ದಕ್ಷಿಣ ಕೊರಿಯಾದಲ್ಲಿ ಸಂಸದೀಯ ಚುನಾವಣೆ: ಕೊರೊನಾ ಸೋಂಕಿತರಿಂದ ಮತದಾನ

ಕೊರೊನಾ ಭಯದ ನಡುವೆಯೇ ದಕ್ಷಿಣ ಕೊರಿಯಾ ಸಂಸದೀಯ ಚುನಾವಣೆ ನಡೆಸಿ ಅಚ್ಚರಿ ಮೂಡಿಸಿದೆ. ಕೊರೊನಾ ಆತಂಕವಿದ್ದರೂ ಕೆಲವು ಕಠಿಣ ಮುಂಜಾಗ್ರತಾ ಕ್ರಮಗಳೊಂದಿಗೆ ಚುನಾವಣೆ ನಡೆಸಿದ ಮೊದಲ ದೇಶ ದಕ್ಷಿಣ ಕೊರಿಯಾ.

ಬೆಳಗ್ಗೆ 6 ಗಂಟೆಯಿಂದಲೇ 14 ಸಾವಿರ ಮತಗಟ್ಟೆಗಳನ್ನು ತೆರೆಯಲಾಗಿತ್ತು. ಮತದಾರರು ಮಾಸ್ಕ್‌ ಧರಿಸುವುದು ಕಡ್ಡಾಯವಾಗಿತ್ತು. ಮತಗಟ್ಟೆಗೆ ಬರುವ ಮುನ್ನ ದೇಹದ ಉಷ್ಣಾಂಶವನ್ನು ತಪಾಸಣೆ ಮಾಡಲಾಗುತ್ತಿದೆ.

ಒಂದೊಮ್ಮೆ ದೇಹದ ಉಷ್ಣಾಂಶ 37.5 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದರೆ ವಿಶೇಷ ಮತಗಟ್ಟೆಗೆ ಅವರನ್ನು ಕಳುಹಿಸಲಾಗುತ್ತದೆ. ಆದರೆ ವಿಶೇಷವೆಂಬಂತೆ ಕೊರೊನಾ ಸೋಂಕಿತರು ಹಾಗೂ ಕ್ವಾರಂಟೈನ್‌ನಲ್ಲಿರುವವರಿಗೂ ಮತದಾನ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿತ್ತು.

ಮತದಾರರಿಗೆ ಮಾಸ್ಕ್‌, ಸ್ಯಾನಿಟೈಸರ್ ಬಳಕೆ ಕಡ್ಡಾಯ

ಮತದಾರರಿಗೆ ಮಾಸ್ಕ್‌, ಸ್ಯಾನಿಟೈಸರ್ ಬಳಕೆ ಕಡ್ಡಾಯ

ಎಲ್ಲಾ ಮತದಾರರು ಮಾಸ್ಕ್ ಧರಿಸಿಯೇ ಮತಗಟ್ಟೆಗೆ ಬರಬೇಕು, ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಮಾಡಬೇಕು. ಪ್ಲಾಸ್ಟಿಕ್ ಕೈಗವಸುಗಳನ್ನು ಧರಿಸಲೇಬೇಕು. ಹಾಗೆಯೇ ಪ್ರತಿ ಮತದಾರನ ನಡುವೆ ಒಂದು ಮೀಟರ್ ಅಂತರವಿರುವಂತೆ ನೋಡಿಕೊಂಡಿದ್ದಾರೆ. ಕೊವಿಡ್ 19 ಸಾಂಕ್ರಾಮಿಕ ರೋಗ ಹರಡಲು ಆರಂಭಿಸಿದ ದಿನದಿಂದ ವಿಶ್ವದಲ್ಲಿ ಚುನಾವಣೆ ಹಮ್ಮಿಕೊಂಡ ಮೊದಲ ರಾಷ್ಟ್ರ ದಕ್ಷಿಣ ಕೊರಿಯಾ ಆಗಿದೆ.

 ಕೊರಿಯಾದಲ್ಲಿ ಕೊರೊನಾದಿಂದ ಮೃತಪಟ್ಟವರೆಷ್ಟು?

ಕೊರಿಯಾದಲ್ಲಿ ಕೊರೊನಾದಿಂದ ಮೃತಪಟ್ಟವರೆಷ್ಟು?

