ಅಫ್ಘಾನ್‌ನಲ್ಲಿ ತಾಲಿಬಾನಿಗಳಿಂದ ಸಂಗೀತ ಉಪಕರಣಗಳ ನಾಶ
ಕಾಬೂಲ್, ಸೆಪ್ಟೆಂಬರ್ 09: ಅಫ್ಘಾನ್‌ನಲ್ಲಿ ತಾಲಿಬಾನಿಗಳು ಸಂಗೀತ ಉಪಕರಣಗಳನ್ನು ನಾಶಪಡಿಸಿರುವ ಘಟನೆ ನಡೆದಿದೆ.
ರಾಷ್ಟ್ರೀಯ ಸಂಗೀತ ಇನ್‌ಸ್ಟಿಟ್ಯೂಟ್‌ಗೆ ತೆರಳಿ ಕೆಲವು ತಾಲಿಬಾನಿಗಳು ಪಿಯಾನೋ, ಡ್ರಮ್ ಸೆಟ್ ಸೇರಿದಂತೆ ಹಲವು ವಾದ್ಯಗಳನ್ನು ನಾಶಪಡಿಸಿದ್ದಾರೆ.
ಬುಧವಾರದಿಂದ ತಾಲಿಬಾನ್‌ನಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಎಲ್ಲಾ ಪ್ರಮುಖ ಹುದ್ದೆಗಳಿಗೆ ಜನರನ್ನು ನೇಮಿಸಲಾಗಿದೆ. ಆದರೆ ಮಹಿಳೆಯರಿಗೆ ಯಾವುದೇ ಅಧಿಕಾರಗಳನ್ನು ನೀಡಿಲ್ಲ.

ತಾಲಿಬಾನಿಗಳು ಸಂಗೀತವನ್ನು ನಿಷೇಧಿಸಿದ್ದಾರೆ ಹಾಗೂ ಮಹಿಳೆಯರಿಗೆ ಕೆಲಸ ಮಾಡಲು ಅವಕಾಶವಿಲ್ಲ, ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ಬಳಿಕ ತಾಲಿಬಾನ್ ಸಂಗೀತಗಾರರು ಹಾಗೂ ಕಲಾವಿದರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ.
ಅಫ್ಘಾನಿಸ್ತಾನದಲ್ಲಿ ಮಹಿಳಾ ಸ್ವಾತಂತ್ರ್ಯದ ಮೇಲೆ ಮತ್ತಷ್ಟುನಿರ್ಬಂಧ ಹೇರಿರುವ ತಾಲಿಬಾನ್, ಈಗ ದೇಶದ ಟೀವಿ ಚಾನೆಲ್‌ಗಳು ಹಾಗೂ ರೇಡಿಯೋ ಚಾನೆಲ್‌ಗಳಲ್ಲಿ ಮಹಿಳೆಯರ ಧ್ವನಿ ಬಿತ್ತರವಾಗಕೂಡದು ಎಂಬ ಆದೇಶ ಹೊರಡಿಸಿದೆ. ಇದರ ಜತೆಗೆ ಟೀವಿ ಹಾಗೂ ರೇಡಿಯೋಗಳಲ್ಲಿ ಸಂಗೀತವನ್ನೂ ನಿಷೇಧಿಸಿದೆ.
ಇತ್ತೀಚೆಗೆ ಮಹಿಳಾ ನಿರೂಪಕರು ಟೀವಿಯಲ್ಲಿ ಕಾಣಿಸಕೂಡದು ಎಂಬ ನಿರ್ಬಂಧವನ್ನು ಅದು ಹೊರಡಿಸಿತ್ತು. ಹಲವು ಮಹಿಳಾ ನಿರೂಪಕರನ್ನು ಕೆಲಸದಿಂದ ವಜಾ ಮಾಡಿತ್ತು. ಅದರ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ. ಮಹಿಳೆಯರು ದೈನಂದಿನ ಜೀವನವನ್ನು ನಿರಾಳವಾಗಿ ನಡೆಸಲು ತಾಲಿಬಾನ್ ಬಿಡುತ್ತಿಲ್ಲ ಎಂದು ವರದಿಗಳು ತಿಳಿಸಿವೆ.
ಸಂಗೀತ ಹಾಗೂ ಮಹಿಳೆಯರ ಮುಖದರ್ಶನವು ಇಸ್ಲಾಂ ಪ್ರಕಾರ ಮಹಾಪಾಪ ಎಂಬುದು ತಾಲಿಬಾನ್‌ನ ಹೇಳಿಕೆಯಾಗಿದೆ. ಸಹಶಿಕ್ಷಣವೂ ನಿಷೇಧ: ಇನ್ನೊಂದೆಡೆ, ಸಹಶಿಕ್ಷಣವನ್ನು ಇತ್ತೀಚೆಗೆ ನಿಷೇಧಿಸಿದ್ದ ತಾಲಿಬಾನ್ ಈಗ, ಈ ಆದೇಶವನ್ನು ಜಾರಿಗೆ ತಂದಿದೆ.
