ಕೊರೊನಾವೈರಸ್‌ನಿಂದ ದೂರವಿರಲು ಕೇವಲ 6 ಅಡಿಗಳ ಅಂತರ ಸಾಲದು

ಲಂಡನ್, ಮೇ 20: ಕೊರೊನಾವೈರಸ್‌ನಿಂದ ನೀವು ದೂರವಿರಲು ಕೇವಲ 6 ಅಡಿಗಳ ಅಂತರ ಸಾಲದು ಎಂದು ಸಂಶೋಧನೆಯೊಂದು ಹೇಳಿದೆ.

ಒಂದೊಮ್ಮೆ ಕೊರೊನಾವೈರಸ್ ಬಂದಿದ್ದ ವ್ಯಕ್ತಿ ಸೀನಿದರೆ ಅವರ ಬಾಯಿಂದ ಲಾಲಾರಸ 18 ಅಡಿಗಳ ದೂರದವರೆಗೆ ಚಿಮ್ಮುತ್ತದೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.

ಸಿಪ್ರಸ್‌ನ ನಿಕೋಸಿಯಾ ವಿಶ್ವವಿದ್ಯಾಲಯದ ತಜ್ಞರ ಮಾಹಿತಿ ಪ್ರಕಾರ ಗಾಳಿ ಮೂಲಕ ಹರಡುವ ವೈರಸ್‌ಗಳು ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಎಲ್ಲಿಯವರೆಗೆ ಹೋಗಬಲ್ಲದು ಎಂಬುದರ ಬಗ್ಗೆ ತಿಳಿಸಿದ್ದಾರೆ.

ಜರ್ನಲ್ ಫಿಸಿಕ್ಸ್ ಫ್ಲೂಡ್ಸ್ ವರದಿ ಪ್ರಕಾರ ಗಾಳಿಯು ಗಂಟೆಗೆ ನಾಲ್ಕು ಕಿಮೀ ವೇಏಗವಾಗಿ ಚಲಿಸಿದರೆ ಸಲೈವಾ 5 ಸೆಕೆಂಡುಗಳಲ್ಲಿ 18 ಅಡಿ ದೂರಕ್ಕೆ ಚಿಮ್ಮುತ್ತದೆ ಎಂದಿದ್ದಾರೆ.

ಮಕ್ಕಳು, ಹಿರಿಯರಿಗೆ ತೊಂದರೆ

ಮಕ್ಕಳು, ಹಿರಿಯರಿಗೆ ತೊಂದರೆ

ಮಕ್ಕಳು ಮತ್ತು ಹಿರಿಯರಿಗೆ ತುಂಬಾ ಅಪಾಯವಿದೆ. ಲಾಲಾರಸವು ಒಂದು ಸಂಕೀರ್ಣ ದ್ರವವಾಗಿದ್ದು, ಇದು ಕೆಮ್ಮಿನಿಂದ ಬಿಡುಗಡೆಯಾಗಿ ಸುತ್ತಮುತ್ತಲಿನ ಗಾಳಿಯಲ್ಲಿ ಸೇರುತ್ತದೆ. ಲಾಲಾರಸದ ಹನಿಗಳು ಗಾಳಿಯಲ್ಲಿ ಹೇಗೆ ಚಲಿಸುತ್ತವೆ ಎಂಬುದರ ಮೇಲೆ ಅನೇಕ ಅಂಶಗಳು ನಿಂತಿವೆ.

ಲಾಲಾರಸದ ಹನಿಗಳ ಗಾತ್ರ

ಲಾಲಾರಸದ ಹನಿಗಳ ಗಾತ್ರ

ಅಧ್ಯಯನವು ಗಮನಿಸಿದಂತೆ, ಲಾಲಾರಸದ ಹನಿಗಳ ಗಾತ್ರ ಮತ್ತು ಸಂಖ್ಯೆ, ಅವು ಪರಸ್ಪರ ಹೇಗೆ ಸಂವಹನ ನಡೆಸುತ್ತವೆ ಮತ್ತು ಅವು ಚದುರಿಹೋಗುವಾಗ ಮತ್ತು ಆವಿಯಾಗುವಾಗ ಸುತ್ತಮುತ್ತಲಿನ ಗಾಳಿ, ಶಾಖ ಮತ್ತು ದ್ರವ್ಯರಾಶಿಯನ್ನು ಹೇಗೆ ವರ್ಗಾಯಿಸಲಾಗುತ್ತದೆ ಮತ್ತು ಸುತ್ತಮುತ್ತಲಿನ ಗಾಳಿಯ ಆರ್ದ್ರತೆ ಮತ್ತು ತಾಪಮಾನವನ್ನು ಒಳಗೊಂಡಿರುತ್ತದೆ. ಅಧ್ಯಯನದಲ್ಲಿ, ವಿಜ್ಞಾನಿಗಳು ಕೆಮ್ಮುವ ವ್ಯಕ್ತಿಯ ಮುಂದೆ ಗಾಳಿಯ ಮೂಲಕ ಚಲಿಸುವ ಪ್ರತಿ ಲಾಲಾರಸದ ಹನಿಯ ಸ್ಥಿತಿಯನ್ನು ಪರೀಕ್ಷಿಸುತ್ತಿದ್ದಾರೆ.

ಲಾಲಾರಸದ ಕುರಿತು ಅಧ್ಯಯನ

ಲಾಲಾರಸದ ಕುರಿತು ಅಧ್ಯಯನ

ಅಧ್ಯಯನವು ಸುಮಾರು 1,008 ಸಿಮ್ಯುಲೇಟೆಡ್ ಲಾಲಾರಸದ ಹನಿಗಳ ಭವಿಷ್ಯವನ್ನು ವಿಶ್ಲೇಷಿಸಿದೆ ಮತ್ತು 3.7 ಮಿಲಿಯನ್ ಸಮೀಕರಣಗಳನ್ನು ಪರಿಹರಿಸಿದೆ.

ಆರು ಅಡಿಗಳ ಅಂತರ ಸಾಲದು

ಆರು ಅಡಿಗಳ ಅಂತರ ಸಾಲದು

ಕೊರೊನಾವೈರಸ್‌ನಿಂದ ನೀವು ದೂರವಿರಲು ಕೇವಲ 6 ಅಡಿಗಳ ಅಂತರ ಸಾಲದು ಎಂದು ಸಂಶೋಧನೆಯೊಂದು ಹೇಳಿದೆ.


ಒಂದೊಮ್ಮೆ ಕೊರೊನಾವೈರಸ್ ಬಂದಿದ್ದ ವ್ಯಕ್ತಿ ಸೀನಿದರೆ ಅವರ ಎಂಜಿಲು 18 ಅಡಿಗಳ ದೂರದವರೆಗೆ ಚಿಮ್ಮುತ್ತದೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+