ಕೊರಿಯಾದಲ್ಲಿ ಬುಧವಾರ 27 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಒಟ್ಟು 10,591 ಮಂದಿ ಕೊರೊನಾ ಸೋಂಕಿತರಿದ್ದು 225 ಮಂದಿ ಇದುವರೆಗೆ ಮೃತಪಟ್ಟಿದ್ದಾರೆ. ಪ್ರತಿನಿತ್ಯ ಸುಮಾರು 30 ಹೊಸ ಪ್ರಕರಣಗಳು ದಾಖಲಾಗುತ್ತಿವೆ.

ಕೊವಿಡ್ 19 ರೋಗಿಗಳು ಕೂಡ ಮತದಾನ ಮಾಡಬಹುದು

ಕೊವಿಡ್ 19 ರೋಗಿಗಳು ಕೂಡ ಮತದಾನ ಮಾಡಬಹುದು

ಬೆಳಗ್ಗೆ 9 ಗಂಟೆ ಸುಮಾರಿಗೆ ಶೇ.8ರಷ್ಟು ಮತದಾನವಾಗಿತ್ತು, 2016ರ ಚುನಾವಣೆಗಿಂತ ಶೇ. 0.9ರಷ್ಟು ಮತದಾನದ ಪ್ರಮಾಣ ಹೆಚ್ಚಳವಾಗಿದೆ. 44 ಮಿಲಿಯನ್ ಜನರಲ್ಲಿ ಕೇವಲ ಶೇ.27ರಷ್ಟು ಮಂದಿ ತಮ್ಮ ಹೆಸರನ್ನು ಕಳೆದ ವಾರ ನೋಂದಾಯಿಸಿಕೊಂಡಿದ್ದಾರೆ.
ಅದರಲ್ಲಿ 2,800 ಮಂದಿ ಕೊರೊನಾ ಸೋಂಕಿತರಿದ್ದಾರೆ. ಕೊರೊನಾ ಸೋಂಕಿತರಿಗಾಗಿಯೇ ವಿಶೇಷ ಬೂತ್ ವ್ಯವಸ್ಥೆ ಮಾಡಲಾಗಿದೆ. ಹಾಗೂ ಅವರು ಇ-ಮೇಲ್ ಮೂಲಕವೂ ಮತ ಚಲಾಯಿಸಬಹುದಾಗಿದೆ.
ಗೃಹ ಬಂಧನದಲ್ಲಿರುವ 13 ಸಾವಿರ ಮಂದಿ ಮತದಾನಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಸಾಮಾನ್ಯ ಮತದಾರರು ಮತದಾನ ಮಾಡಿ ಹೋದ ಒಂದು ಗಂಟೆ ಬಳಿಕ ಇವರಿಗೆ ಮತದಾನ ಮಾಡಲು ಅವಕಾಶ ನೀಡಲಾಗುತ್ತದೆ.

ದಕ್ಷಿಣ ಕೊರಿಯಾ ಎಂದಿಗೂ ಚುನಾವಣೆ ಸ್ಥಗಿತಗೊಳಿಸಿಲ್ಲ

ದಕ್ಷಿಣ ಕೊರಿಯಾ ಎಂದಿಗೂ ಚುನಾವಣೆ ಸ್ಥಗಿತಗೊಳಿಸಿಲ್ಲ

ಒಂದು ಬಾರಿಯೂ ಚುನಾವಣೆಯನ್ನು ಸ್ಥಗಿತಗೊಳಿಸಿರುವುದು ಅಥವಾ ಮುಂದೂಡಿರುವುದು ದಕ್ಷಿಣ ಕೊರಿಯಾದ ಇತಿಹಾಸದಲ್ಲೇ ಇಲ್ಲ. ಆದರೆ ಎಲೆಕ್ಷನ್ ಕ್ಯಾಂಪೈನ್‌ಗಳಲ್ಲಿ ಬದಲಾವಣೆಗಳಾಗಿವೆ. ಅಭ್ಯರ್ಥಿಗಳು ಕೂಡ ಮಾಸ್ಕ್‌ ಹಾಕಿಕೊಂಡು ಪ್ರಚಾರ ನಡೆಸಿದ್ದರು. ಕೈಕುಲುಕುವುದು, ಹತ್ತಿರದಿಂದ ಮಾತನಾಡುವುದನ್ನು ನಿಷೇಧಸಿಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+