ಇಲ್ಲಿ ಮಹಿಳೆಯರ ವಸ್ತುಗಳನ್ನು ಪುರುಷರು ಮಾರುವಂತಿಲ್ಲ!

Banned- Men should not sell women accessories in Saudi Arabia
ಸೌದಿ ಅರೇಬಿಯಾ, ಏ. 1: ಇದೇನು ಏಪ್ರಿಲ್ ಒಂದರ ಜೋಕು ಅಲ್ಲ. ವಾಸ್ತವವಾಗಿ ಸೌದಿ ಅರೇಬಿಯಾದಲ್ಲಿ ಮೊನ್ನೆ ಭಾನುವಾರದಿಂದಲೇ ಜಾರಿಗೆ ಬಂದಿರುವಂತೆ ಮಹಿಳೆಯರಿಗೆ ಸಂಬಂಧಪಟ್ಟ/ ಮಹಿಳೆಯರು ಉಪಯೋಗಿಸುವ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಗಳಲ್ಲಿ ಪುರುಷರು ಕಾಣಿಸಿಕೊಳ್ಳುವಂತಿಲ್ಲ ಎಂಬ ಫರ್ಮಾನು ಜಾರಿಗೆ ಬಂದಿದೆ.

ಅರ್ಥಾತ್ ಮಹಿಳೆಯರು ಬಳಸುವ ಸುಗಂಧ ದ್ರವ್ಯಗಳು, ಸಾಂಪ್ರದಾಯಿಕ ಉಡುಪುಗಳು, ಕೈಚೀಲ, ಪಾದರಕ್ಷೆ, ಬಟ್ಟೆಬರೆ, ತಾಯಿಯ ರಕ್ಷಣೆಗಾಗಿ ಉಪಯೋಗಿಸುವ ಸಾಮಗ್ರಿಗಳ ಮಾರಾಟ ಸ್ಥಳಗಳಲ್ಲಿ ಪುರುಷರು ಮಾರಾಟ ಪ್ರಕ್ರಿಯೆಯಲ್ಲಿ ತೊಡಗುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಆದರೆ ಶಿಶುಪಾಲನಾ ಸಾಮಗ್ರಿಗಳನ್ನು ಮಾರಾಟ ಮಾಡುವ ಕೇಂದ್ರಗಳಲ್ಲಿ ಪುರುಷರು ಮಾರಾಟದಲ್ಲಿ ತೊಡಗಬಹುದಾಗಿದೆ ಎಂದು ಸರಕಾರಿ ಆದೇಶವನ್ನು ಉಲ್ಲೇಖಿಸಿ ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

ಈ ನೀತಿ ತಕ್ಷಣದಿಂದಲೇ ಜಾರಿಗೆ ಬರುತ್ತದಾದರೂ 2016ರ ವೇಳೆಗಂತೂ ಕಡ್ಡಾಯವಾಗಿ ಯಾವುದೇ ಮಹಿಳಾ ಉತ್ಪನ್ನ ಮಾರಾಟ ಅಂಗಡಿಗಳಲ್ಲಿ ಪುರುಷರು ಇರುವಂತೆಯೇ ಇಲ್ಲ. ಹಾಗಂತ ಅಂಗಡಿ ಮಾಲೀಕರು ಬರೀ ಮಹಿಳೆಯರನ್ನೇ ಮಾರಾಟಕ್ಕೆ ನೇಮಿಸಿಕೊಂಡು ಅಕಾಲದಲ್ಲಿ ಅಂಗಡಿಗಳಲ್ಲಿ ಹಾಜರಾಗುವಂತೆ ಸೂಚಿಸಬಾರದು. ಅಂದರೆ ಬೆಳಗ್ಗೆ 9 ಗಂಟೆಗೆ ಮುಂಚೆ ಮತ್ತು ರಾಥ್ರಿ 11 ಗಂಟೆಯ ನಂತರ ಮಹಿಳಾ ಮಾರಾಟ ಪ್ರತಿನಿಧಿಗಳು ಅಂಗಡಿಗಳಲ್ಲಿ ಕೆಲಸದಲ್ಲಿ ತೊಡಗಬಾರದು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಇನ್ನು ಮಹಿಳಾ ಉದ್ಯೋಗಿಗಳ ರಕ್ಷಣೆಯತ್ತ ಆದ್ಯ ಗಮನಹರಿಸಿರುವ ಸೌದಿ ಆಡಳಿತವು ಮೂರಕ್ಕಿಂತ ಹೆಚ್ಚು ಮಹಿಳೆಯರು (ಉದ್ಯೋಗವನ್ನರಸಿ ಬರುವ ವಿದೇಶಿ ಮಹಿಳೆಯರು) ಒಂದೇ ಕಡೆ ಉದ್ಯೋಗದಲ್ಲಿದ್ದರೆ ಮತ್ತೊಬ್ಬ ಮಹಿಳೆಯನ್ನು (ಸೌದಿ ಮಹಿಳೆಯೆ ಆಗಿರಬೇಕು) ಆ ಮೂವರ ಮೇಲ್ವಿಚಾರಕಿಯಾಗಿ ನೇಮಿಸಬೇಕು. ಯಾವುದೇ ಮಳಿಗೆ ಈ ಷರತ್ತನ್ನು ಉಲ್ಲಂಘಿಸಿದ್ದೇ ಆದರೆ ಅವುಗಳನ್ನು ಕೆಂಪುಪಟ್ಟಿಗೆ ಸೇರಿಸುವುದಾಗಿಯೂ ಸೌದಿ ಆಡಳಿತ ಎಚ್ಚರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+