ಸೌದಿಯಲ್ಲಿ ಹೆಚ್ಚಾಗುತ್ತಿದೆ ಎಂಇಆರ್‌ಎಸ್ ಸೋಂಕು

ಹೊಸದಾಗಿ ಹತ್ತು ಜನರಿಗೆ ಈ ಸೋಂಕು ತಗಲಿದ್ದು ಇದುವರೆಗೆ ದೇಶದಲ್ಲಿ 473 ಜನ ಮೆರ್ಸ್‌ನಿಂದ ಬಳಲುತ್ತಿದ್ದಾರೆ ಎಂದು ಸೌದಿ ಸರ್ಕಾರ ತಿಳಿಸಿದೆ.
ಮಿಡ್ಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ (ಎಂಇಆರ್‌ಎಸ್) 2012ರಲ್ಲಿ ಪತ್ತೆಯಾಗಿದ್ದು ಸಾರ್ಸ್ ಸೋಂಕುಗಿಂತ ಅಪಾಯಕಾರಿಯಾಗಿದ್ದು, ಈ ಸೋಕಿಗೆ ತುತ್ತಾದ ಶೇ.60 ಮಂದಿ ಈಗಾಗಲೇ ಮೃತಪಟ್ಟಿದ್ದಾರೆ.[ಇಲ್ಲಿ ಮಹಿಳೆಯರ ವಸ್ತುಗಳನ್ನು ಪುರುಷರು ಮಾರುವಂತಿಲ್ಲ]
ವಿಶ್ವದ ವಿಜ್ಞಾನಿಗಳು ಈ ಸೋಂಕು ಪತ್ತೆಯಾದ ದಿನದಿಂದ ಇಲ್ಲಿಯವರೆಗೆ ಸಂಶೋಧನೆ ನಡೆಸುತ್ತಿದ್ದು, ಇದುವರೆಗೂ ಯಾವ ಪ್ರಾಣಿಯಿಂದ ಈ ಸೋಂಕು ಹರಡುತ್ತದೆ ಎನ್ನುವುದನ್ನು ತಿಳಿಸಿಲ್ಲ.
ಈ ಸೋಂಕಿನಿಂದ ಆರಂಭಿಕ ಹಂತದಲ್ಲಿ ಕೆಮ್ಮು, ಶೀತ ಬರುತ್ತದೆ. ಬಳಿಕ ಉಲ್ಬಣಗೊಂಡು ರಕ್ತಸ್ರಾವ, ಮೂತ್ರ ಪಿಂಡಗಳ ವೈಫಲ್ಯ, ತೀವ್ರ ಉಸಿರಾಟದ ತೊಂದರೆಯಿಂದಾಗಿ ರೋಗಿಯ ಸಾವಿಗೆ ಈ ಸೋಂಕು ಕಾರಣವಾಗುತ್ತದೆ.
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಬಹುದು: http://coronamap.com/












Click it and Unblock the Notifications