Syria Civil War: ISIS ಉಗ್ರರ ನಾಶಕ್ಕೆ ಬಾಂಬ್‌ಗಳ ಸುರಿಮಳೆ ಸುರಿಸುತ್ತಿದೆ ಅಮೆರಿಕ!
Middle East conflict: ವಿಶ್ವದಲ್ಲಿ ಶಾಂತಿಯ ಲಕ್ಷಣಗಳು ಗೋಚರಿಸುವ ಸಮಯದಲ್ಲೇ ಅಮೆರಿಕ ಅದಕ್ಕೊಂದು ತಿರುವು ಕೊಟ್ಟಿದೆ. ದಶಕಗಳಿಂದ ಸಾವಿರಾರು ಜನರ ಸಾವಿಗೆ ಕಾರಣನಾಗಿದ್ದ ಸಿರಿಯಾದ ಅಧ್ಯಕ್ಷ ಬಶರ್ ಅಸಾದ್ ಸರ್ಕಾರ ಪತನವಾಗಿದೆ. ಇದರ ಬೆನ್ನಲ್ಲೇ ಯುದ್ಧರಂಗಕ್ಕೆ ಅಮೆರಿಕ ಪ್ರವೇಶಿಸಿದ್ದು, ಭಾರೀ ವಾಯುದಾಳಿಯನ್ನು ಸಿರಿಯಾದ ಐಎಸ್ಐಸ್ (ISIS - Islamic State of Iraq and the Levant) ಗುರಿಯಾಗಿಸಿಕೊಂಡು ಮಾಡಲಾಗಿದೆ.
ಸಿರಿಯಾದ ಅಂತರ್ಯುದ್ಧ ಭೀಕರವಾಗಿತ್ತು. ಸಿರಿಯಾದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಐಎಸ್ಐಸ್‌ನ ಪೈಶಾಚಿಕ ಕೃತ್ಯಗಳಿಗೆ ಜನ ದಂಗಾಗಿ ಹೋಗಿದ್ದರು. ಇದೀಗ ಅಮೆರಿಕ ಇಲ್ಲಿನ ಐಎಸ್ಐಸ್ ಉಗ್ರರನ್ನು ಗುರಿಯಾಗಿಸಿಕೊಂಡು ಭಾರೀ ವೈಮಾನಿಕ ದಾಳಿಯನ್ನು ನಡೆಸುತ್ತಿದೆ. ಇದರಲ್ಲಿ ಬಾಂಬ್, ಕ್ಷಿಪಣಿಗಳ ಸುರಿಮಳೆಯೇ ಆಗಿದೆ!
ಸಿರಿಯಾದಲ್ಲಿ ಸರ್ವಾಧಿಕಾರಿ ಬಶರ್ ಅಸಾದ್ ಆಡಳಿತ ಅಂತ್ಯವಾಗಿದೆ. ಇದರ ಬೆನ್ನಲ್ಲೇ ಇಲ್ಲಿನ ಐಎಸ್ಐಸ್ ಉಗ್ರರನ್ನು ಮಟ್ಟ ಹಾಕುವುದಕ್ಕೆ ಅಮೆರಿಕ ಮುಂದಾಗಿದೆ. ಸಿರಿಯಾದಲ್ಲಿ ಐಎಸ್ಐಸ್ ಶಿಬಿರಗಳನ್ನು ಗುರಿಮಾಡಿಕೊಂಡು ಬರೋಬ್ಬರಿ 75ಕ್ಕೂ ಹೆಚ್ಚು (ಕ್ಷಿಪಣಿ) ವೈಮಾನಿಕ ದಾಳಿಯನ್ನು ನಡೆಸಲಾಗಿದೆ.
ಐಎಸ್ಐಸ್ ಮತ್ತೆ ತಲೆಎತ್ತುವುದನ್ನು ಕಟ್ಟಿ ಹಾಕುವುದು ನಮ್ಮ ಮುಖ್ಯ ಉದ್ದೇಶ ಅದನ್ನು ತಡೆದೇ ತೀರುತ್ತೇವೆ ಎಂದು ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಗುಡುಗಿದ್ದಾರೆ. ಸಿರಿಯಾದಲ್ಲಿ ಮಕ್ಕಳು ಸೇರಿದಂತೆ ಸಾವಿರಾರು ಜನರ ದಾರುಣ ಮಾರಣಹೋಮವೇ ನಡೆದಿತ್ತು. ಆ ರಾಕ್ಷಸನ ಆಡಳಿತ ಈಗ ಅಂತ್ಯವಾಗಿದೆ. ಇದರ ಬೆನ್ನಲ್ಲೇ ಇಲ್ಲಿ ಉಗ್ರರ ಎಡೆಮುರಿ ಕಟ್ಟುವುದಕ್ಕೆ ಅಮೆರಿಕ ಫೀಲ್ಡ್‌ಗೆ ಇಳಿದಿದೆ.

