಾಲಿಸಿಯು ಮಾರುಕಟ್ಟೆಗೆ ಕೊಡುತ್ತಿರುವ ಸಣ್ಣ ಸರ್ಜರಿ ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಅಂತ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+