'ಬಾಲಕ-ಬಾಲಕಿಯರು ಇನ್ನು ಅಫ್ಘಾನಿಸ್ತಾನ ವಿಶ್ವವಿದ್ಯಾಲಯ ಹಾಗೂ ಶಾಲಾ-ಕಾಲೇಜುಗಳಲ್ಲಿ ಒಟ್ಟಿಗೇ ಕುಳಿತು ಪಾಠ ಆಲಿಸಲು ಆಗದು. ಇಸ್ಲಾಮಿಕ್ ನಿಯಮದ ಪ್ರಕಾರ ಪ್ರತ್ಯೇಕ ತರಗತಿಗಳನ್ನು ಆರಂಭಿಸಲಾಗಿದೆ' ಎಂದು ಆಫ್ಘನ್ ಪತ್ರಕರ್ತರೊಬ್ಬರು ಟ್ವೀಟ್ ಮಾಡಿದ್ದಾರೆ.
ತಾಲಿಬಾನ್ ತನ್ನ ಕ್ರೂರ ದಾಳಿಯನ್ನು ಇನ್ನಷ್ಟು ವ್ಯಾಪಕವಾಗಿ ಹರಡುತ್ತಿದೆ. ಈ ನಡುವೆ ಅಫ್ಘಾನಿಸ್ತಾನದಲ್ಲಿ ಇನ್ನು ಮುಂದೆ ಸಂಗೀತವು ಇಲ್ಲ ಎಂಬ ಪರಿಸ್ಥಿತಿ ಉಂಟಾಗಿದೆ. ಅಮೆರಿಕವು ತನ್ನ ಕೊನೆಯ ಸೈನ್ಯವನ್ನು ಹಿಂತೆಗೆದುಕೊಳ್ಳಲು ಮೂರು ವಾರಗಳಿಗಿಂತ ಮುಂಚೆಯೇ ಸಂಪೂರ್ಣ ಅಫ್ಘಾನಿಸ್ತಾನದ ಬಹುದೊಡ್ಡ ಪ್ರದೇಶವನ್ನು ತನ್ನ ತೆಕ್ಕೆಗೆ ಪಡೆದುಕೊಂಡಿರುವ ತಾಲಿಬಾನ್, ತಾಲಿಬಾನ್‌ಗಳು ಕಂದಹಾರ್‌ನಲ್ಲಿ ಒಂದು ರೇಡಿಯೋ ಸ್ಟೇಷನ್ ಅನ್ನು ವಶಪಡಿಸಿಕೊಂಡಿದೆ.
ತಾಲಿಬಾನ್ ಒಂದು ವೀಡಿಯೊವನ್ನು ಬಿಡುಗಡೆ ಮಾಡಿತು, ಇದರಲ್ಲಿ ಹೆಸರಿಲ್ಲದ ಬಂಡುಕೋರರು ನಗರದ ಪ್ರಮುಖ ರೇಡಿಯೋ ಕೇಂದ್ರವನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿದರು.
ಇದನ್ನು ವಾಯ್ಸ್ ಆಫ್ ಶರಿಯಾ ಅಥವಾ ಇಸ್ಲಾಮಿಕ್ ಕಾನೂನು ಎಂದು ಮರುನಾಮಕರಣ ಮಾಡಲಾಗಿದೆ ಎಂದು ಕೂಡಾ ಹೇಳಿಕೊಂಡಿದೆ. ಎಲ್ಲಾ ಉದ್ಯೋಗಿಗಳು ಹಾಜರಿದ್ದರು ಮತ್ತು ಸುದ್ದಿ, ರಾಜಕೀಯ ವಿಶ್ಲೇಷಣೆ ಮತ್ತು ಇಸ್ಲಾಮಿಕ್ ಪವಿತ್ರ ಪುಸ್ತಕವಾದ ಕುರಾನ್ ಪಠಣಗಳನ್ನು ಪ್ರಸಾರ ಮಾಡುತ್ತಾರೆ ಎಂದು ತಾಲಿಬಾನ್ ಹೇಳಿದೆ. ಈ ರೆಡಿಯೋ ನಿಲ್ದಾಣವು ಇನ್ನು ಮುಂದೆ ಸಂಗೀತವನ್ನು ನುಡಿಸುವುದಿಲ್ಲ ಎಂಬುವುದು ಈ ಮೂಲಕ ಖಚಿತವಾಗಿದೆ.