ಈ ರೀತಿ ಭಾರೀ ವೈಮಾನಿಕ ದಾಳಿಗಳಲ್ಲಿ ಯಾವುದೇ ಸಾರ್ವಜನಿಕರ ಸಾವು ಸಂಭವಿಸಿಲ್ಲ. ಈ ದಾಳಿಗಳನ್ನು ಮುಖ್ಯವಾಗಿ ಐಎಸ್ಐಸ್ ಉಗ್ರರನ್ನು ಗುರಿ ಮಾಡಿಕೊಂಡು ದಾಳಿ ಮಾಡಲಾಗಿದೆ ಎನ್ನಲಾಗಿದೆ. ಆದರೆ, ಸ್ಪಷ್ಟವಾದ ಚಿತ್ರಣದ ಇನ್ನು ಕೆಲವೇ ಗಂಟೆಗಳಲ್ಲಿ ಸಿಗುವ ಸಾಧ್ಯತೆ ಇದೆ. ಇಷ್ಟು ದಿನ ಸಿರಿಯಾ ರಕ್ತಪಾತವನ್ನೇ ಕಂಡಿತ್ತು. ಆ ರಕ್ತಪಾತದ ಯುಗಾಂತ್ಯವಾಗುವ ಮುನ್ಸೂಚನೆ ಇದೀಗ ಸಿಕ್ಕಿದೆ.
ಸಿರಿಯಾದಲ್ಲಿ ಬಾಂಬ್‌ಗಳ ಸುರಿಮಳೆ
ಇನ್ನು ಸಿರಿಯಾದಲ್ಲಿ ಬಾಂಬ್‌ಗಳ ಸುರಿಮಳೆಯನ್ನೇ ಸುರಿಸಲಾಗಿದೆ. ಅಮೆರಿಕದ ಸೆಂಟ್ರಲ್ ಕಮಾಂಡ್ ಅಖಾಡಕ್ಕೆ ಇಳಿದು, ಐಎಸ್ಐಸ್ ಉಗ್ರರನ್ನು ಹುಡುಕಿ ಹುಡುಕಿ ಬೇಟೆಯಾಡುತ್ತಿದೆ. ವ್ಯಾಘ್ರರಿಗೆ ವ್ಯಾಘ್ರಾ ರೀತಿಯಲ್ಲೇ ಉತ್ತರಿಸಬೇಕು ಎನ್ನುವಂತೆ ಐಎಸ್ಐಸ್ ವ್ಯಾಪಕ ದಾಳಿಯನ್ನು ಮಾಡುತ್ತಿದೆ ಎನ್ನಲಾಗಿದೆ.
ಸಿರಿಯಾದಲ್ಲಿ ISIS ಶಿಬಿರಗಳು ಮತ್ತು ಉಗ್ರರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗುತ್ತಿದೆ. ಡಜನ್‌ಗಟ್ಟಲೆ ಕ್ಷಿಪಣಿಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. B-52 ಬಾಂಬರ್‌ಗಳು, F-15 ಹಾಗೂ A-10 ಎನ್ನುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ದಾಳಿ ಮಾಡಲಾಗಿದೆ.

ಉಗ್ರರ ಮಿಲಿಟರಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ಮಾಡಲಾಗುತ್ತಿದ್ದು, 75ಕ್ಕೂ ವಾಯುದಾಳಿ ಮಾಡಲಾಗಿದೆ. ಉಗ್ರರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. ಸಿರಿಯಾದಲ್ಲಿ ಈ ಉಗ್ರರನ್ನು ಗುರಿಯಾಗಿಸಿಕೊಂಡು ಸಾಮರ್ಥ್ಯ ನಾಶ ಮಾಡುವುದು ಮತ್ತು ಉಗ್ರರ ಶಸ್ತ್ರಾಸ್ತ ನಾಶಮಾಡುವುದು ಹಾಗೂ ಅವರು ಮತ್ತೆ ಸಂಘಟಿತರಾಗುವುದನ್ನು ತಡೆಯುವುದೇ ಇದರ ಮುಖ್ಯ ಉದ್ದೇಶವಾಗಿದೆ ಎಂದು ಅಮೆರಿಕ ಸೇನೆ ಹೇಳಿದೆ.
ಈ ಭಾಗದಲ್ಲಿ ಮಿತ್ರ ರಾಷ್ಟ್ರಗಳೊಂದಿಗೆ ಸೇರಿ ISIS ಕಾರ್ಯಾಚರಣೆಯ ಸಮರ್ಥವಾಗಿ ಮಾಡಲಿದ್ದೇವೆ. ಉಗ್ರರನ್ನು ಮಟ್ಟಹಾಕಲಿದ್ದೇವೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ನಾವು ISIS ಅನ್ನು ಪುನರ್‌ರಚಿಸಲು ಹಾಗೂ ಸಿರಿಯಾದಲ್ಲಿನ ಸದ್ಯದ ಪರಿಸ್ಥಿತಿಯ ಲಾಭವನ್ನು ಪಡೆಯುವುದಕ್ಕೆ ಬಿಡುವುದಿಲ್ಲ. ಸಿರಿಯಾದಲ್ಲಿ ಯಾರೇ ಆ ಉಗ್ರರೊಂದಿಗೆ ಕೈಜೋಡಿಸಿದರೂ ಅವರ ಸರ್ವನಾಶವೂ ಕಟಿಟ್ಟಬುತ್ತಿ ಎಂದು ಅಮೆರಿಕೆ ಎಚ್ಚರಿಸಿದೆ.












Click it and Unblock the Notifications