ಮಿಸೈಲ್ ಮಂಜಾ ಕೊಟ್ಟು, ಉಕ್ರೇನ್‌ಗೆ ಬುದ್ಧಿ ಕಲಿಸಿದ ರಷ್ಯಾ ಮಿಲಿಟರಿ!
ಅಮೆರಿಕದ ಜೊತೆ ಸೇರಿ ರಷ್ಯಾಗೆ ಮಂಜಾ ಕೊಡುತ್ತಿದ್ದ ಉಕ್ರೇನ್‌ಗೆ ದಿಢೀರ್ ರಷ್ಯಾದ ಸೇನೆ ಸರಿಯಾಗೇ ಮಿಸೈಲ್ ಮಂಜಾ ಕೊಟ್ಟಿದೆ. ಈ ಮೂಲಕ ರಷ್ಯಾ & ಉಕ್ರೇನ್ ನಡುವೆ ಬೆಂಕಿ ಧಗಧಗಿಸಲು ಶುರುವಾಗಿದೆ. ಅದ್ರಲ್ಲೂ ರಷ್ಯಾ ಸೇನೆ ಕೋಪಕ್ಕೆ ಉಕ್ರೇನ್‌ನ ಪ್ರಮುಖ ನಗರ & ವಸತಿ ಪ್ರದೇಶಗಳು ಚೂರು ಚೂರಾಗಿ ಹೋಗಿವೆ.
ರಷ್ಯಾ ಅದೆಷ್ಟೇ ಹೇಳಿದರೂ ಅಮೆರಿಕ ಕೇರ್ ಮಾಡದೆ ಉಕ್ರೇನ್ ಬೆನ್ನಿಗೆ ನಿಲ್ಲುತ್ತಿದೆ. ಇನ್ನು ಕೆಲವು ದಿನಗಳ ಹಿಂದಷ್ಟೇ ಅಮೆರಿಕ ಅಧ್ಯಕ್ಷರು, ಉಕ್ರೇನ್‌ಗೆ ವಿಶೇಷ ಸಹಾಯ ಪ್ಯಾಕೇಜ್‌ನ ಘೋಷಣೆ ಮಾಡಿದ್ದರು. ಈಗಾಗಲೇ ಲಕ್ಷ ಲಕ್ಷ ಕೋಟಿ ರೂಪಾಯಿ ಸಹಾಯ ಮಾಡಿರುವ, ಅಮೆರಿಕದ ನಾಯಕರ ವರ್ತನೆಗೆ ಈಗಾಗಲೇ ರಷ್ಯಾ ರೊಚ್ಚಿಗೆದ್ದಿದೆ. ಈ ಬೆಳವಣಿಗೆ ಮಧ್ಯೆ ಉಕ್ರೇನ್ ಕೂಡ ತುಂಬಾ ಆಕ್ರೋಶದಿಂದ ರಷ್ಯಾ ವಿರುದ್ಧ ದಾಳಿ ಮಾಡುತ್ತಿದೆ. ಹೀಗೆ ಎರಡು ಕಡೆ ದಾಳಿ & ಪ್ರತಿದಾಳಿ ಜೋರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರಷ್ಯಾ ಕೂಡ ತನ್ನ ತಾಕತ್ ತೋರಿಸಿದೆ.

66 ಡ್ರೋನ್ ಉಡೀಸ್!
ಅಂದಹಾಗೆ ಕೆಲ ದಿನಗಳ ಹಿಂದೆ ದಕ್ಷಿಣ ರಷ್ಯಾ ಮೇಲೆ ಉಕ್ರೇನ್ ಸೇನೆ ಡ್ರೋನ್ ದಾಳಿ ನಡೆಸಿದೆ ಎಂಬ ಆರೋಪ ಮಾಡಿತ್ತು ರಷ್ಯಾ. ಈ ಬೆನ್ನಲ್ಲೇ ಪ್ರತೀಕಾರವಾಗಿ ರಷ್ಯಾ, ಉಕ್ರೇನ್‌ನ ಪ್ರಮುಖ ನಗರಗಳ ಮೇಲೆ ರಾತ್ರೋರಾತ್ರಿ ಕ್ಷಿಪಣಿ ಸುರಿಮಳೆಗರೆದು ಎಚ್ಚರಿಕೆ ನೀಡಿದೆ. ಈ ಪೈಕಿ ಇದೀಗ ಉಕ್ರೇನ್ ದೇಶಕ್ಕೆ ಸೇರಿದ, ಇಂಧನ ಮೂಲಸೌಕರ್ಯ ಘಟಕಗಳನ್ನೇ ಗುರಿಯಾಗಿಸಿ ಅಟ್ಯಾಕ್ ಮಾಡಿದೆ ರಷ್ಯಾ ಎನ್ನಲಾಗಿದೆ. ಮತ್ತೊಂದು ಕಡೆ ರಷ್ಯಾದ ದಕ್ಷಿಣ ಕ್ರಸ್ನೋದರ್ ಮೇಲೆ ತೂರಿ ಬಂದಿದ್ದ, ಉಕ್ರೇನ್‌ನ 66 ಡ್ರೋನ್ ಹೊಡೆದುರುಳಿಸಿತ್ತು ರಷ್ಯಾ ಸೇನೆ. ಈಗ ತನ್ನ ಮೇಲಿನ ದಾಳಿಗೆ ರಷ್ಯಾ ಸೇಡು ತೀರಿಸಿಕೊಂಡಿದೆ.
1 ಲಕ್ಷ 20 ಸಾವಿರ ಜನರ ಸಾವು?
ಉಕ್ರೇನ್ ವಿರುದ್ಧ ರಷ್ಯಾ ಸೇನೆ ದಿನದಿಂದ ದಿನಕ್ಕೆ ತನ್ನ ದಾಳಿಯನ್ನ ಹೆಚ್ಚಿಸುತ್ತಿದೆ ಹೀಗೆ ಇಬ್ಬರ ನಡುವೆ ಘೋರ ಕಾಳಗ ನಡೆಯುತ್ತಿದೆ. ಹೀಗೆ ಯುದ್ಧದಿಂದಾಗಿ ಇದುವರೆಗೆ 50,000 ನಾಗರಿಕರು ಮೃತಪಟ್ಟು, 70,000 ಉಕ್ರೇನ್ ಸೈನಿಕರು ಜೀವ ಬಿಟ್ಟಿದ್ದಾರೆ ಎನ್ನುವುದು ಉಕ್ರೇನ್ ಆರೋಪ. ಈ ಮೂಲಕ ಒಟ್ಟಾರೆ 1 ಲಕ್ಷ 20 ಸಾವಿರ ಉಕ್ರೇನ್ ಮೂಲದ ಜನರ ಪ್ರಾಣವೇ ಹೋಗಿದೆ ಅಂತಾ ಉಕ್ರೇನ್ ಆರೋಪ ಮಾಡುತ್ತಿದೆ. ಈ ಎಲ್ಲಾ ಸಂಕಷ್ಟದ ಮಧ್ಯೆ ಇದೀಗ ಉಕ್ರೇನ್ ವಿರುದ್ಧ ರಷ್ಯಾ ಮಿಲಿಟರಿ ಅತ್ಯಾಧುನಿಕ ಕ್ಷಿಪಣಿಗಳ ಮೂಲಕ ದಾಳಿ ನಡೆಸುತ್ತಿದೆ.












Click it and Unblock the Notifications