ತಾಲಿಬಾನ್ ಹಿಂದಿನ ಉದ್ಯೋಗಿಗಳನ್ನು ಉಳಿಸಿದೆಯೇ ಅಥವಾ ಕೆಲಸಕ್ಕೆ ಮರಳಲು ಅವಕಾಶ ನೀಡಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಕಂದಹಾರ್‌ನ ಹೆಚ್ಚಿನ ನಿವಾಸಿಗಳು ತಾಲಿಬಾನ್‌ಗಳು ಇಷ್ಟಪಡುವ ಸಾಂಪ್ರದಾಯಿಕ ಉಡುಗೆಯನ್ನು ಉಡುತ್ತಿದ್ದಾರೆ ಎಂದು ಕೂಡಾ ಹೇಳಲಾಗಿದೆ.ಅಫ್ಘಾನಿಸ್ತಾನದಲ್ಲಿ ಇನ್ನುಮುಂದೆ ಪ್ರತಿಭಟನೆ ಮಾಡುವುದು ಅಷ್ಟು ಸುಲಭವಲ್ಲ. ಪ್ರತಿಭಟನಾಕಾರರು ಹಲವು ನಿಯಮಗಳನ್ನು ಅನುಸರಿಸಲೇಬೇಕು.
ಅಫ್ಘನ್ನಲ್ಲಿ ಶಾಂತಿಯುತ ಪ್ರತಿಭಟನೆ ಮಾಡಬೇಕು. ಅದನ್ನು ಮಾಡುವುದಕ್ಕೂ ಅಧಿಕಾರಿಗಳಿಂದ ಅನುಮತಿ ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಸಂಘರ್ಷದ ವಾತಾವರಣವನ್ನು ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತಿಲ್ಲ ಎಂದು ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ಹೇಳಿಕೆ ನೀಡಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಿರುವ ತಾಲಿಬಾನ್ ನಾಯಕರು ತಮ್ಮ ಮೂಗಿನ ನೇರಕ್ಕಷ್ಟೆ ನಿಯಮಾವಳಿಗಳನ್ನು ರೂಪಿಸುತ್ತಿದ್ದು ಇದೀಗ ಪ್ರತಿಭಟನೆ ಕುರಿತು ಹೊಸ ಆದೇಶ ಹೊರಡಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ಬೆಂಬಲಿತ ತಾಲಿಬಾನ್ ಸರ್ಕಾರ ರಚನೆಯಾಗಿದೆ. ಪಂಜ್ಶೀರ್ ಮೇಲೆ ಪಾಕಿಸ್ತಾನ ಸೇನೆ ನೆರವಿನಿಂದ ತಾಲಿಬಾನ್ ದಾಳಿ ನಡೆಸಿ ಸಂಪೂರ್ಣ ಆಫ್ಘಾನಿಸ್ತಾನವನ್ನು ಉಗ್ರರು ಕೈವಶ ಮಾಡಿದ್ದಾರೆ. ಇದರ ಬಳಿಕ ಕಾಬೂಲ್ ಸೇರಿದಂತೆ ಹಲವೆಡೆ ಪಾಕಿಸ್ತಾನ ಕೈವಾಡದ ವಿರುದ್ಧ ಪ್ರತಿಭಟನೆಗಳು ಆರಂಭಗೊಂಡಿದೆ.
ಪ್ರತಿಭಟನಾ ನಿರತರ ಮೇಲೆ ತಾಲಿಬಾನ್ ಗುಂಡಿನ ಮಳೆ ಸುರಿಸಿದೆ. ಇದರ ನಡುವೆ ದಿಟ್ಟ ಮಹಿಳೆ ತಾಲಿಬಾನ್ ಉಗ್ರನ ಬಂದೂಕಿಗೆ ಎದೆಯೊಡ್ಡಿ ನಿಂತ ಫೋಟೋ ವೈರಲ್ ಆಗಿದೆ.
ಕಾಬೂಲ್ ನಗರದ ಹಲೆವೆಡೆ ಮಹಿಳೆಯರು ಸೇರಿದಂತೆ ಆಫ್ಘಾನ್ ನಿವಾಸಿಗಳು ಪಾಕಿಸ್ತಾನ ಪ್ರವೇಶ ಹಾಗೂ ತಾಲಿಬಾನ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆ ಹತ್ತಿಕ್ಕಲ್ಲು ತಾಲಿಬಾನ್ ಉಗ್ರರು ಸತತ ಗುಂಡಿನ ದಾಳಿ ನಡೆಸಿದ್ದಾರೆ. ಕಾಬೂಲ್‌ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿ ಮುಂಭಾಗದಲ್ಲಿ ನಡೆಯುತ್ತಿದ್ದ ಪ್ರತಿಭಟನಾ ನಿರತರ ಮೇಲೆ ತಾಲಿಬಾನ್ ಗುಂಡು ಹಾರಿಸಲು ಮುಂದಾಗಿದೆ. ಆದರೆ ತಾಲಿಬಾನ್ ಉಗ್ರ ಮಹಿಳೆಗೆ ನೇರವಾಗಿ ಬಂದೂಕು ಹಿಡಿದು ಪ್ರತಿಭಟನೆ ನಿಲ್ಲಿಸುವಂತೆ ಎಚ್ಚರಿಸಿದ್ದಾರೆ.












Click it and Unblock the Notifications